ನವದೆಹಲಿ: ರಾಷ್ಟ್ರ ರಾಜಧಾನಿ ಹಾಗೂ ಎನ್‌ಸಿಆರ್‌ನ ಹಲವೆಡೆ ಭಾರೀ ಮಳೆಯಾಗುತ್ತಿದ್ದು, ಭಾರತೀಯ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ (Yellow Alert) ಘೋಷಿಸಿದೆ.
ಐಎಂಡಿ ಪ್ರಕಾರ, ಧೂಳು, ಬಿರುಗಾಳಿ ಸೇರಿದಂತೆ ಸಾಧಾರಣ ಮಳೆಯಾಗುವ ಸಾಧ್ಯತೆಯಿದ್ದು, ದೆಹಲಿಯ ಉತ್ತರ, ವಾಯುವ್ಯ, ಮಧ್ಯ ಹಾಗೂ ದಕ್ಷಿಣ, ಗುರುಗ್ರಾಮ್ ಮತ್ತು ಫರಿದಾಬಾದ್‌ನಲ್ಲಿ ಮಳೆಯಾಗಲಿದೆ ಎಂದು ತಿಳಿಸಿದೆ. ಇದನ್ನೂ ಓದಿ: ನಿಂತಿದ್ದ ಆಟೋ ಜಖಂಗೊಳಿಸಿ ಓಡಿಹೋದ ಪುಂಡಾನೆ – ಮೊಬೈಲ್‌ನಲ್ಲಿ ವೀಡಿಯೋ ಸೆರೆ
ದೆಹಲಿಯಲ್ಲಿ ತಾಪಮಾನವು 32° ಸೆಲ್ಸಿಯಸ್ ಮತ್ತು 34° ಸೆಲ್ಸಿಯಸ್ ನಡುವೆ ಗರಿಷ್ಠ ಮಟ್ಟವನ್ನು ತಲುಪಲಿದ್ದು, ಕನಿಷ್ಠ 20.4° ಸೆಲ್ಸಿಯಸ್‌ಗೆ ಇಳಿಯುವ ಸಾಧ್ಯತೆ ಇದೆ. ಮೀರತ್, ಬಾಗ್‌ಪತ್, ಮುಜಫರ್‌ನಗರ, ಸಹರಾನ್‌ಪುರ ಮತ್ತು ಬಿಜ್ನೋರ್ ಸೇರಿದಂತೆ ಉತ್ತರ ಪ್ರದೇಶದ ಕೆಲವು ಭಾಗಗಳಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ಇನ್ನೂ ಹರಿಯಾಣದ ಫರುಖ್‌ನಗರ, ಕೋಸಾಲಿ, ಮಹೇಂದರ್‌ಗಢ, ಸೋಹ್ನಾ, ರೇವಾರಿ, ಪಲ್ವಾಲ್, ನರ್ನಾಲ್, ಬವಾಲ್ ಮತ್ತು ನುಹ್ ಹಾಗೂ ರಾಜಸ್ಥಾನದ ಭಿವಾಡಿ ಮತ್ತು ಖೈರ್ಥಲ್ ಪ್ರದೇಶಗಳಲ್ಲಿ8 ಗಂಟೆಗೆ 60 ರಿಂದ 80 ಕಿ.ಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಯಿದೆ. ಕುರುಕ್ಷೇತ್ರ, ಕೈತಾಲ್, ನರ್ವಾನಾ, ಕರ್ನಾಲ್, ಫತೇಹಾಬಾದ್, ರಾಜೌಂಡ್, ಅಸ್ಸಂದ್, ಸಫಿಡಾನ್, ಬರ್ವಾಲಾ, ಜಿಂದ್, ಪಾಣಿಪತ್, ಆದಂಪುರ, ಹಿಸಾರ್, ಗೊಹಾನಾ, ಸಿಯಾವಾನಿ, ಗಣೌರ್‌ನಲ್ಲಿ ಗಂಟೆಗೆ 30-40 ಕಿ.ಮೀ ವೇಗದಲ್ಲಿ ಗಾಳಿ ಬೀಸಲಿದ್ದು, ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಸಂಸ್ಥೆ ತಿಳಿಸಿದೆ.
ಮಾ.31ರವರೆಗೆ ಪಂಜಾಬ್, ಹರಿಯಾಣ, ದೆಹಲಿ, ಚಂಡೀಗಢ, ಉತ್ತರ ಪ್ರದೇಶ ಮತ್ತು ರಾಜಸ್ಥಾನಗಳಲ್ಲಿ ಗುಡುಗು, ಮಿಂಚು ಸಹಿತ, ಗಂಟೆಗೆ 30-50 ಕಿ.ಮೀ ವೇಗದಲ್ಲಿ ಗಾಳಿ ಬೀಸಲಿದೆ ಹಾಗೂ ಸಾಧಾರಣ ಮಳೆಯಾಗುವ ಮುನ್ಸೂಚನೆ ನೀಡಿದೆ.ಇದನ್ನೂ ಓದಿ: ಷೇರು ಮಾರುಕಟ್ಟೆಯಲ್ಲಿ ರಕ್ತಪಾತ – ಹೂಡಿಕೆದಾರರ 10 ಲಕ್ಷ ಕೋಟಿ ಸಂಪತ್ತು ಕರಗಲು ಕಾರಣ ಏನು?

