ಪತಿ ಇಲ್ಲದಾಗ ಆಗಾಗ ಬರುತ್ತಿದ್ದ ಯುವಕ- ಅನೈತಿಕ ಸಂಬಂಧ ಶಂಕೆಗೆ ಬಲಿ

Public TV
1 Min Read

ನವದೆಹಲಿ: ತನ್ನ ಪತ್ನಿಯೊಂದಿಗೆ (Wife) ಅನೈತಿಕ ಸಂಬಂಧ ಹೊಂದಿದ್ದಾನೆ ಎಂದು ಶಂಕಿಸಿ ವ್ಯಕ್ತಿಯೊಬ್ಬನಿಗೆ ಚಾಕು ಇರಿದು ಹತ್ಯೆ ಮಾಡಿರುವ ಘಟನೆ ಪಶ್ಚಿಮ ದೆಹಲಿಯ (West Delhi) ಮುಂಡ್ಕಾದಲ್ಲಿ ನಡೆದಿದೆ.

ಪ್ರದೀಪ್ (25) ಕೊಲೆಯಾದ ಯುವಕ. ಪ್ರದೀಪ್ ತಾನು ಕೆಲಸ ಮಾಡುತ್ತಿದ್ದ ಜಾಗದಲ್ಲಿ ಮಹಿಳೆಯೊಬ್ಬರ ಜೊತೆ ಸಲುಗೆಯಿಂದ ಇದ್ದ. ಅಲ್ಲದೆ ಆಗಾಗ ಅವರ ಮನೆಗೆ ಹೋಗುತ್ತಿದ್ದ. ಈ ವಿಚಾರವಾಗಿ ಮಹಿಳೆಯ ಪತಿ (Husband) ಚರಣ್ ಸಿಂಗ್ ಆಗಾಗ ಪತ್ನಿಯೊಂದಿಗೆ ಜಗಳವಾಡುತ್ತಿದ್ದ. ಇದನ್ನೂ ಓದಿ: ಬಸ್‌ನಲ್ಲಿ ಪ್ರಯಾಣಿಸುವಾಗ ಹೃದಯಾಘಾತ- ವೃದ್ಧೆ ಸಾವು

ಚರಣ್ ಸಿಂಗ್ ತನ್ನ ಸಹೋದರಿಯನ್ನು ಭೇಟಿಯಾಗಲು ಉತ್ತರ ಪ್ರದೇಶದ (Uttar Pradesh) ಸೈಫೈಗೆ ಹೋಗುವುದಾಗಿ ಹೇಳಿ ಮನೆಯಿಂದ ಹೊರಟು ಹೋಗಿದ್ದ. ಆದರೆ ಕೆಲವು ಗಂಟೆಗಳ ನಂತರ ಮನೆಗೆ ವಾಪಸ್ ಆಗಿದ್ದ. ಈ ವೇಳೆ ಕೊಲೆಯಾದ ಪ್ರದೀಪ್ ಮನೆಯಲ್ಲಿದ್ದ. ಚರಣ್ ಸಿಂಗ್ ಆತನನ್ನು ಮನೆಯಲ್ಲಿಯೇ ಉಳಿದುಕೊಳ್ಳುವಂತೆ ಹೇಳಿದ್ದಾನೆ. ಬೆಳಗ್ಗಿನ ಜಾವ 5.30ರ ವೇಳೆಗೆ ಚಾಕುವಿನಿಂದ ಇರಿದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿ ಚರಣ್ ಸಿಂಗ್‍ನನ್ನು ಪೊಲೀಸರು ಬಂಧಿಸಿದ್ದು, ಕೃತ್ಯಕ್ಕೆ ಬಳಸಿದ ಚಾಕುವನ್ನು ವಶಪಡಿಸಿಕೊಂಡಿದ್ದಾರೆ. ಇದನ್ನೂ ಓದಿ: ಆಕ್ಸಿಜನ್ ಕೊರತೆಯಿಂದ ಕ್ಯಾನ್ಸರ್ ರೋಗಿ ಸಾವು- ಕಾರಣ ಅದಲ್ಲ ಅಂತ ವೈದ್ಯರ ವಾದ

Share This Article