8 ವರ್ಷದ ಬಳಿಕ ದೆಹಲಿ ಮೆಟ್ರೋ ದರ ಏರಿಕೆ

Public TV
2 Min Read

– ಸಾಮಾನ್ಯ ಪ್ರಯಾಣ ದರ 1-4 ರೂ.ವರೆಗೆ ಏರಿಕೆ

ನವದೆಹಲಿ: ಎಂಟು ವರ್ಷಗಳ ಬಳಿಕ ದೆಹಲಿ ಮೆಟ್ರೋ ರೈಲು ನಿಗಮ (DMRC) ಪ್ರಯಾಣ ದರವನ್ನು 1 ರಿಂದ 4ರೂ.ಗೆ ಏರಿಕೆಯಾಗಿದೆ.

ಇಂದಿನಿಂದ (ಆ.25) ದೆಹಲಿ ಮೆಟ್ರೋ (Delhi Metro) ರೈಲು ಟಿಕೆಟ್ ದರ ಏರಿಕೆಯಾಗಿದೆ. ಎಂಟು ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಟಿಕೆಟ್ ಬೆಲೆ ಏರಿಕೆಯಾಗಿದೆ. ದೆಹಲಿ, ಎನ್‌ಸಿಆರ್ ಪ್ರದೇಶಗಳ ಲಕ್ಷಾಂತರ ಜನರ ಮೇಲೆ ಈ ದರ ಏರಿಕೆ ಪರಿಣಾಮ ಬೀರಲಿದೆ.ಇದನ್ನೂ ಓದಿ: ಧರ್ಮಸ್ಥಳ ಸಂಘದ ವಿರುದ್ಧ ಪಿತೂರಿಗೆ ಬಂದಿದ್ದ ಮಟ್ಟಣ್ಣನವರ್‌ಗೆ ಗ್ರಾಮಸ್ಥರ ಕ್ಲಾಸ್!

ಈ ಕುರಿತು ದೆಹಲಿ ಮೆಟ್ರೋ ರೈಲು ನಿಗಮ ಮಾಹಿತಿ ನೀಡಿದ್ದು, ಟಿಕೆಟ್ ದರ ಪರಿಷ್ಕರಣೆ ಎನ್ನುವುದು ಹೆಸರಿಗಷ್ಟೇ. ಎಲ್ಲಾ ಮಾರ್ಗಗಳಲ್ಲಿ 1ರೂ.ಯಿಂದ 4 ರೂ.ವರೆಗೆ ಏರಿಕೆಯಾಗಿದೆ. ಇನ್ನೂ ಏರ್‌ಪೋರ್ಟ್ ಎಕ್ಸ್‌ಪ್ರೆಸ್‌ ಲೈನ್‌ನಲ್ಲಿ (Airport Express Line Metro) 5 ರೂ. ಏರಿಕೆಯಾಗಿದೆ. ದರ ಏರಿಕೆ ಬಳಿಕ ಕನಿಷ್ಠ 11 ರೂ. ಹಾಗೂ ಗರಿಷ್ಠ ದರ 64 ರೂ. ಆಗಿದೆ ಎಂದು ತಿಳಿಸಿದೆ.

ಪ್ರಯಾಣ ದರದ ಹೆಚ್ಚಳ ಹೊರತಾಗಿಯೂ ಸ್ಮಾರ್ಟ್ ಕಾರ್ಡ್ ಬಳಕೆದಾರರಿಗೆ ಶೇ.10ರಷ್ಟು ರಿಯಾಯಿತಿ ದೊರೆಯಲಿದೆ. ಜೊತೆಗೆ ಬೆಳಿಗ್ಗೆ 8 ಗಂಟೆಗೂ ಮುನ್ನ, ಮಧ್ಯಾಹ್ನ 12ರಿಂದ ಸಂಜೆ 5ರವರೆಗೆ ಹಾಗೂ ರಾತ್ರಿ 9 ಗಂಟೆಯ ನಂತರ ಹೆಚ್ಚುವರಿ ಶೇ.10ರಷ್ಟು ರಿಯಾಯಿತಿ ದೊರೆಯಲಿದೆ.

ಹೊಸ ದರ ಹೇಗಿದೆ?
ಸಾಮಾನ್ಯ ದಿನಗಳಲ್ಲಿ ಮೆಟ್ರೋ ಟಿಕೆಟ್ ದರ:
0-2 ಕಿ.ಮೀ.ಗೆ 11 ರೂ.
2-5 ಕಿ.ಮೀ.ಗೆ 21 ರೂ.
5-12 ಕಿ.ಮೀ.ಗೆ 32 ರೂ.
12-21 ಕಿ.ಮೀ.ಗೆ 43 ರೂ.
21-32 ಕಿ.ಮೀ.ಗೆ 54 ರೂ.
32 ಕಿ.ಮೀ.ಗಿಂತ ಹೆಚ್ಚಿನದಕ್ಕೆ 64 ರೂ.

ಭಾನುವಾರ ಹಾಗೂ ರಜಾ ದಿನಗಳಲ್ಲಿ ಮೆಟ್ರೋ ಟಿಕೆಟ್ ದರ:
0-2 ಕಿ.ಮೀ.ಗೆ 11 ರೂ.
2-5 ಕಿ.ಮೀ.ಗೆ 11 ರೂ.
5-12 ಕಿ.ಮೀ.ಗೆ 21 ರೂ.
12-21 ಕಿ.ಮೀ.ಗೆ 32 ರೂ.
21-32 ಕಿ.ಮೀ.ಗೆ 43 ರೂ.
32 ಕಿ.ಮೀ.ಗಿಂತ ಹೆಚ್ಚಿನ ದೂರಕ್ಕೆ 54 ರೂ.

ದರ ನಿಗದಿ ಸಮಿತಿಯ ಶಿಫಾರಸುಗಳ ಆಧಾರದ ಮೇಲೆ ಡಿಎಂಆರ್‌ಸಿ ಕೊನೆಯದಾಗಿ 2017ರಲ್ಲಿ ಟಿಕೆಟ್ ದರ ಏರಿಕೆ ಮಾಡಿತ್ತು. ಆ ಸಮಯದಲ್ಲಿ ಕನಿಷ್ಠ ದರ 10 ರೂ. ಮತ್ತು ಗರಿಷ್ಠ ದರ 60 ರೂ. ಆಗಿತ್ತು.ಇದನ್ನೂ ಓದಿ: ದಾವಣಗೆರೆ | ಜಮೀನಿನಲ್ಲಿ ಕೆಲಸ ಮಾಡ್ತಿದ್ದ ರೈತನ ಮೇಲೆ ಚಿರತೆ ದಾಳಿ

Share This Article