ದೆಹಲಿ-ಗೋವಾ ಇಂಡಿಗೋ ವಿಮಾನದಲ್ಲಿ ತಾಂತ್ರಿಕ ಸಮಸ್ಯೆ – ತುರ್ತು ಲ್ಯಾಂಡಿಂಗ್

Public TV
1 Min Read

ಮುಂಬೈ: ದೆಹಲಿಯಿಂದ (Delhi) ಗೋವಾಗೆ (Goa) ತೆರಳುತ್ತಿದ್ದ ಇಂಡಿಗೋ ವಿಮಾನವೊಂದರಲ್ಲಿ (Indigo Flight) ತಾಂತ್ರಿಕ ಸಮಸ್ಯೆ ಕಂಡು ಬಂದ ಹಿನ್ನೆಲೆ ಮುಂಬೈನಲ್ಲಿ ತುರ್ತು ಲ್ಯಾಂಡಿಂಗ್ (Emergency Landing) ಮಾಡಲಾಯಿತು.

ವಿಮಾನದ ಎಂಜಿನ್‌ನಲ್ಲಿ ಸಮಸ್ಯೆ ಕಂಡುಬಂದಿದ್ದು, ಪೈಲಟ್ ತುರ್ತು ಸ್ಥಿತಿಯನ್ನು ಸೂಚಿಸಲು `ಪ್ಯಾನ್-ಪ್ಯಾನ್-ಪ್ಯಾನ್’ ಪ್ರಕಟಿಸಿದ್ದಾರೆ ಎಂದು ವಿಮಾನಯಾನ ಮೂಲಗಳು ತಿಳಿಸಿವೆ.ಇದನ್ನೂ ಓದಿ: ಭೂಮಿಗೆ ಮರಳಿದ ಶುಕ್ಲಾಗೆ ಪತ್ನಿ, ಪುತ್ರನಿಂದ ಅಪ್ಪುಗೆಯ ಸ್ವಾಗತ

ಮೂಲಗಳ ಪ್ರಕಾರ, ಇಂಡಿಗೋ ವಿಮಾನ 6E6271 ದೆಹಲಿಯಿಂದ ಗೋವಾಗೆ ತೆರಳುತ್ತಿರುವಾಗ ಎಂಜಿನ್‌ನಲ್ಲಿ ಸಮಸ್ಯೆ ಉಂಟಾಗಿದೆ. ಪರಿಣಾಮ ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನವನ್ನು (Chhatrapati Shivaji Maharaj International Airport) ಸುರಕ್ಷಿತವಾಗಿ ಲ್ಯಾಂಡ್ ಮಾಡಲಾಯಿತು. ವಿಮಾನದಲ್ಲಿದ್ದ ಎಲ್ಲ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಇಂಡಿಗೋ ಏರ್‌ಲೈನ್ಸ್ ದೃಢಪಡಿಸಿದೆ.

`ಪ್ಯಾನ್-ಪ್ಯಾನ್-ಪ್ಯಾನ್’ ಎಂಬುದು ವಿಮಾನಯಾನ ಕ್ಷೇತ್ರದಲ್ಲಿ ತುರ್ತು ಸ್ಥಿತಿಯನ್ನು ಸೂಚಿಸುವ ಪ್ರಕಟಣೆಯಾಗಿದ್ದು, ಇದು ಗಂಭೀರವಾದ ತಾಂತ್ರಿಕ ಸಮಸ್ಯೆಯನ್ನು ತಿಳಿಸುತ್ತದೆ. ಆದರೆ ತಕ್ಷಣದ ಅಪಾಯಕ್ಕಿಂತ ಕಡಿಮೆ ತೀವ್ರತೆಯನ್ನು ಹೊಂದಿರುತ್ತದೆ. ಪೈಲಟ್‌ನ ತ್ವರಿತ ನಿರ್ಧಾರ ಮತ್ತು ವಿಮಾನ ನಿಲ್ದಾಣದ ಸಿಬ್ಬಂದಿಯ ಸಮಯೋಚಿತ ಕ್ರಮದಿಂದ ಎಲ್ಲಾ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ.

ಇಂಡಿಗೋ ಏರ್‌ಲೈನ್ಸ್ ಈ ಘಟನೆಯ ಕುರಿತು ತನಿಖೆ ಆರಂಭಿಸಿದ್ದು, ಪ್ರಯಾಣಿಕರಿಗೆ ಪರ್ಯಾಯ ವಿಮಾನ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದೆ.ಇದನ್ನೂ ಓದಿ: ಥೈಲ್ಯಾಂಡ್‌ನಲ್ಲಿ ಡೆವಿಲ್ ಸಾಂಗ್ ಶೂಟಿಂಗ್ – ದರ್ಶನ್ ಫೋಟೋ ರಿವೀಲ್

 

Share This Article