ನಿಷೇಧದ ನಡುವೆಯೂ ಪಟಾಕಿ ಸದ್ದು- ಅತಿಯಾದ ವಾಯುಮಾಲಿನ್ಯದಿಂದ ಉಸಿರಾಟಕ್ಕೂ ತೊಂದರೆ

Public TV
1 Min Read

ನವದೆಹಲಿ: ದೀಪಾವಳಿಯಂದು ನಿಷೇಧ ಹೊರತಾಗಿಯೂ ರಾಷ್ಟ್ರ ರಾಜಧಾನಿಯಲ್ಲಿ ಪಟಾಕಿ (Diwali Cracker) ಸಿಡಿಸಲಾಗಿದೆ. ಇದರಿಂದ ವಾಯು ಗುಣಮಟ್ಟ ತೀವ್ರ ಕುಸಿತವಾಗಿದ್ದು, ಜನರಿಗೆ ಉಸಿರಾಟದ ಸಮಸ್ಯೆಗಳು ಎದುರಾಗುತ್ತಿವೆ.

ದೆಹಲಿಯ (Delhi) ವಾಯು ಗುಣಮಟ್ಟ ಸೂಚ್ಯಂಕವು (AQI) ಇಂದು ಬೆಳಗ್ಗೆ 6 ಗಂಟೆಗೆ 323 ರಷ್ಟಿತ್ತು ಎಂದು ಸಿಸ್ಟಮ್ ಆಫ್ ಏರ್ ಕ್ವಾಲಿಟಿ ಮತ್ತು ಹವಾಮಾನ ಮುನ್ಸೂಚನೆ ಮತ್ತು ಸಂಶೋಧನೆ (SAFAR) ತೋರಿಸಿದೆ. ನೆರೆಯ ಗುರುಗ್ರಾಮ್, ನೋಯ್ಡಾ ಮತ್ತು ಫರಿದಾಬಾದ್‌ನಲ್ಲಿಯೂ ಗಾಳಿಯ ಗುಣಮಟ್ಟವು ಅತ್ಯಂತ ಕಳಪೆ ಮಟ್ಟಕ್ಕೆ ತಲುಪಿದೆ. ದೀಪಾವಳಿಯಿಂದಾಗಿ ಅನುಮತಿಸಿದ್ದ ಡೆಸಿಬಲ್ ಮಿತಿಗಳನ್ನು ಮೀರಿ ಪಟಾಕಿ ಸಿಡಿಸಲಾಗಿದೆ. ಇದರಿಂದಾಗಿ ಸಾರ್ವಜನಿಕರ ಉಸಿರಾಟಕ್ಕೂ ತೊಂದರೆಯಾಗುತ್ತಿದೆ.

ಆದಾಗ್ಯೂ ಹಿಂದಿನ ವರ್ಷಗಳಿಗೆ ಹೋಲಿಸಿದರೆ ಈ ಬಾರಿ ವಾಯುಗುಣಮಟ್ಟ ಕಳಪೆಯಾಗಿರುವುದು ಕಡಿಮೆ. ಈ ಬಾರಿ ದೀಪಾವಳಿಯಲ್ಲಿ (Dewali) ಕಳೆದ 24 ಗಂಟೆಯಲ್ಲಿ ಎಕ್ಯೂಐ 312 ಮಾತ್ರ ಇದೆ. 2021ರಲ್ಲಿ 382 ಎಕ್ಯೂಐ, 2020ರಲ್ಲಿ 414 ಎಕ್ಯೂಐ, 2019ರಲ್ಲಿ 337 ಎಕ್ಯೂಐ ಇತ್ತು. ಆದರೆ ಈ ಬಾರಿ 312 ಎಕ್ಯೂಐ ಇದೆ ಎಂದು ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿ (CPCB) ಹೇಳಿದೆ. ಇದನ್ನೂ ಓದಿ: ಪಟಾಕಿ ಸಿಡಿತದಿಂದ ಹೈದರಾಬಾದ್‍ನಲ್ಲಿ 24 ಮಂದಿ ಕಣ್ಣಿಗೆ ಗಾಯ

ಸಾಮಾನ್ಯವಾಗಿ ವಾಯುಗುಣಮಟ್ಟ ಸೂಚ್ಯಂಕ 50ರ ನಡುವೆ ಇದ್ದರೆ ಉತ್ತಮ, 51 ರಿಂದ 100 ತೃಪ್ತಿದಾಯಕ, 101 ರಿಂದ 200 ಮಧ್ಯಮ, 201 ರಿಂದ 300 ಕಳಪೆ, 301 ರಿಂದ 400 ಅತ್ಯಂತ ಕಳಪೆ, 401 ರಿಂದ 500 ತೀವ್ರ ಕಳಪೆ ಎಂದು ಅಂದಾಜಿಸಲಾಗುತ್ತದೆ. ಇದನ್ನೂ ಓದಿ: ಪಾಕ್ ಮಾಜಿ ಪ್ರಧಾನಿ ಇಮ್ರಾನ್‌ಖಾನ್ ಚುನಾವಣೆಗೆ ಕೋರ್ಟ್ ಗ್ರೀನ್ ಸಿಗ್ನಲ್

ವಾಯು ಮಾಲಿನ್ಯದಿಂದಾಗಿ ದೆಹಲಿ ಸರ್ಕಾರ ಪಟಾಕಿ ನಿಷೇಧಿಸಿದೆ. ಆದೇಶ ಉಲ್ಲಂಘನೆ ಮಾಡಿದವರಿಗೆ ದಂಡ ಹಾಗೂ 6 ತಿಂಗಳ ಶಿಕ್ಷೆ ವಿಧಿಸಲು ಮುಂದಾಗಿದೆ. ಆದರೆ ಸುಪ್ರೀಂ ಕೋರ್ಟ್ ಪಟಾಕಿ ನಿಷೇಧವನ್ನು ತೆಗೆದುಹಾಕಿತ್ತು.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *