– ಪುಲ್ಪಾಮಾ ದಾಳಿಯಲ್ಲಿ ಆಧಾರ್ ಬಳಕೆಯಾಗಿದೆ ಅಂತ ಹೆದರಿಸಿ ವಂಚನೆ
ನವದೆಹಲಿ: ಡಿಜಿಟಲ್ ಅರೆಸ್ಟ್ (Digital Arrest) ಪ್ರಕರಣ ಇತ್ತೀಚೆಗೆ ಜಾಸ್ತಿ ಆಗ್ತಿವೆ. ಖುದ್ದು ಪ್ರಧಾನಿ ಮೋದಿ (PM Modi) ಅವರೇ ಜಾಗೃತಿ ಮೂಡಿಸಿದ್ರೂ ಎಚ್ಚೆತ್ತುಕೊಳ್ಳದ ಜನ, ಇಂತಹ ಕೃತ್ಯಗಳಿಗೆ ಒಳಗಾಗುತ್ತಿದ್ದಾರೆ. ಅದರಂತೆ ದೆಹಲಿಯ ನಿವೃತ್ತ ಬ್ಯಾಂಕರ್ ಒಬ್ಬರು ಡಿಜಿಟಲ್ ಅರೆಸ್ಟ್‌ಗೆ ಹೆದರಿ 23 ಕೋಟಿ ಕಳೆದುಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ತಾವು ಇಡಿ ಮತ್ತು ಸಿಬಿಐ ಅಧಿಕಾರಿಗಳು (CBI Officers) ಅಂತ ಹೇಳಿಕೊಂಡು, ಸೈಬರ್ ವಂಚಕರು ಒಂದು ತಿಂಗಳ ಕಾಲ ಡಿಜಿಟಲ್ ಅರೆಸ್ಟ್ ಬೆದರಿಕೆ ಹಾಕುವ ಮೂಲಕ 23 ಕೋಟಿ ರೂ.ಗಳನ್ನು ವಂಚಿಸಿದ್ದಾರೆ. ಆರೋಪಿಗಳು, ನಿವೃತ್ತ ಬ್ಯಾಂಕರ್‌ಗೆ ನಿಮ್ಮ ಆಧಾರ್ ಕಾರ್ಡ್, ಡ್ರಗ್ಸ್ ಸಾಗಣೆ, ಉಗ್ರರಿಗೆ ಹಣಕಾಸು ನೆರವು ಮತ್ತು ಪುಲ್ವಾಮಾ ಭಯೋತ್ಪಾದಕ ದಾಳಿಯಲ್ಲಿ (Pulwama Terror Attack) ಬಳಕೆಯಾಗಿದೆ ಎಂದು ಹೇಳಿದ್ದಾರೆ. ಬಳಿಕ ಸಿಬಿಐ, ಇಡಿ ಅಂತ ಹೇಳಿಕೊಳ್ಳುವ ಕೆಲ ಅಧಿಕಾರಿಗಳು ನಿವೃತ್ತ ಬ್ಯಾಂಕ್ ಅಧಿಕಾರಿಯನ್ನ ಸಂಪರ್ಕಿಸಿದ್ದಾರೆ. ಇದನ್ನೂ ಓದಿ: ಗುಜರಾತ್ ಕಡಲ ತೀರದಲ್ಲಿ ಸೋಮಾಲಿಯಕ್ಕೆ ಹೊರಡಬೇಕಿದ್ದ ಹಡಗಿಗೆ ಬೆಂಕಿ – ಭಯಾನಕ ದೃಶ್ಯ ಕ್ಯಾಮೆರಾದಲ್ಲಿ ಸೆರೆ
ತನಿಖೆಯ ನೆಪದಲ್ಲಿ ಆತನನ್ನು ಫ್ಲಾಟ್ ಒಳಗೆ ಇರಿಸಿ ಮನೆಯಿಂದ ಹೊರಗೆ ಹೋಗದಂತೆ ಹೇಳಿದ್ದಾರೆ. ಆಗಸ್ಟ್ 4ರಿಂದ ಒಂದು ತಿಂಗಳ ಅವಧಿಯಲ್ಲಿ ವಿವಿಧ ಬ್ಯಾಂಕ್ ಖಾತೆಗಳಿಗೆ ಹಣ ವರ್ಗಾಯಿಸಿಕೊಂಡಿದ್ದಾರೆ. ಭಯದಿಂದ ಬಲಿಪಶು, ಅವರು ಹೇಳಿದಂತೆಲ್ಲಾ ಕೇಳಿದ್ದಾರೆ. ಬಳಿಕ ಮೋಸಹೋಗಿರುವುದು ಅರಿತ ಬ್ಯಾಂಕರ್, ಸೆಪ್ಟೆಂಬರ್ 19ರಂದು NCRP ಸೈಬರ್ ಪೊಲೀಸ್ ಪೋರ್ಟಲ್‌ನಲ್ಲಿ ದೂರು ದಾಖಲಿಸಿದ್ದಾರೆ. ಎಫ್‌ಐಆರ್ ದಾಖಲಿಸಿಕೊಂಡ ಸೈಬರ್ ಕ್ರೈಂ, ವಂಚನೆಗೊಳಗಾದ ಮೊತ್ತದಲ್ಲಿ 12.11 ಕೋಟಿ ರೂ ವಿವಿಧ ಬ್ಯಾಂಕ್ ಖಾತೆಗಳಲ್ಲಿ ಫ್ರೀಜ್ ಮಾಡಲಾಗಿದೆ.
ಬಹುಖಾತೆಗಳಿಗೆ ವರ್ಗಾವಣೆಯಾಗಿದ್ದ ಹಣವನ್ನು ದೇಶದ ವಿವಿಧ ಭಾಗದ ಬ್ಯಾಂಕ್‌ಗಳಿಂದ ರಿಕವರಿ ಮಾಡಲಾಗಿದೆ. ಹಲವು ತಂಡಗಳನ್ನು ತಖೆಗೆ ರಚಿಸಲಾಗಿದ್ದು, ಶೀಘ್ರದಲ್ಲೇ ಆರೋಪಿಯನ್ನು ಬಂಧಿಸಲಾಗುವುದು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ನವರಾತ್ರಿ ಮೊದಲ ದಿನ ತ್ರಿಪುರ ಸುಂದರಿ ದೇವಿ ದರ್ಶನ ಪಡೆದ ಮೋದಿ – ವಿಶೇಷ ಪೂಜೆ, ಪ್ರಾರ್ಥನೆ ಸಲ್ಲಿಕೆ
ಡಿಜಿಟಲ್ ಅರೆಸ್ಟ್ ಎಂದರೇನು?
ಡಿಜಿಟಲ್ ಅರೆಸ್ಟ್ ಸೈಬರ್ ವಂಚನೆಯ ಹೊಸ ವಿಧಾನವಾಗಿದೆ. ಇದರಲ್ಲಿ ವಂಚಕರು ಕಾನೂನು ಅಧಿಕಾರಿಗಳಂತೆ ಪೋಸ್ ನೀಡುತ್ತಾರೆ ಮತ್ತು ಆಡಿಯೊ ಅಥವಾ ವೀಡಿಯೊ ಕರೆಗಳಲ್ಲಿ ಜನರನ್ನು ಬೆದರಿಸುತ್ತಾರೆ. ಬಂಧನದ ಸುಳ್ಳು ನೆಪದಲ್ಲಿ ಡಿಜಿಟಲ್ ಒತ್ತೆಯಾಳುಗಳನ್ನಾಗಿ ಮಾಡಿ ಹಣ ಪೀಕುತ್ತಾರೆ. ಇದನ್ನೂ ಓದಿ: Air India Plane Crash | ಪೈಲಟ್ ಕಡೆಯಿಂದ ಲೋಪ ಎಂಬ ಆರೋಪ ಬೇಜವಾಬ್ದಾರಿ ಎಂದ ಸುಪ್ರೀಂ