ದೆಹಲಿ ಹೈಕಮಾಂಡ್ ನಮ್ಮ ತಂದೆಗೆ ಕ್ಲೀನ್ ಚಿಟ್ ಕೊಟ್ಟಿದೆ: ಯತೀಂದ್ರ ಸಿದ್ದರಾಮಯ್ಯ

Public TV
1 Min Read

ಮೈಸೂರು: ದೆಹಲಿ ಹೈಕಮಾಂಡ್‌ನಿಂದ ನಮ್ಮ ತಂದೆಗೆ ಕ್ಲೀನ್ ಚಿಟ್ ಸಿಕ್ಕಿದೆ ಎಂದು ವಿಪಕ್ಷಗಳಿಗೆ ಸಿಎಂ ಸಿದ್ದರಾಮಯ್ಯ ಪುತ್ರ ಹಾಗೂ ಎಂಎಲ್‌ಸಿ ಯತೀಂದ್ರ ಸಿದ್ದರಾಮಯ್ಯ ಟಾಂಗ್ ಕೊಟ್ಟರು.

ಸಿಎಂ ಸಿದ್ದರಾಮಯ್ಯ ವಿರುದ್ಧ ಮೈತ್ರಿ ಪಕ್ಷಗಳ ಮುಡಾ ಆರೋಪ ವಿಚಾರವಾಗಿ ಮೈಸೂರಿನಲ್ಲಿ ಪ್ರತಿಕ್ರಿಯಿಸಿದ ಯತೀಂದ್ರ, ದೆಹಲಿ ಹೈಕಮಾಂಡ್‌ನಿಂದ ನಮ್ಮ ತಂದೆಗೆ ಕ್ಲೀನ್ ಚಿಟ್ ಸಿಕ್ಕಿದೆ. ಜನರಿಂದ ಆಯ್ಕೆಯಾದ ಸರ್ಕಾರವನ್ನು ಸುಳ್ಳು ಆರೋಪ ಮಾಡಿ ಬೀಳಿಸೋ ಕುತಂತ್ರಕ್ಕೆ ನಾವು ಬಿಡಲ್ಲ. ಅದರ ವಿರುದ್ಧ ಏನು ಬೇಕೋ ಆ ಹೋರಾಟವನ್ನು ನಮ್ಮ ಪಕ್ಷದವರು ಮಾಡುತ್ತಾರೆ ಎಂದು ತಿಳಿಸಿದರು.

ದೆಹಲಿ ಹೈಕಮಾಂಡ್ ಕೂಡ ನಮ್ಮ ತಂದೆಯವರು ಏನೂ ತಪ್ಪಿಲ್ಲ ಅಂತಾ ಹೇಳಿದೆ. ಮುಖ್ಯಮಂತ್ರಿಗಳಿಗೆ ನಮ್ಮ ಬೆಂಬಲ ಕೊಡ್ತೀವಿ ಅಂತಾ ಹೇಳಿದ್ದಾರೆ. ಹಾಗಾಗಿ ನಮಗೆ ನಮ್ಮ ಪಕ್ಷದ ಬೆಂಬಲ, ನಾಯಕರ ಬೆಂಬಲ ಹಾಗೂ ಕಾರ್ಯಕರ್ತರ ಬೆಂಬಲ ಇದೆ. ನಾವೂ ಕೂಡ ಜನರ ಮುಂದೆ ಹೋಗಿ ಹೋರಾಟ ಮಾಡ್ತೇವೆ ಎಂದರು.

ಇವತ್ತು ಅವರು ಏನು ತಪ್ಪು ಮಾಡದಿದ್ರೂ ಆರೋಪ ಎದುರಿಸಬೇಕಾಗಿ ಬಂದಿದೆ. ಈಗ ತಂದೆಯವರ ಪ್ರಾಮಾಣಿಕ ರಾಜಕೀಯ ಜೀವನ ಜನ ಅರ್ಥ ಮಾಡಿಕೊಳ್ಳುವಂತಾಗುತ್ತೆ. ಬೆಂಬಲಿಗರೆಲ್ಲರೂ ವಿಚಾರ ಸಂಕೀರ್ಣ ಮೂಲಕ ಬಿಜೆಪಿ ಕುತಂತ್ರ ತಿಳಿಸುವ ಕೆಲಸ ಮಾಡಿದ್ದೀರಿ. ಅದಕ್ಕೆ ನಿಮಗೆ ಧನ್ಯವಾದಗಳು ಎಂದು ತಿಳಿಸಿದರು.

Share This Article