ಮೀನು ಖಾದ್ಯ ಪ್ರಿಯರಿಗಾಗಿ ರುಚಿಯಾದ ತಂದೂರಿ ಫಿಶ್ ರೆಸಿಪಿ

Public TV
2 Min Read

ನೀವು ಮೀನು ಖಾದ್ಯ ಪ್ರಿಯರಾಗಿದ್ದರೆ ಒಮ್ಮೆ ನೀವು ಕೈಯಾರೆ ಮಾಡಿ ರುಚಿ ನೋಡಲೇ ಬೇಕಾದ ರೆಸಿಪಿಯೊಂದನ್ನು ನಾವು ಹೇಳಿಕೊಡುತ್ತೇವೆ. ತಂದೂರಿ ಫಿಶ್ ರೆಸಿಪಿ ಮಸಾಲೆಯುಕ್ತವಾಗಿದ್ದು, ನೀವಿದನ್ನೊಮ್ಮೆ ಸವಿದರೆ ಮತ್ತೆ ಮತ್ತೆ ಬೇಕೆನ್ನುತ್ತೀರಿ. ರುಚಿಯಾದ ತಂದೂರಿ ಫಿಶ್ (Tandoori Fish) ಮಾಡುವ ಸುಲಭ ವಿಧಾನ ಇಲ್ಲಿದೆ.

ಬೇಕಾಗುವ ಪದಾರ್ಥಗಳು:
ಮೀನು – 500 ಗ್ರಾಂ (ಮೂಳೆಗಳಿಲ್ಲದ, ತುಂಡುಗಳಾಗಿ ಕತ್ತರಿಸಿದ ಮೀನನ್ನು ಬಳಸಿ)
ತುರಿದ ಬೆಳ್ಳುಳ್ಳಿ – 8
ತುರಿದ ಶುಂಠಿ – 1 ಇಂಚು
ಜೀರಿಗೆ ಪುಡಿ – ಅರ್ಧ ಟೀಸ್ಪೂನ್
ಉಪ್ಪು – 1 ಟೀಸ್ಪೂನ್
ಕಡಲೆ ಹಿಟ್ಟು – 1 ಟೀಸ್ಪೂನ್
ಹೆಚ್ಚಿದ ಕೊತ್ತಂಬರಿ ಸೊಪ್ಪು – 50 ಗ್ರಾಂ
ನಿAಬೆ ರಸ – 2 ಟೀಸ್ಪೂನ್
ಕೆಂಪು ಮೆಣಸಿನ ಪುಡಿ – 1 ಟೀಸ್ಪೂನ್
ಗರಂ ಮಸಾಲಾ – ಅರ್ಧ ಟೀಸ್ಪೂನ್
ಎಣ್ಣೆ – 50 ಎಂಎಲ್
ಮೊಸರು – 100 ಗ್ರಾಂ ಇದನ್ನೂ ಓದಿ: ನಾಲಿಗೆಯ ರುಚಿ ಹೆಚ್ಚಿಸುವ ಚಿಕನ್ ಹಾಟ್ ಆ್ಯಂಡ್ ಸೋರ್ ಸೂಪ್ ರೆಸಿಪಿ

ಮಾಡುವ ವಿಧಾನ:
* ಮೊದಲಿಗೆ ಒಂದು ಪ್ಯಾನ್ ತೆಗೆದುಕೊಂಡು, ಅದರಲ್ಲಿ ಸ್ವಲ್ಪ ಎಣ್ಣೆ ಬಿಸಿ ಮಾಡಿ, ಕಡಲೆ ಹಿಟ್ಟನ್ನು ಸೇರಿಸಿ ಪರಿಮಳ ಬರುವವರೆಗೆ ಹುರಿಯಿರಿ. ಬಳಿಕ ಅದನ್ನು ಪಕ್ಕಕ್ಕಿಡಿ.
* ಒಂದು ದೊಡ್ಡ ಪಾತ್ರೆ ತೆಗೆದುಕೊಂಡು, ಅದರಲ್ಲಿ ಉಳಿದ ಎಣ್ಣೆ, ಕೆಂಪು ಮೆಣಸಿನ ಪುಡಿ, ಜೀರಿಗೆ ಪುಡಿ, ಗರಂ ಮಸಾಲೆ ಪುಡಿ, ನಿಂಬೆ ರಸ, ಬೆಳ್ಳುಳ್ಳಿ, ಶುಂಠಿ, ಕೊತ್ತಂಬರಿ ಸೊಪ್ಪು ಹಾಗೂ ಉಪ್ಪು ಸೇರಿಸಿ ಮಿಶ್ರಣ ಮಾಡಿ.
* ಬಳಿಕ ಮೊಸರು ಸೇರಿಸಿ ದಪ್ಪನೆಯ ಮಿಶ್ರಣ ತಯಾರಿಸಿ.
* ಈಗ ಮೀನಿನ ತುಂಡುಗಳನ್ನು ಮಿಶ್ರಣಕ್ಕೆ ಹಾಕಿ ಮ್ಯಾರಿನೇಟ್ ಮಾಡಿ.
* ಮಸಾಲೆ ಮೀನಿನ ತುಂಡುಗಳಿಗೆ ಸಂಪೂರ್ಣವಾಗಿ ಕೋಟ್ ಆಗಿದೆಯೇ ಎಂಬುದನ್ನು ಖಚಿತಪಡಿಸಿಕೊಂಡು, ಬಳಿಕ 1 ಗಂಟೆ ಪಕ್ಕಕ್ಕಿಡಿ.
* ಈಗ ಓವನ್ ಅನ್ನು 200 ಡಿಗ್ರಿ ಸೆಲ್ಸಿಯಸ್‌ಗೆ ಮೊದಲೇ ಕಾಯಿಸಿ. ಮ್ಯಾರಿನೇಟ್ ಮಾಡಿದ ಮೀನಿನ ತುಂಡುಗಳನ್ನು ಬೇಕಿಂಗ್ ಪಾತ್ರೆ ಮೇಲಿರಿಸಿ, 10-15 ನಿಮಿಷ ಬೇಯಿಸಿ.
* ಈ ನಡುವೆ ಒಮ್ಮೆ ತಿರುವಿ ಹಾಕಿ ಮತ್ತೆ ಬೇಯಿಸಿಕೊಳ್ಳಿ.
* ಇದೀಗ ತಂದೂರಿ ಫಿಶ್ ರೆಡಿಯಾಗಿದ್ದು, ಪುದೀನ ಚಟ್ನಿಯೊಂದಿಗೆ ಸವಿಯಿರಿ. ಇದನ್ನೂ ಓದಿ: ಹೀಗೊಮ್ಮೆ ಮಾಡಿ ನೋಡಿ – ಕ್ರಿಸ್ಪಿ ಸಿಗಡಿ ಫ್ರೈ

Live Tv
[brid partner=56869869 player=32851 video=960834 autoplay=true]

Join our Whatsapp group by clicking the below link
https://chat.whatsapp.com/E6YVEDajTzH06LOh77r25k

Share This Article
Leave a Comment

Leave a Reply

Your email address will not be published. Required fields are marked *