ಮುಸ್ಲಿಮ್‌ ಬಾಹುಳ್ಯ ಇರೋ ಮುಸ್ತಫಾಬಾದ್‌ನಲ್ಲಿ ಬಿಜೆಪಿಗೆ ಭರ್ಜರಿ ಗೆಲುವು

Public TV
2 Min Read

ನವದೆಹಲಿ: ದೆಹಲಿ ಚುನಾವಣೆಯಲ್ಲಿ (Delhi Election) ಮುಸ್ಲಿಮ್‌ ಬಾಹುಳ್ಯ ಇರುವ ಮುಸ್ತಫಾಬಾದ್ಮುಸ್ತಫಾಬಾದ್ (Mustafabad) ಕ್ಷೇತ್ರದಲ್ಲಿ ಈ ಬಾರಿ ಕಮಲ ಅರಳಿದೆ.

ಬಿಜೆಪಿಯ ಮೋಹನ್‌ ಸಿಂಗ್‌ ಬಿಶ್ತ್ (Mohan Singh Bisht) 17,578 ಮತಗಳಿಂದಿಂದ ಆಪ್‌ನ ಅದೀಲ್‌ ಅಹ್ಮದ್‌ ಖಾನ್‌ ವಿರುದ್ಧ ಜಯಗಳಿಸಿದ್ದಾರೆ. ಬಿಜೆಪಿಯ ಮೋಹನ್‌ ಸಿಂಗ್‌ ಬಿಶ್ತ್ 85,2015 ಮತಗಳನ್ನು ಪಡೆದರೆ ಆಪ್‌ನ ಅದೀಲ್‌ ಅಹ್ಮದ್‌ ಖಾನ್‌ 67,637 ಮತಗಳನ್ನು ಪಡೆದಿದ್ದಾರೆ.

ಮಾಜಿ ಕೌನ್ಸಿಲರ್ ಮತ್ತು 2020 ರ ದೆಹಲಿ ಗಲಭೆ ಆರೋಪಿಯಾಗಿರುವ ತಾಹಿರ್ ಹುಸೇನ್‌ಗೆ (Md Tahir Hussain) ಅಸಾದುದ್ದೀನ್‌ ಓವೈಸಿಯ ಎಐಎಂಐಎಂ ಟಿಕೆಟ್‌ ನೀಡಿತ್ತು. ತಾಹಿರ್ ಹುಸೇನ್‌ 33,474 ಮತಗಳನ್ನು ಪಡೆದಿದ್ದಾರೆ. ಇದನ್ನೂ ಓದಿ: ಕೇಜ್ರಿವಾಲ್‌ ಸೋಲಿಸಿ ತಾಯಿಯ ಸೋಲಿಗೆ ಸೇಡು ತೀರಿಸಿದ ಸಂದೀಪ್‌ ದೀಕ್ಷಿತ್‌

 

ಮುಸ್ತಫಾಬಾದ್ ಕ್ಷೇತ್ರದಲ್ಲಿ 39.5% ಮುಸ್ಲಿಮ್‌ ಮತದಾರರಿದ್ದಾರೆ. ಅದೀಲ್‌ ಅಹ್ಮದ್‌ ಖಾನ್‌ ಮತ್ತು ತಾಹಿರ್ ಹುಸೇನ್‌ ಮಧ್ಯೆ ಮತಗಳು ಹಂಚಿ ಹೋಗಿದ್ದರಿಂದ ಮೋಹನ್‌ ಸಿಂಗ್‌ ಬಿಶ್ತ್ ಜಯಗಳಿಸಿದ್ದಾರೆ.

2020ರ ಗಲಭೆಯಲ್ಲಿ ಈಶಾನ್ಯ ದೆಹಲಿಯ ಮುಸ್ತಫಾಬಾದ್ ಅತ್ಯಂತ ಹೆಚ್ಚು ಹಾನಿಗೊಳಗಾದ ಪ್ರದೇಶಗಳಲ್ಲಿ ಒಂದಾಗಿತ್ತು ಅಷ್ಟೇ ಅಲ್ಲದೇ ಕನಿಷ್ಠ 53 ಜನರು ಪ್ರಾಣ ಕಳೆದುಕೊಂಡಿದ್ದರು.

2020ರ ಮುಸ್ತಫಾಬಾದ್ ಚುನಾವಣೆಯಲ್ಲಿ ಆಪ್‌ನ ಹಾಜಿ ಯೂನಿಸ್‌ ಅವರು 20 ಸಾವಿರಕ್ಕೂ ಹೆಚ್ಚು ಮತಗಳಿಂದ ಬಿಜೆಪಿಯ ಜಗದೀಶ್‌ ಪ್ರಧಾನ್‌ ಅವರನ್ನು ಸೋಲಿಸಿದ್ದರು.

ಮೋಹನ್ ಸಿಂಗ್ ಬಿಶ್ತ್ 1998 ರಿಂದ ಕರವಾಲ್ ನಗರದ ಶಾಸಕರಾಗಿದ್ದರು. 2015 ರಲ್ಲಿ ಅವರು ಆಪ್‌ನ ಕಪಿಲ್‌ ಮಿಶ್ರಾ ವಿರುದ್ಧ ಸೋತಿದ್ದರು. 2020 ರಲ್ಲಿ ಕರವಾಲ್ ನಗರದಿಂದ ಗೆದ್ದು ಶಾಸಕರಾಗಿದ್ದರು. ಈ ಬಾರಿಯೂ ಅದೇ ಕ್ಷೇತ್ರದಿಂದ ಟಿಕೆಟ್‌ ಬಯಸಿದ್ದರು. ಆದರೆ ಬಿಜೆಪಿ ಟಿಕೆಟ್‌ ಅನ್ನು ಕಪಿಲ್‌ ಮಿಶ್ರಾಗೆ ನೀಡಿತ್ತು.

ಟಿಕೆಟ್‌ ಕೈಪ್ಪಿದ್ದಕ್ಕೆ ಬಿಶ್ತ್ ಅಸಮಾಧಾನಗೊಂಡಾಗ ಬಿಜೆಪಿ ಹೈಕಮಾಂಡ್‌ ಮಧ್ಯಪ್ರವೇಶಿಸಿ ಪಹಾಡಿ ಮತದಾರರನ್ನು ಗಮನದಲ್ಲಿಟ್ಟುಕೊಂಡು ಮುಸ್ತಫಾಬಾದ್‌ ಟಿಕೆಟ್‌ ನೀಡಿತ್ತು.

Share This Article