ಸೇಲ್ಸ್ ಟ್ಯಾಕ್ಸ್ ಏಜೆಂಟ್ ಕಿಡ್ನ್ಯಾಪ್ ಮಾಡಿ 1.5 ಲಕ್ಷ ಸುಲಿಗೆ – ದೆಹಲಿಯ ಇಬ್ಬರು ಪೊಲೀಸರು ಅರೆಸ್ಟ್

Public TV
2 Min Read

ನವದೆಹಲಿ: ಸೇಲ್ಸ್ ಟ್ಯಾಕ್ಸ್ ಏಜೆಂಟ್‌ನನ್ನು (Sales Tax Agent) ಅಪಹರಿಸಿ 1.5 ಲಕ್ಷ ಸುಲಿಗೆ ಮಾಡಿದ ಆರೋಪದ ಮೇಲೆ ದೆಹಲಿ ಇಬ್ಬರು ಪೊಲೀಸರನ್ನು (Delhi Police) ಬಂಧಿಸಲಾಗಿದೆ.

ದೆಹಲಿಯ ಮೂವರು ಪೊಲೀಸರು ಶನಿವಾರ ಶಾಹರದಾರದ ಜಿಟಿಬಿ ಎನ್‌ಕ್ಲೇವ್‌ನಿಂದ ವ್ಯಕ್ತಿಯೊಬ್ಬನನ್ನು ಅಪಹರಿಸಿದ್ದಾರೆ. ಅಲ್ಲದೇ ಹಣ ನೀಡದಿದ್ದರೆ ಸುಳ್ಳು ಪ್ರಕರಣ ದಾಖಲಿಸುವುದಾಗಿಯೂ ಬೆದರಿಕೆ ಹಾಕಿ, ಆತನನ್ನು ಥಳಿಸಿದ್ದಾರೆ ಎಂದು ಆರೋಪಿಸಲಾಗಿದೆ. 1.5 ಲಕ್ಷ ರೂ. ಹಣ ಪಡೆದ ನಂತರ ಆರೋಪಿಗಳು ಆತನನ್ನು ಬಿಡುಗಡೆ ಮಾಡಿದ್ದಾರೆ. ಬಳಿಕ ಆತ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇದನ್ನೂ ಓದಿ: ಬರ್ತ್‍ಡೇ, ಗ್ರಾಜುಯೇಷನ್ ಪಾರ್ಟಿಗೆ ಬೆಸ್ಟ್ ಇಯರ್‌ರಿಂಗ್ ಡಿಸೈನ್‍ಗಳು

ಈ ಕುರಿತು ತನಿಖೆ ನಡೆಸಿದ ಜಿಟಿಬಿ ಎನ್ಕ್ಲೇವ್ ಪೊಲೀಸರು, ಆರೋಪಿ ಪೊಲೀಸರ ವಿರುದ್ಧ ಅಪಹರಣ ಮತ್ತು ಸುಲಿಗೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಶನಿವಾರ ಸಂಜೆ ಸೀಮಾಪುರಿ ಪೊಲೀಸ್ ಠಾಣೆಯ ಇಬ್ಬರು ಕಾನ್‌ಸ್ಟೆಬಲ್‌ಗಳಾದ ಸಂದೀಪ್ ಮತ್ತು ರಾಬಿನ್ ನನ್ನು ಬಂಧಿಸಿದ್ದಾರೆ. ಇನ್ನೋರ್ವ ಕಾನ್‌ಸ್ಟೆಬಲ್ (Police Constable) ಅಮಿತ್ ಮತ್ತು ಸೀಮಾಪುರಿಯ ವಂಚಕ ಗೌರವ್ ಅಲಿಯಾಸ್ ಅಣ್ಣಾ ಪರಾರಿಯಾಗಿದ್ದಾರೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ರಾಯಚೂರು ಏಮ್ಸ್ ಹೋರಾಟಗಾರರಿಂದ ಶಾಸಕನ ಮನೆಗೆ ಮುತ್ತಿಗೆ

ಏನಿದು ಪ್ರಕರಣ?
ಸಂತ್ರಸ್ತ ವ್ಯಕ್ತಿ ತನ್ನ ಕುಟುಂಬದೊಂದಿಗೆ ಜಿಟಿಬಿ ಎನ್‌ಕ್ಲೇವ್‌ನಲ್ಲಿ ವಾಸಿಸುತ್ತಿದ್ದರು. ಆದಾಯ ತೆರಿಗೆ (Income Tax Department) ಇಲಾಖೆ ಕಚೇರಿಯಲ್ಲಿ ಮಾರಾಟ ತೆರಿಗೆ ಏಜೆಂಟ್ ಆಗಿ ಕೆಲಸ ಮಾಡುವ ಅವರು ಅ.11ರ ರಾತ್ರಿ ತಮ್ಮ ಕಾರಿನಲ್ಲಿ ಮನೆಗೆ ಹಿಂದಿರುಗುತ್ತಿದ್ದರು. ಶಹದಾರಾ ಮೇಲ್ಸೇತುವೆಯನ್ನು ದಾಟಿದಾಗ, ಮೂವರಿದ್ದ ಬಿಳಿ ಬಣ್ಣದ ಕಾರು ಅವರನ್ನು ಅಡ್ಡಗಟ್ಟಿತ್ತು. ನಂತರ ಕಾರಿನಲ್ಲಿದ್ದ ಮೂವರು ತನ್ನನ್ನು ಥಳಿಸಿ ತನ್ನ ಕಾರಿನ ಹಿಂದಿನ ಸೀಟಿನಲ್ಲಿ ಕುಳಿತುಕೊಳ್ಳುವಂತೆ ಸೂಚಿಸಿದರು. ಅವರಲ್ಲೊಬ್ಬರು ತಾವು ಅಪರಾಧ ವಿಭಾಗದವರು ಎಂದು ಹೇಳಿದರು. ಮತ್ತೊಬ್ಬ ಆರೋಪಿ ತನ್ನ ಎದೆಯ ಮೇಲೆ ಪಿಸ್ತೂಲ್ ಇಟ್ಟು ಎಳೆದುಕೊಂಡು, ಜೇಬಿನಲ್ಲಿಟ್ಟಿದ್ದ 35 ಸಾವಿರ ಹಣವನ್ನು ಹೊರತೆಗೆದ. ಆದಾ ನಂತರವೂ 5 ಲಕ್ಷಕ್ಕೆ ಬೇಡಿಕೆಯಿಟ್ಟಿದ್ದರು. ನಂತರ ಅವರನ್ನು ಶಹದಾರ ಜಿಲ್ಲೆಯ ವಿಶೇಷ ಸಿಬ್ಬಂದಿಯ ಕಚೇರಿಗೆ ಕರೆದೊಯ್ಯಲಾಯಿತು ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಅಲ್ಲಿ ಅಧಿಕಾರಿಯೊಂದಿಗೆ ಮಾತನಾಡಿದ ಬಳಿಕ ಆರೋಪಿಗಳು ಅವರನ್ನು ಬಲವಂತವಾಗಿ ಮತ್ತೆ ಕಾರಿನಲ್ಲಿ ಕೂರಿಸಿದ್ದಾರೆ. ಆತನಿಗೆ ವೈದ್ಯಕೀಯ ಚಿಕಿತ್ಸೆ ಕೊಡಿಸುವುದಾಗಿ ಹೇಳಿಕೊಂಡು ಆರೋಪಿಗಳು ಸಂತ್ರಸ್ತನನ್ನು ಜಿಟಿಬಿ ಆಸ್ಪತ್ರೆಯ ಸರ್ವೀಸ್ ಲೇನ್ ಗೆ ಕರೆದೊಯ್ದಿದ್ದಾರೆ. ಅಲ್ಲಿ ಮತ್ತೆ ಬೆದರಿಕೆ ಹಾಕಿದ್ದಾರೆ. ನಂತರ ಸಂತ್ರಸ್ತ ವ್ಯಕ್ತಿ ಆರೋಪಿಗಳು ಏಜೆಂಟ್ ತನ್ನ ಮನೆಗೆ ಕರೆದೊಯ್ದು ಸುಮಾರು 50,000 ರೂ. ಹಣ ನೀಡಿದ್ದಾರೆ. ಸ್ನೇಹಿತನಿಂದ ಸಾಲ ಪಡೆದು ಸುಮಾರು 70 ಸಾವಿರ ರೂ. ಹಣವನ್ನು ಗೌರವ್ ಅಲಿಯಾಸ್ ಅಣ್ಣ ಎಂಬಾತನ ಪತ್ನಿ ಖಾತೆಗೆ ವರ್ಗಾಯಿಸಿದ್ದಾನೆ. ಆ ಬಳಿಕ ಆರೋಪಿಗಳು ಆತನನ್ನು ಬಿಡುಗಡೆ ಮಾಡಿದ್ದಾರೆ ಎಂಬುದಾಗಿ ಹೇಳಿದ್ದಾರೆ.

CRIME 2

ತನಿಖೆಯ ವೇಳೆ 6ನೇ ಬೆಟಾಲಿಯನ್‌ನಲ್ಲಿರುವ ಕಾನ್ಸ್ಟೇಬಲ್ ಅಮಿತ್ ಈ ಸಂಪೂರ್ಣ ಸಂಚು ರೂಪಿಸಿರುವುದು ಪತ್ತೆಯಾಗಿದೆ. ಆರೋಪಿ ವಾಹಿದ್ ಕಾರನ್ನು ಬಳಸಿಕೊಂಡಿದ್ದು, ಗೌರವ್ ಕೂಡ ಅಪರಾಧಕ್ಕೆ ಸೇರಿಕೊಂಡಿದ್ದಾನೆ. ಇದರಲ್ಲಿ ಒಬ್ಬ ಸಬ್ ಇನ್ಸ್ಪೆಕ್ಟರ್‌ ಕೂಡ ಭಾಗಿಯಾಗಿರುವ ಶಂಕೆ ಇದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *