ಸೂರ್ಯ ಜೊತೆ ನಟಿಸಲು 4 ಕೋಟಿ ಸಂಭಾವನೆ ಪಡೆದ ಪೂಜಾ ಹೆಗ್ಡೆ

Public TV
1 Min Read

ರಾವಳಿ ನಟಿ ಪೂಜಾ ಹೆಗ್ಡೆ (Pooja Hegde) ಸದ್ಯ ಬಾಲಿವುಡ್ ಮತ್ತು ತಮಿಳು ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ನಟಿಸುತ್ತಿರುವ ಸಿನಿಮಾ ಹಿಟ್ ಆಗದೇ ಇದ್ದರೂ ಪೂಜಾಗೆ ಇರುವ ಬೇಡಿಕೆಯೇನು ಕಮ್ಮಿಯಾಗಿಲ್ಲ. ಸದ್ಯ ಕಾಲಿವುಡ್ ನಟ ಸೂರ್ಯ ಜೊತೆ ನಟಿಸಲು ಸಂಭಾವನೆ ಹೆಚ್ಚಿಸಿಕೊಂಡಿದ್ದಾರೆ.

ಶಾಹಿದ್ ಕಪೂರ್ ಜೊತೆ ‘ದೇವ’ ಸಿನಿಮಾ, ಅಹಾನ್ ಶೆಟ್ಟಿ ಜೊತೆ ಸಂಕಿ ಸಿನಿಮಾದಲ್ಲಿ ನಟಿ ತೊಡಗಿಸಿಕೊಂಡಿದ್ದಾರೆ. ಈ ನಡುವೆ ತಮಿಳಿನ ನಟ ಸೂರ್ಯ (Actor Suriya) ಜೊತೆ ನಟಿಸುವ ಅವಕಾಶ ಪೂಜಾಗೆ ಸಿಕ್ಕಿದೆ.

ಇದುವರೆಗೂ 3.5 ಕೋಟಿ ರೂ. ಸಂಭಾವನೆ ಪಡೆಯುತ್ತಿದ್ದ ನಟಿ ಈಗ ಸೂರ್ಯ ನಟನೆಯ 44ನೇ (Suriya 44) ಸಿನಿಮಾದಲ್ಲಿ ನಟಿಸಲು 4 ಕೋಟಿ ರೂ.ಗೆ ಹೆಚ್ಚಿಸಿಕೊಂಡಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ:‘ನಿನಗಾಗಿ’ ಎನ್ನುತ್ತಾ ದಿವ್ಯಾ ಉರುಡುಗ ಹಿಂದೆ ಬಿದ್ದ ಕಿಶನ್ ಬಿಳಗಲಿ

ತೆಲುಗಿನಲ್ಲಿ ಅದ್ಯಾಕೋ ಪೂಜಾಗೆ ಅದೃಷ್ಟ ಖುಲಾಯಿಸುತ್ತಿಲ್ಲ. ಆದರೆ ಬಾಲಿವುಡ್‌ನಲ್ಲಿ ನಟಿಗೆ ಉತ್ತಮ ಅವಕಾಶಗಳೇ ಅರಸಿ ಬರುತ್ತಿವೆ. ಹಾಗಾಗಿ ಅವರು ಹೆಚ್ಚಿನ ಸಂಭಾವನೆಗೆ ಬೇಡಿಕೆ ಇಡುತ್ತಿದ್ದಾರೆ.

Share This Article