ಭಾರೀ ಮಳೆಗೆ ಲಕ್ಷಾಂತರ ರೂ. ಮೌಲ್ಯದ ಶುಂಠಿ ಬೆಳೆ ನಾಶ- ರೈತ ಮಹಿಳೆ ಕಣ್ಣೀರು

Public TV
1 Min Read

ಮೈಸೂರು: ಜಿಲ್ಲೆಯಲ್ಲಿ ಭಾರೀ ಮಳೆಯಾಗುತ್ತಿದ್ದು, ಅನಾಹುತ ಎದುರಾಗಿದೆ. ಲಕ್ಷಾಂತರ ರೂ. ಮೌಲ್ಯದ ಶುಂಠಿ ಬೆಳೆ (Ginger Crop)  ನಾಶವಾಗಿದ್ದರಿಂದ ಇದೀಗ ರೈತ ಮಹಿಳೆ ಸಹಾಯಕ್ಕಾಗಿ ಕಣ್ಣೀರು ಹಾಕುತ್ತಿದ್ದಾರೆ.

ಸರಗೂರು ತಾಲೂಕು ಬಾಡಿಗೆ ಗ್ರಾಮದಲ್ಲಿ ರೈತ ಜವರಯ್ಯ ಹಾಗೂ ಪುಟ್ಟತಾಯಮ್ಮ ದಂಪತಿ ತಮ್ಮ ಜಮೀನಿನಲ್ಲಿ ಸುಮಾರು ನಾಲ್ಕು ಲಕ್ಷ ಖರ್ಚು ಮಾಡಿ ಶುಂಠಿ ಬೆಳೆ ಬೆಳೆದಿದ್ದರು. ಆದರೆ ಇದೀಗ ಭಾರೀ ಮಳೆಯಿಂದ ಜಮೀನಿನಲ್ಲಿ ನೀರು ನಿಂತಿದೆ. ಪರಿಣಾಮ ಈ ಬೆಳೆ ನಾಶವಾಗಿದೆ. ಇದನ್ನೂ ಓದಿ: ಕನ್ನಡದ ಹುಡುಗನ ಚಿತ್ರಕ್ಕೆ ಕಾನ್‍ ಚಿತ್ರೋತ್ಸವದಲ್ಲಿ ಮೊದಲ ಬಹುಮಾನ

ತಾವು ಬೆಳೆದ ಬೆಳೆ ಕಣ್ಣ ಮುಂದೆಯೇ ನಾಶವಾಗಿರುವುದರಿಂದ ಮನನೊಂದು ಜಮೀನಿನಲ್ಲಿ ನಿಂತು ಪುಟ್ಟತಾಯಮ್ಮ ಕಣ್ಣೀರು ಹಾಕಿದ್ದಾರೆ. ನೀವು ಬಂದು ಪರಿಸ್ಥಿತಿ ನೋಡಿ ಸೂಕ್ತ ಪರಿಹಾರ ನೀಡುವಂತೆ ಕೈ ಮುಗಿದು ಮನವಿ ಮಾಡಿಕೊಂಡಿದ್ದಾರೆ.

ಇತ್ತ ಪಿರಿಯಾಪಟ್ಟಣದಲ್ಲಿ ಹಲಗನಹಳ್ಳಿಯಲ್ಲಿ ಮಳೆಗೆ 4 ಎಕರೆ ತಂಬಾಕು ಬೆಳೆ ನಾಶವಾಗಿದೆ. ಕಳೆದ 15 ದಿನಗಳ ಹಿಂದೆ ರೈತ ನಾಟಿ ಮಾಡಿದ್ದರು. ಆದರೆ ಕಳೆದ ವಾರದಿಂದ ಸುರಿದ ಮಳೆಗೆ ತಂಬಾಕು ಕೊಚ್ಚಿ ಹೋಗಿದೆ.

Share This Article