ಗಡಿಭಾಗದಲ್ಲಿ ಜನಿಸಿದ ಮಗುವಿಗೆ ಬಾರ್ಡರ್ ಎಂದು ಹೆಸರಿಟ್ಟ ಹೆತ್ತವರು

Public TV
2 Min Read

ಇಸ್ಲಾಮಾಬಾದ್‌: ಗಡಿ ಭಾಗದಲ್ಲಿ ಜನಿಸಿದ ಗಂಡು ಮಗುವಿಗೆ ದಂಪತಿ ಬಾರ್ಡರ್ ಎಂದು ಹೆಸರಿಡುವ ಮೂಲವಾಗಿ ಸುದ್ದಿಯಾಗಿದ್ದಾರೆ.

ಪಂಜಾಬ್ ಪ್ರಾಂತ್ಯದ ರಾಜನ್‍ಪುರ್ ಜಿಲ್ಲೆಗೆ ಸೇರಿದ ಪೋಷಕರು, ನಿಂಬು ಬಾಯಿ ಮತ್ತು ಬಲಮ್ ರಾಮ್ ಅವರು ಭಾರತ -ಪಾಕ್ ಗಡಿಯಲ್ಲಿ ಜನಿಸಿದ ಕಾರಣ ಮಗುವಿಗೆ ಈ ಹೆಸರನ್ನು ಇಡಲಾಗಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಅರಬ್ಬಿ ಸಮುದ್ರದಲ್ಲಿ ಹತ್ತು ಮೀಟರ್ ಆಳದಲ್ಲಿ ಸ್ಕೂಬಾ ಡೈವ್ ಮಾಡಿದ್ರು ಅಪ್ಪು

ಲಾಕ್‍ಡೌನ್‍ಗೂ ಮುನ್ನ ತನ್ನ ಸಂಬಂಧಿಕರನ್ನು ಭೇಟಿ ಮಾಡುವುದರ ಜೊತೆಗೆ ತೀರ್ಥಯಾತ್ರೆಗೆ 98 ಮಂದಿ ನಾಗರಿಕರೊಂದಿಗೆ ಭಾರತಕ್ಕೆ ಬಂದಿದ್ದರು. ಇವರು ದಾಖಲೆಗಳ ಕೊರತೆಯಿಂದಾಗಿ ಮನೆಗೆ ಮರಳಲು ಸಾಧ್ಯವಾಗಲಿಲ್ಲ. ಕಳೆದ 71 ದಿನಳಿಂದ ಇತರ 97 ಪಾಕಿಸ್ತಾನಿ ಪ್ರಜೆಗಳೊಂದಿಗೆ ಅಟಾರಿ ಗಡಿಯಲ್ಲಿ ಸಿಲುಕಿಕೊಂಡಿದ್ದಾರೆ. ಇವರು ತಮ್ಮ ಸ್ವಗ್ರಾಮಕ್ಕೆ ತೆರಳವುದಕ್ಕೆ ಮೂಲ ದಾಖಲೆಗಳು ಇಲ್ಲದ ಕಾರಣ ಭಾರತ-ಪಾಕ್ ಗಡಿ ಭಾಗವಾದ ಅತ್ತಾರಿಯಲ್ಲಿ ಟೆಂಟ್‍ಗಳನ್ನು ಹಾಕಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಇದನ್ನೂ ಓದಿ: ಹತ್ತು ವರ್ಷ ಹಾಸನ ಜಿಲ್ಲೆಗೆ ಎರಡು ಪಕ್ಷಗಳ ಕೊಡುಗೆ ಏನು: ರೇವಣ್ಣ ಪ್ರಶ್ನೆ

ಆಗ ನಿಂಬು ಬಾಯಿ ತುಂಬು ಗರ್ಭಿಣಿಯಾಗಿದ್ದು, ಡಿಸೆಂಬರ್ 2ರಂದು ಹೆರಿಗೆ ನೋವು ಕಾಣಿಸಿಕೊಂಡಿದೆ. ಪಕ್ಕದ ಪಂಜಾಬ್ ಗ್ರಾಮಗಳಿಂದ ಕೆಲವು ಮಹಿಳೆಯರು ನಿಂಬು ಬಾಯಿಗೆ ಹೆರಿಗೆಗೆ ಸಹಾಯ ಮಾಡಲು ಬಂದಿದ್ದರು. ಸ್ಥಳೀಯರು ಹೆರಿಗೆಗೆ ವೈದ್ಯಕೀಯ ಸೌಲಭ್ಯಗಳ ಜೊತೆಗೆ ಇತರ ಸಹಾಯವನ್ನೂ ಮಾಡಿದರು. ಆಗ ನಿಂಬು ಬಾಯಿಗೆ ಗಂಡು ಮಗು ಜನಿಸಿದೆ. ಈ ಮಗುವಿಗೆ ಪೋಷಕರು ಬಾರ್ಡರ್ ಎಂದು ನಾಮಕರಣ ಮಾಡಿದ್ದಾರೆ.

ಇನ್ನೊಬ್ಬ ಪಾಕಿಸ್ತಾನಿ ಪ್ರಜೆ ಲಗ್ಯಾ ರಾಮ್ ದಂಪತಿಗೆ 2020 ರಲ್ಲಿ ಜೋಧ್‍ಪುರದಲ್ಲಿ ಮಗು ಜನಿಸಿತ್ತು. ಭಾರತದಲ್ಲಿ ಜನಿಸಿದ್ದ ಕಾರಣ ಆ ಮಗುವಿಗೆ ಭರತ್ ಎಂದು ನಾಮಕರಣ ಮಾಡಿದ್ದರು. ಲಗ್ಯಾ ರಾಮ್ ಜೋಧ್‍ಪುರದಲ್ಲಿರುವ ತನ್ನ ಸಹೋದರನನ್ನು ಭೇಟಿಯಾಗಲು ಬಂದಿದ್ದರು. ಆದರೆ ಅವರು ಸಹ ಅತ್ತಾರಿ ಗಡಿಯಲ್ಲೇ ಸಿಲುಕೊಂಡಿದ್ದಾರೆ.

ಇವರೆಲ್ಲರೂ ರಹೀಮ್ ಯಾರ್ ಖಾನ್ ಮತ್ತು ರಾಜನ್‍ಪುರ ಸೇರಿದಂತೆ ಪಾಕಿಸ್ತಾನದ ವಿವಿಧ ಜಿಲ್ಲೆಗಳಿಗೆ ಸೇರಿದವರಾಗಿದ್ದಾರೆ. ಪಾಕಿಸ್ತಾನಿ ರೇಂಜರ್‌ಗಳು ತಮ್ಮ ಪ್ರಜೆಗಳನ್ನು ಕರೆಸಿಕೊಳ್ಳಲು ನಿರಾಕರಿಸಿದ್ದರಿಂದ ಅವರು ಪ್ರಸ್ತುತ ಅತ್ತಾರಿ ಗಡಿಯಲ್ಲಿ ಟೆಂಟ್‍ನಲ್ಲಿ ವಾಸಿಸುತ್ತಿದ್ದಾರೆ. ಈ ಕುಟುಂಬಗಳು ಅತ್ತಾರಿ ಅಂತಾರಾಷ್ಟ್ರೀಯ ಚೆಕ್ ಪೋಸ್ಟ್ ಬಳಿಯ ಪಾರ್ಕಿಂಗ್ ಸ್ಥಳದಲ್ಲಿ ಬೀಡುಬಿಟ್ಟಿವೆ. ಸ್ಥಳೀಯರು ಇವರಿಗೆ ಮೂರು ಹೊತ್ತಿನ ಊಟ, ಔಷಧ, ಬಟ್ಟೆ ನೀಡಿ ಮಾನವೀಯತೆ ಮೆರೆಯುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *