ಮಳೆಗೆ ತತ್ತರಿಸಿದ ಆಂಧ್ರ, ತೆಲಂಗಾಣ- 1 ಕೋಟಿ ದೇಣಿಗೆ ನೀಡಿದ ಜ್ಯೂ.ಎನ್‌ಟಿಆರ್

Public TV
1 Min Read

ಧಾರಾಕಾರ ಮಳೆಗೆ ಆಂಧ್ರ ಪ್ರದೇಶ ಮತ್ತು ತೆಲಂಗಾಣ (Andhra- Telangana Flood) ತತ್ತರಿಸಿದೆ. ಜನಜೀವನ ಅಸ್ತವ್ಯಸ್ತವಾಗಿದೆ. ಇದೀಗ ತನ್ನೂರಿನ ಜನರ ಸಂಕಷ್ಟಕ್ಕೆ ಜ್ಯೂ.ಎನ್‌ಟಿಆರ್ (Jr.Ntr) ನೆರವಾಗಿದ್ದಾರೆ. ಸಿಎಂ ಫಂಡ್‌ಗೆ ಒಂದು ಕೋಟಿ ರೂ. ದಾನ ಮಾಡಿ ನಟ ಮಾನವೀಯತೆ ಮೆರೆದಿದ್ದಾರೆ.

ಭಯಂಕರ ಮಳೆಗೆ ತತ್ತರಿಸಿರುವ ಆಂಧ್ರ ಪ್ರದೇಶ ಮತ್ತು ತೆಲಂಗಾಣ ಎರಡು ಕಡೆ 50 ಲಕ್ಷ ರೂ. ದೇಣಿಗೆ ನೀಡಿದ್ದಾರೆ. ಒಟ್ಟು ಒಂದು ಕೋಟಿ ರೂ. ದೇಣಿಗೆ ನೀಡುವ ಮೂಲಕ ಕಷ್ಟದಲ್ಲಿರುವ ಜನರ ನೆರವಿಗೆ ತಾರಕ್ ರಾಮ್ ಕೈಜೋಡಿಸಿದ್ದಾರೆ. ಇದನ್ನೂ ಓದಿ:ಬಾಲಿವುಡ್ ಸಿನಿಮಾ ಶೂಟಿಂಗ್‌ಗಾಗಿ ಹಂಪಿಗೆ ಬರಲಿದ್ದಾರೆ ರಶ್ಮಿಕಾ ಮಂದಣ್ಣ

ಅಂದಹಾಗೆ, ಉಡುಪಿ ಜಿಲ್ಲೆಯಲ್ಲಿ ಜ್ಯೂ.ಎನ್‌ಟಿಆರ್, ಕೃಷ್ಣಮಠ, ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ಕೊಟ್ಟು ಪೂಜೆ ಸಲ್ಲಿಸಿದ್ದರು. ಬಳಿಕ ಅಮ್ಮನ ಆಸೆ ತೀರಿಸಲು ಸೆ.2ರಂದು ಕುಂದಾಪುರದ ಕೆರಾಡಿ ಗ್ರಾಮದ ಮೂಡುಗಲ್ಲು ಕೇಶವನಾಥೇಶ್ವರ ಗುಹಾಂತರ ದೇವಸ್ಥಾನಕ್ಕೆ ಭೇಟಿ ನೀಡಿದರು.

Share This Article