ಹೆಚ್‌ಎನ್ ವ್ಯಾಲಿ ನೀರು ಶುದ್ಧೀಕರಣಕ್ಕೆ ಆಗ್ರಹ – ಇಂದು ಚಿಕ್ಕಬಳ್ಳಾಪುರ ನಗರ ಬಂದ್‌ಗೆ ಕರೆ

1 Min Read

ಚಿಕ್ಕಬಳ್ಳಾಪುರ: ಹೆಚ್‌ಎನ್ ವ್ಯಾಲಿ (HN Valley) ನೀರು ತೃತೀಯ ಹಂತದ ಶುದ್ಧೀಕರಣಕ್ಕೆ ಆಗ್ರಹಿಸಿ ಇಂದು ಚಿಕ್ಕಬಳ್ಳಾಪುರ (Chikkaballapura) ಬಂದ್‌ಗೆ ಕರೆ ನೀಡಲಾಗಿದೆ.

ಬಿಜೆಪಿ (BJP) ಮುಖಂಡ ಸಂದೀಪ್ ರೆಡ್ಡಿ ಬಂದ್‌ಗೆ ಕರೆ ಕೊಟ್ಟಿದ್ದಾರೆ. ಬಂದ್ ಕರೆ ಹಿನ್ನೆಲೆ ಬೆಳ್ಳಂಬೆಳಗ್ಗೆ ಪ್ರತಿಭಟನಾ ಮೆರವಣಿಗೆ ನಡೆಸಲಾಗುತ್ತಿದೆ. ಸಂದೀಪ್ ರೆಡ್ಡಿ ನೇತೃತ್ವದಲ್ಲಿ ನಗರದ ಬಿಬಿ ರಸ್ತೆಯಲ್ಲಿ ಮೆರವಣಿಗೆ ನಡೆಸಲಾಗುತ್ತಿದೆ. ಇದನ್ನೂ ಓದಿ: ನೆತನ್ಯಾಹು ಕ್ಷೇಮವಾಗಿದ್ದಾರೆ: ಪ್ರಧಾನಿ ಸಾವಿನ ವರದಿ ಸುಳ್ಳು ಎಂದ ಇಸ್ರೇಲ್‌

ಇನ್ನು ಬಂದ್ ಬೆಂಬಲಿಸಿ ಕನ್ನಡ ಪರ ಸಂಘಟನೆ ಕಾರ್ಯಕರ್ತರು ಕೂಡ ಸಾಥ್ ನೀಡಿದ್ದಾರೆ. ಅಲ್ಲದೇ ಬಂದ್ ಬೆಂಬಲಿಸಿ ಸಂದೀಪ್ ರೆಡ್ಡಿ ಬೆಂಬಲಿಗರು ಬೈಕ್ ರ‍್ಯಾಲಿ ನಡೆಸಿದ್ದಾರೆ. ಇದನ್ನೂ ಓದಿ: ಮಕಾಡೆ ಮಲಗಿದ ಭಾರತದ ಷೇರುಪೇಟೆ – ಹೂಡಿಕೆದಾರರ ನಿದ್ದೆಗೆಡಿಸಿದ ಮಧ್ಯಪ್ರಾಚ್ಯ ಯುದ್ಧ

Share This Article