ಮಿರಾಜ್ ವಿಮಾನವನ್ನೇ ಬಳಸಿದ್ದು ಯಾಕೆ? ಅಂಥ ವಿಶೇಷತೆ ಅದರಲ್ಲಿ ಏನಿದೆ?

Public TV
3 Min Read

ಬೆಂಗಳೂರು: ಇಂದು ಭಾರತೀಯ ವಾಯು ಪಡೆ ಗಡಿ ನಿಯಂತ್ರಣ ರೇಖೆಯನ್ನು ದಾಟಿ ಪಾಕ್ ಆಕ್ರಮಿತ ಕಾಶ್ಮೀರ ಒಳಗಡೆ ನುಗ್ಗಿ ಉಗ್ರ ತರಬೇತಿ ಕ್ಯಾಂಪ್‍ಗಳ ಮೇಲೆ ದಾಳಿ ಮಾಡಿ ಪುಲ್ವಾಮ ಉಗ್ರರು ದಾಳಿಗೆ ಪ್ರತ್ಯುತ್ತರ ನೀಡಿದೆ. ಈ ದಾಳಿಯಲ್ಲಿ ಕೇಂದ್ರ ಬಿಂದುವಾಗಿದ್ದು ಮಿರಾಜ್ ಯುದ್ಧವಿಮಾನ. ಈ ವಿಮಾನದ ಮೂಲಕ ಬಾಂಬ್ ದಾಳಿ ನಡೆಸಿ ಜೈಷ್ ಸಂಘಟನೆಯ ಮೂರು ಪ್ರಮುಖ ಕೇಂದ್ರಗಳನ್ನು ಧ್ವಂಸ ಮಾಡಿದೆ.

ಮಿರಾಜ್-2000 ಯಾಕೆ ಬಳಸಲಾಯ್ತು?
ಮಿರಾಜ್-2000 ಜೆಟ್ ಹಾರಾಡುವಾಗ ಅದರಿಂದ ಹೊರಬರುವ ಇಂಧನದ ಹೊಗೆ ಕಡಿಮೆ ಇರುತ್ತದೆ. ಆದರಿಂದ ನೆಲದ ಮೇಲಿರುವ ಸೈನ್ಯಕ್ಕೆ ಇದನ್ನ ಪತ್ತೆ ಮಾಡಲು ಕಷ್ಟವಾಗುತ್ತೆ. ಅದರ ಡೆಲ್ಟಾ ಪ್ಲಾನ್ ಅತೀ ಕಡಿಮೆ ಹೊಗೆಯನ್ನು ಹೊರಹಾಕುತ್ತದೆ. ಈ ವಿಶೇಷತೆ ಇರುವುದರಿಂದಲೇ ಮಿರಾಜ್-2000 ಜೆಟ್ ಅನ್ನು ಭಾರತೀಯ ಸೇನೆ ಉಗ್ರರನ್ನು ಮಟ್ಟ ಹಾಕಲು ಬಳಸಿಕೊಂಡಿದೆ. ಈ ವಿಮಾನ ಪ್ರತಿ ಗಂಟೆಗೆ 900 ಕಿ.ಮೀ ವೇಗದಲ್ಲಿ ಹಾರಾಟ ನಡೆಸುವ ಸಾಮಥ್ರ್ಯವನ್ನು ಹೊಂದಿದೆ. ಮಿರಾಜ್ ಹೆಚ್ಚು ಶಸ್ತ್ರಾಸ್ತ್ರಗಳನ್ನು ಕೊಂಡೊಯ್ಯುವ ಸಾಮಥ್ರ್ಯವಿದೆ. ಈ ಕಾರಣಕ್ಕಾಗಿಯೇ ಮಿರಾಜ್-2000 ಭಾರತೀಯ ವಾಯ ಸೇನೆಯಲ್ಲಿರುವ ಅತ್ಯತ್ತಮ ಬಲಿಷ್ಠವಾದ ಯುದ್ಧವಿಮಾನವಾಗಿದೆ.

ಮಿರಾಜ್-2000 ಎಂದರೇನು?
ಫ್ರಾನ್ಸಿನ ಡಸಾಲ್ಟ್ ಕಂಪನಿ ನಿರ್ಮಿಸಿದ ಮಿರಾಜ್ 2000 ಬಹು-ಕಾರ್ಯ ನಿರ್ವಹಿಸುವ ಯುದ್ಧ ಫೈಟರ್ ಜೆಟ್. ಇದು 1984ರಿಂದ ಫ್ರೆಂಚ್ ವಾಯುಪಡೆಯೊಂದಿಗೆ ಕಾರ್ಯನಿರ್ವಹಿಸುತ್ತಿದೆ. ಪ್ರಸ್ತುತವಾಗಿ ಈ ವಿಶೇಷ ಜೆಟ್ ಭಾರತ, ಈಜಿಪ್ಟ್, ಗ್ರೀಸ್, ಪೆರು, ಕತಾರ್, ತೈವಾನ್ ಹಾಗೂ ಯುನೈಟೆಡ್ ಅರಬ್ ಎಮಿರೆಟ್ಸ್ ಭದ್ರತಾ ಪಡೆಯ ಭಾಗವಾಗಿದೆ.

ಇತಿಹಾಸವೇನು?
ಏಕ ವ್ಯಕ್ತಿ ಅಥವಾ ಇಬ್ಬರು ಪೈಲಟ್‍ಗಳು ಕೂರುವ ಸಾಮಥ್ರ್ಯ ಹೊಂದಿರುವ ಮಿರಾಜ್ ವಿಮಾನವನ್ನು ಮೊದಲ ಬಾರಿಗೆ 1984ರಲ್ಲಿ ಸೇರ್ಪಡೆಯಾಯಿತು. ಬಳಿಕ ಈ ಯುದ್ಧ ವಿಮಾನದಲ್ಲಿ ಇನ್ನೆರಡು ತಂತ್ರಜ್ಞಾನವನ್ನು ಅಭಿವೃದ್ಧಿ ಪಡಿಸಿ ಮಿರಾಜ್ 2000ಎನ್ ಹಾಗೂ ಮಿರಾಜ್ 2000ಡಿ ಯುದ್ಧ ವಿಮಾನವನ್ನು ತಯಾರಿಸಲಾಯಿತು. ಮಿರಾಜ್ 2000ಎನ್ ಅತ್ಯಂತ ವೇಗ ಹೊಂದಿರುವ ಹಾಗೂ ಎಲ್ಲಾ ಹವಾಮಾನದಲ್ಲೂ ಕಾರ್ಯ ನಿರ್ವಹಿಸುತ್ತದೆ. ಅಟೋಮ್ಯಟಿಕ್ ಆಗಿ ಲೇಸರ್ ಬಾಂಬ್ ಗಳನ್ನು ಟಾರ್ಗೆಟ್ ಸ್ಥಳಕ್ಕೆ ಹಾಕುವ ಸಾಮರ್ಥ್ಯ ಈ ವಿಮಾನಕ್ಕಿದೆ.

ಕಮಾಂಡರ್ ಮುರಳಿ ಅವರು ಪಬ್ಲಿಕ್ ಟಿವಿ ಜೊತೆ ಮಾತನಾಡಿ ಈ ವಿಮಾನದ ಜೊತೆಗಿನ ಅನುಭವವನ್ನು ಹಂಚಿಕೊಂಡಿದ್ದಾರೆ. ನಾನು ನನ್ನ ಪೂರ್ತಿ ವೃತ್ತಿ ಜೀವನವನ್ನು ಮಿರಾಜ್-2000ನಲ್ಲಿ ಕಳೆದಿದ್ದೇನೆ. 1984ರಿಂದ ನಾನು ನಿವೃತ್ತಿಯಾಗುವವರೆಗೂ ಮಿರಾಜ್-2000 ಜೆಟ್ ಚಲಾಯಿಸಿದ್ದೇನೆ. 1999ರ ಜೂನ್‍ನಲ್ಲಿ ನಡೆದ ಕಾರ್ಗಿಲ್ ಯುದ್ಧದಲ್ಲಿ ನಾವು ಮಿರಾಜ್-ಜೆಟ್ ಬಳಸಿಕೊಂಡಿದ್ದೇವು. ಮಿರಾಜ್-2000 ಅತ್ಯಾಂತ ಬಲಿಷ್ಠವಾದ ಯುದ್ಧ ವಿಮಾನ. ಇಂದು ಬೆಳಗ್ಗೆ ಪಾಕ್ ಉಗ್ರರ ಕ್ಯಾಂಪ್ ಮೇಲೆ ಬಾಂಬ್ ದಾಳಿ ಮಾಡಿರುವುದು ಕೇವಲ ಲೇಸರ್ ಗೈಡೆಡ್ ಬಾಂಬ್ ಸ್ಟ್ರೈಕ್ಸ್ ಮಾತ್ರ ಮಾಡಿಲ್ಲ. ಮೊದಲು ಹೆರಾನ್(ಇಸ್ರೇಲ್ ನಿರ್ಮಿತ ಮಾನವ ರಹಿತ ಸರ್ವೇಕ್ಷಣಾ ವಾಹನ) ಬಿಟ್ಟು ಯಾವ ಸ್ಥಳವನ್ನು ಟಾರ್ಗೆಟ್‍ಗೆ ಮಾಡಬೇಕು ಅಂತ ಪ್ಲಾನ್ ಮಾಡಿಕೊಳ್ಳಲಾಗಿತ್ತು. ಪ್ಲಾನ್ ಪ್ರಕಾರ ಇಂದು ಬೆಳಗ್ಗೆ ದೂರದಿಂದಲೇ ಟಾರ್ಗೆಟ್‍ಗೆ ಗುರಿ ಮಾಡಿ ಲೇಸರ್ ಗೈಡೆಡ್ ಬಾಂಬ್ ಹಾಕಿದ್ದೇವೆ ಎಂದು ತಿಳಿಸಿದರು.

ಸಾಮಾನ್ಯವಾಗಿ ಲೇಸರ್ ಬಾಂಬ್‍ಗಳು ಸುಮಾರು 500 ಕೆಜಿಕ್ಕಿಂತ ಹೆಚ್ಚು ತೂಕವನ್ನು ಹೊಂದಿರುತ್ತದೆ. ಇದು ಕೆಳಗೆ ಬಿದ್ದರೇ ಆ ಸ್ಥಳದಲ್ಲಿ ಬೂದಿ ಬಿಟ್ಟರೇ ಬೇರೇನೂ ಉಳಿಯುವುದಿಲ್ಲ. ಈ ದಾಳಿ ವೇಳೆ ಏರ್‍ಬಾರ್ನ್ ಅರ್ಲಿ ವಾರ್ನಿಂಗ್(ಎಇಡಬ್ಲ್ಯೂ) ಏರ್‌ಕ್ರಾಫ್ಟ್‌ ಬಳಕೆ ಮಾಡಿದ್ದೇವೆ. ಮುಜಫರಾಬಾದ್ ಬಳಿ ಗಿಲ್ಗಿಟ್ ಇದೆ. ಅಲ್ಲಿ ಪಾಕಿಸ್ತಾನ ಸೈನ್ಯದ ಕಚೇರಿಗಳು ಇವೆ. ನಾವು ನಡೆಸುತ್ತಿರುವ ದಾಳಿ ಪಾಕಿಸ್ತಾನಕ್ಕೆ ತಿಳಿಯದೇ ಇರಲು ಎಇಡಬ್ಲ್ಯೂ ಬಳಕೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *