25ರ ಮಹಿಳೆಯಿಂದ 19ರ ಯುವತಿ ಮೇಲೆ ರೇಪ್- ಕೇಸ್ ದಾಖಲಿಸಲು ಪೊಲೀಸರ ಹಿಂದೇಟು

Public TV
2 Min Read

ನವದೆಹಲಿ: ಮಹಿಳೆಯಿಂದ ಮಹಿಳೆ ಅಥವಾ ಪುರುಷನಿಂದ ಪುರುಷನ ಮೇಲೆ ಅತ್ಯಾಚಾರ ನಡೆದರೆ, ಅಂತಹ ಪ್ರಕರಣವನ್ನು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲು ಹಿಂದೇಟು ಹಾಕುವ ಪರಿಸ್ಥಿತಿ ನಿರ್ಮಾಣವಾಗಿದೆ. ಇಂತಹ ಪರಿಸ್ಥಿತಿ ದೆಹಲಿ ನಡೆದಿದ್ದು, ಸಂತ್ರಸ್ತ ಯುವತಿ ದೂರು ನೀಡಿದರೂ, ಆರೋಪಿ ಮಹಿಳೆ ವಿರುದ್ಧ ಕ್ರಮಕೈಗೊಳ್ಳಲು ಕಾನೂನು ತೊಡಕು ಉಂಟಾಗಿದೆ.

ಏನಿದು ಪ್ರಕರಣ?:
ಈಶಾನ್ಯ ರಾಜ್ಯದ 25 ವರ್ಷದ ಮಹಿಳೆ, ನನ್ನ ಮೇಲೆ ಅತ್ಯಾಚಾರ ಎಸಗಿದ್ದಾಳೆ ಎಂದು 19 ವರ್ಷದ ಯುವತಿ ಆರೋಪಿಸಿದ್ದಾಳೆ. ಈ ಕುರಿತು ನವದೆಹಲಿಯ ಸೀಮಾಪುರಿ ಠಾಣೆಗೆ ದೂರು ನೀಡಿದರೂ ಪೊಲೀಸರು ದೂರು ದಾಖಲಿಸಿಕೊಳ್ಳಲು ಹಿಂದೇಟು ಹಾಕಿದ್ದಾರೆ ಎಂದು ವರದಿಯಾಗಿದೆ.

25 ವರ್ಷದ ಮಹಿಳೆ ಇದೇ ವರ್ಷದ ಮಾರ್ಚ್‍ನಿಂದ ಕಿರುಕುಳ ಆರಂಭಿಸಿದ್ದಾಳೆ. ಜೊತೆಗೆ 2 ತಿಂಗಳುಗಳ ಕಾಲ ಯುವತಿಯನ್ನು ಬಂಧನದಲ್ಲಿ ಇರಿಸಲಾಗಿತ್ತು. ಈ ವೇಳೆ ರೋಹಿತ್ ಮತ್ತು ರಾಹುಲ್ ಎಂಬವರು ನನ್ನ ಮೇಲೆ ಅತ್ಯಾಚಾರ ಎಸಗಿದ್ದು, ಅದನ್ನು ಚಿತ್ರೀಕರಣ ಮಾಡಿದ್ದಾರೆ. ಈಗ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವುದಾಗಿ ಬೆದರಿಕೆ ಒಡ್ಡುತ್ತಿದ್ದಾರೆ ಎಂದು ಸಂತ್ರಸ್ತ ಯುವತಿ ಆರೋಪಿಸಿದ್ದಾಳೆ.

ಬಂಧನದಲ್ಲಿ ಇರಿಸಿದ್ದ ವೇಳೆ ಮಹಿಳೆ ಸೆಕ್ಸ್ ಟಾಯ್ ಮೂಲಕ ತನ್ನ ಮೇಲೆ ಅತ್ಯಾಚಾರ ಎಸಗಿದ್ದಾಳೆ. ಇದರಿಂದ ಮುಂದೆ ತನ್ನ ಮಹಿಳೆ ಸಲಿಂಗಿ ಗ್ರಾಹಕರಿಗೆ ಅನುಕೂಲವಾಗಲು ಹಾಗೂ ಹಣ ಸಂಪಾದನೆ ಮಾಡಲು ಹೀಗೆ ಮಾಡಿದ್ದಾಳೆ. ಅಷ್ಟೇ ಅಲ್ಲದೆ ಗ್ರೂಪ್ ಸೆಕ್ಸ್ ಮಾಡು ಅಂತಾ ಒತ್ತಾಯಿಸಿದ್ದಳು. ಅತ್ಯಾಚಾರದ ಜೊತೆಗೆ ದೈಹಿಕವಾಗಿ ಕಿರುಕುಳ ನೀಡುತ್ತಿದ್ದಳು ಎಂದು ಸಂತ್ರಸ್ತೆ ದೂರಿದ್ದಾಳೆ.

ಬಾಲಕಿ ಮನೆಯವರಿಗೆ ಮಾಹಿತಿ ನೀಡಲು ಮುಂದಾಗಿದ್ದಕ್ಕೆ ಆಕೆಗೆ ವಿಡಿಯೋ ಬಹಿರಂಗ ಮಾಡುವುದಾಗಿ ಬೆದರಿಕೆ ಒಡ್ಡಿದ್ದಾರೆ. ಇತ್ತ ಆರೋಪಿ ರಾಹುಲ್ ಯುವತಿಯ ಪೋಷಕರ ಬ್ಯಾಂಕ್ ಖಾತೆಗೆ 20 ಸಾವಿರ ರೂ. ಹಾಕಿದ್ದಾನೆ. ಹೀಗಾಗಿ ಯುವತಿ ಪೋಷಕರು ಮಗಳೇ ನನ್ನ ಖಾತೆಗೆ ಹಣ ಹಾಕಿದ್ದಾಳೆ ಅಂತಾ ತಿಳಿದು ಸುಮ್ಮನಿದ್ದರು ಎಂದು ವರದಿಯಾಗಿದೆ.

ಪೋಷಕರಿಗೂ ಹೇಳಲಾಗದೆ ಬೆದರಿಕೆ ಹಾಗೂ ನಿರಂತರ ಅತ್ಯಾಚಾರದಿಂದ ಬೇಸತ್ತಿದ್ದ ಯುವತಿಯ ರಕ್ಷಣೆಗೆ ಸಂಘಟನೆಯೊಂದರ ನೆರವಾಗಿದೆ. ಅಲ್ಲಿಂದ ಹೊರ ಬಂದ ಆಕೆಯ ಸ್ಥಳೀಯ ಸೀಮಾಪುರಿ ಠಾಣೆಯಲ್ಲಿ ದೂರು ನೀಡಲು ಹೋಗಿದ್ದಾಳೆ. ಆದರೆ ಪೊಲೀಸರು ಅಸಹಜ ಅತ್ಯಾಚಾರ ಪ್ರಕರಣದ ಅಡಿ ಮಹಿಳೆಯ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲು ಬರುವುದಿಲ್ಲ ಎಂದು ತಿಳಿಸಿದ್ದ ಅವರು, ಮ್ಯಾಜಿಸ್ಟ್ರೇಟ್‍ಗೆ ಮಾಹಿತಿ ನೀಡದಂತೆ ತಿಳಿ ಹೇಳಿದ್ದರು.

ಮ್ಯಾಜಿಸ್ಟ್ರೇಟ್‍ಗೆ ಭೇಟಿಯಾದ ಯುವತಿ ಸೆ.26ರಂದು ಹೇಳಿಕೆ ದಾಖಲಿಸಿದ್ದಾಳೆ. ಹೀಗಾಗಿ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಹುಲ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಮತ್ತೊಬ್ಬ ಆರೋಪಿ ರೋಹಿತ್ ಪರಾರಿಯಾಗಿದ್ದು, ಬಂಧನಕ್ಕಾಗಿ ಪೊಲೀಸರು ಬಲೆ ಬೀಸಿದ್ದಾರೆ.

ಸುಪ್ರೀಂ ಕೋರ್ಟ್ ತೀರ್ಪು ಏನು?
ಕೆಲ ದಿನಗಳ ಹಿಂದೆ ಸುಪ್ರೀಂಕೋರ್ಟ್ ಸಮ್ಮತಿಯ ಸಲಿಂಗ ಕಾಮ ಅಪರಾಧವಲ್ಲ ಎಂದು ತೀರ್ಪು ನೀಡಿ, ಭಾರತೀಯ ದಂಡ ಸಂಹಿತೆಯ 377ನೇ ವಿಧಿಯನ್ನು ರದ್ದು ಮಾಡಿತ್ತು. ಈ ಹಿನ್ನಲೆಯಲ್ಲಿ ನೊಂದ ಯುವತಿ ದೂರು ನೀಡಿದರೂ ಕಾನೂನಾತ್ಮಕವಾಗಿ ಮುಂದುವರಿಯಲು ತೊಂದರೆ ಎದುರಾಗಿದೆ ಎಂದು ಯುವತಿ ಪರ ವಕೀಲರು ಹೇಳಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv 

Share This Article
Leave a Comment

Leave a Reply

Your email address will not be published. Required fields are marked *