ಗೆಳೆಯನಿಗಾಗಿ ಆತನ ಮಗನನ್ನೇ ಕೊಂದು ಮಂಚದಡಿಯಲ್ಲಿ ಬಚ್ಚಿಟ್ಟಳು!

By
1 Min Read

ನವದೆಹಲಿ: ಬಾಯ್‍ಫ್ರೆಂಡ್‍ನ (Boyfriend) 11 ವರ್ಷದ ಮಗನನ್ನು ಕೊಂದು ಮಂಚಡಿಯಲ್ಲಿ ಬಚ್ಚಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ 24 ವರ್ಷದ ಯುವತಿಯನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತಳನ್ನು ಪೂಜಾ ಎಂದು ಗುರುತಿಸಲಾಗಿದೆ. ಈಕೆ ಮಲಗಿದ್ದ ಸಂದರ್ಭದಲ್ಲಿ ಅಪ್ರಾಪ್ತನನ್ನು ಕತ್ತು ಹಿಸುಕಿ ಕೊಂದಿದ್ದಾಳೆ. ನಂತರ ಮಂಚದ ಕೆಳಗಡೆ ಇರುವ ಬಾಕ್ಸ್ ನಲ್ಲಿ ಶವವಿಟ್ಟು ಅಲ್ಲಿಂದ ಕಾಲ್ಕಿತ್ತಿದ್ದಾಳೆ.

ಪೂಜಾಳನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಆಕೆ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾಳೆ ಎಂದು ಪೊಲಿಸರು ತಿಳಿಸಿದ್ದಾರೆ. ಪೂಜಾ ಮೃತ ಬಾಲಕನ ತಂದೆ ಜಿತೇಂದರ್ ಜೊತೆ ಲಿವ್-ಇನ್-ರಿಲೇಶನ್‍ಶಿಪ್‍ನಲ್ಲಿದ್ದಳು. ಜಿತೇಂದರ್‍ಗೆ 11 ವರ್ಷದ ಮಗನಿರುವ ಕಾರಣ ಆತ ತನ್ನ ಪತ್ನಿಗೆ ವಿಚ್ಛೇದನ ನೀಡಲು ನಿರಾಕರಿಸಿದನು. ಇದರಿಂದ ಸಿಟ್ಟಿಗೆದ್ದಿರುವ ಪೂಜಾ ಬಾಲಕನನ್ನೇ ಮುಗಿಸಲು ಪ್ಲಾನ್ ಮಾಡಿದ್ದಾಳೆ.

ಅಂತೆಯೇ ಮಲಗಿದ್ದ ಸಂದರ್ಭದಲ್ಲಿ ಬಾಲಕನನ್ನು ಕತ್ತು ಹಿಸುಕಿ ಕೊಲೆ ಮಾಡಿನಂತರ ಪರಾರಿಯಾಗಿದ್ದಾಳೆ. ಇದೀಗ ಪೊಲೀಸರು ಆಕೆಯನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಸತ್ಯ ಬಯಲಾಗಿದೆ. ಮೃತ ಬಾಲಕನ ತಂದೆಯೊಂದಿಗೆ ಪೂಜಾ ವಿವಾಹವಾಗಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ವಿದ್ಯುತ್ ಬಿಲ್ ನೀಡಲು ತೆರಳಿದ್ದ ನೌಕರನ ಕೊಲೆಗೆ ಯತ್ನ- ಆರೋಪಿ ಅರೆಸ್ಟ್

ಜಿತೇಂದರ್ ಈಗಾಗಲೇ ಮದುವೆಯಾಗಿದ್ದು, ಪೂಜಾಗೆ ತನ್ನ ಮೊದಲ ಪತ್ನಿಯಿಂದ ವಿಚ್ಛೇದನ ಪಡೆಯುವ ಭರವಸೆ ನೀಡಿದ್ದನು. ಆದರೆ ದಿನಕಳೆದಂತೆ ಆತ ಡಿವೋರ್ಸ್ ಪಡೆಯಲು ನಿರಾಕರಿಸಿದನು. ಅಲ್ಲದೆ ಜಿತೇಂದರ್ ತನ್ನ ಮೊದಲ ಹೆಂಡತಿಯೊಂದಿಗೆ ವಾಸಿಸಲು ಪುನರಾರಂಭಿಸಿದರು. ಇದೇ ಪುತ್ರನ ಕೊಲೆಗೆ ಕಾರಣವಾಯಿತು ಎಂದು ಅವರು ವಿವರಿಸಿದ್ದಾರೆ.

Web Stories

Share This Article
ಮಳೆಗಾಲದಲ್ಲಿ ಪಡ್ಡೆಗಳ ಮೈಚಳಿ ಬಿಡಿಸಿದ ತಮನ್ನಾ ಹಾಟ್‌ ಲುಕ್‌ ಯೋಗ ದಿನದಂದು ನಟಿ ಪ್ರಣಿತಾ ಯೋಗ… ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್