ಬಾಳೆಕಾಯಿಯ ಸಿಪ್ಪೆಯಿಂದ ಮಾಡ್ಬೋದು ರುಚಿಕರ ಚಟ್ನಿ

By
1 Min Read

ಬಾಳೆಕಾಯಿಯ ಸಿಪ್ಪೆ ಎಂದಿಗೂ ಅಡುಗೆಯಲ್ಲಿ ಉಪಯೋಗಕ್ಕೆ ಬರಲ್ಲ ಎಂದು ಹೆಚ್ಚಿನವರು ಅಂದುಕೊಂಡಿರಬಹುದು. ಆದರೆ ಇದೇ ಸಿಪ್ಪೆ ಬಳಸಿ ರುಚಿಕರವಾದ ಚಟ್ನಿ ಮಾಡಬಹುದು. ಬಾಳೆಕಾಯಿ ಅಡುಗೆಯಲ್ಲಿ ಯಾವಾಗಲೂ ಉಪಯೋಗಕ್ಕೆ ಬರುತ್ತದೆ. ಪಲ್ಯ ಇಲ್ಲವೇ ಚಿಪ್ಸ್‌ಗಳನ್ನು ತಯಾರಿಸಿರುತ್ತೀರಿ. ಇನ್ನು ಮುಂದೆ ಅದರ ಸಿಪ್ಪೆಯನ್ನು ಎಸೆಯದೇ ಒಮ್ಮೆ ಚಟ್ನಿಯೂ ಟ್ರೈ ಮಾಡಿ ನೋಡಿ.

ಬೇಕಾಗುವ ಪದಾರ್ಥಗಳು:
ಬಾಳೆಕಾಯಿ ಸಿಪ್ಪೆ – 1 ಕಪ್
ಜೀರಿಗೆ – 1 ಟೀಸ್ಪೂನ್
ಒಣ ಕೆಂಪು ಮೆಣಸಿನಕಾಯಿ – 3
ಅರಿಶಿನ ಪುಡಿ – 1 ಟೀಸ್ಪೂನ್
ನೀರು – 1 ಕಪ್
ಹುಣಿಸೆ ಹಣ್ಣಿನ ಪೇಸ್ಟ್ – 1 ಟೀಸ್ಪೂನ್
ಉಪ್ಪು – ರುಚಿಗೆ ತಕ್ಕಷ್ಟು
ಸಕ್ಕರೆ – 1 ಟೀಸ್ಪೂನ್
ಎಣ್ಣೆ – ಅರ್ಧ ಟೀಸ್ಪೂನ್ ಇದನ್ನೂ ಓದಿ: ನೆಗಡಿ, ಕೆಮ್ಮು ಕಡಿಮೆ ಮಾಡುತ್ತೆ ಶುಂಠಿ ಬೆಳ್ಳುಳ್ಳಿ ಸೂಪ್

ಮಾಡುವ ವಿಧಾನ :
* ಮೊದಲಿಗೆ ಬಾಳೆಕಾಯಿಯ ಸಿಪ್ಪೆಯನ್ನು ಅರಿಶಿನ ನೀರಿನಲ್ಲಿ 5 ನಿಮಿಷ ನೆನೆಸಿಡಿ.
* ಬಳಿಕ 1 ಕಪ್ ನೀರಿನೊಂದಿಗೆ ಪ್ರೆಷರ್ ಕುಕ್ಕರ್‌ನಲ್ಲಿ 1 ಸೀಟಿ ಬರುವವರೆಗೆ ಬೇಯಿಸಿಕೊಳ್ಳಿ.
* ಒಂದು ಪ್ಯಾನ್ ತೆಗೆದುಕೊಂಡು ಎಣ್ಣೆ ಬಿಸಿ ಮಾಡಿ, ಜೀರಿಗೆ, ಮೆಣಸಿನಕಾಯಿ ಹಾಕಿ 1 ನಿಮಿಷ ಹುರಿಯಿರಿ.
* ಬಳಿಕ ಬಾಳೆಕಾಯಿಯ ಸಿಪ್ಪೆ ಸೇರಿಸಿ ಡ್ರೈ ಆಗುವವರೆಗೆ 3-4 ನಿಮಿಷ ಹುರಿದುಕೊಳ್ಳಿ.
* ಬಳಿಕ ಉರಿಯನ್ನು ಆಫ್ ಮಾಡಿ, ತಣ್ಣಗಾಗಿಸಿ.
* ಈಗ ಮಿಕ್ಸರ್ ಜಾರ್‌ನಲ್ಲಿ ಹುರಿದ ಬಾಳೆಕಾಯಿ ಸಿಪ್ಪೆ, ಹುಣಸೆಹಣ್ಣಿನ ಪೇಸ್ಟ್, ಸಕ್ಕರೆ, ಉಪ್ಪು ಸೇರಿಸಿ ಚೆನ್ನಾಗಿ ರುಬ್ಬಿಕೊಳ್ಳಿ.
* ಇದೀಗ ಬಾಳೆಕಾಯಿ ಸಿಪ್ಪೆಯ ಚಟ್ನಿ ತಯಾರಾಗಿದ್ದು, ಊಟ ಅಥವಾ ಯಾವುದೇ ತಿಂಡಿಯೊಂದಿಗೆ ಆನಂದಿಸಿ. ಇದನ್ನೂ ಓದಿ: ಟ್ರೈ ಮಾಡಿ ಕಾಬೂಲ್ ಕಡಲೆಯ ಟೇಸ್ಟಿ ಉಪ್ಪಿನಕಾಯಿ ರೆಸಿಪಿ

Web Stories

Share This Article
ಮಳೆಗಾಲದಲ್ಲಿ ಪಡ್ಡೆಗಳ ಮೈಚಳಿ ಬಿಡಿಸಿದ ತಮನ್ನಾ ಹಾಟ್‌ ಲುಕ್‌ ಯೋಗ ದಿನದಂದು ನಟಿ ಪ್ರಣಿತಾ ಯೋಗ… ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್