ಕಾಂಗ್ರೆಸ್‌ ಜೊತೆ ಆಪ್‌ ಮದುವೆ ಮಾಡಿಕೊಂಡಿಲ್ಲ: INDIA ಒಕ್ಕೂಟದಿಂದ ಹೊರಬರ್ತಾರಾ ಕೇಜ್ರಿವಾಲ್‌?

Public TV
1 Min Read

ನವದೆಹಲಿ: ಆಪ್‌ (AAP) ಕಾಂಗ್ರೆಸ್ (Congress) ಜೊತೆ ಶಾಶ್ವತವಾಗಿ ದಾಂಪತ್ಯದಲ್ಲಿರಲು ಮದುವೆ (Marriage) ಮಾಡಿಕೊಂಡಿಲ್ಲ. ಸದ್ಯಕ್ಕೆ ಬಿಜೆಪಿಯನ್ನು ಸೋಲಿಸುವುದು ಮತ್ತು ಪ್ರಸ್ತುತ ಆಡಳಿತದಲ್ಲಿರುವ ಸರ್ವಾಧಿಕಾರಿ ಮತ್ತು ಗೂಂಡಾಗಿರಿಯನ್ನು ಕೊನೆಗೊಳಿಸುವುದು ನಮ್ಮ ಗುರಿಯಾಗಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ (Arvind Kejriwal) ಹೇಳಿದ್ದಾರೆ.

ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ದೇಶವನ್ನು ಉಳಿಸುವುದು ಮುಖ್ಯ, ಬಿಜೆಪಿಯನ್ನು ಸೋಲಿಸಲು ಮತ್ತು ಒಬ್ಬ ಅಭ್ಯರ್ಥಿಯನ್ನು ಹಾಕಲು ಆಪ್‌ ಮತ್ತು ಕಾಂಗ್ರೆಸ್‌ ಮೈತ್ರಿ ಮಾಡಿಕೊಂಡಿದೆ ಎಂದರು.

ದೆಹಲಿಯಲ್ಲಿ ಕಾಂಗ್ರೆಸ್‌ ಮತ್ತು ಆಪ್‌ ಮೈತ್ರಿ ಮಾಡಿಕೊಂಡಿದೆ. ಪಂಜಾಬ್‌ನಲ್ಲಿ (Punjab) ಎರಡು ಪಕ್ಷಗಳ ಮಧ್ಯೆ ಇರುವ ಸ್ಪರ್ಧೆಯ ಬಗ್ಗೆ ಕೇಳಿದ್ದಕ್ಕೆ, ಪಂಜಾಬ್‌ನಲ್ಲಿ ಬಿಜೆಪಿಗೆ ಯಾವುದೇ ಅಸ್ತಿತ್ವವಿಲ್ಲ ಎಂದು ಉತ್ತರಿಸಿದರು. ಇದನ್ನೂ ಓದಿ: ಪ್ರಜ್ವಲ್ ಸಲೂನ್‌ಗೆ ಹೋಗಿ ಕ್ಲೀನ್ ಆಗಿ ಬಂದಿದ್ದಾರೆ, ಇದಕ್ಕೆ ಅಮಿತ್ ಶಾ ಡೈರೆಕ್ಟರ್: ಪ್ರಿಯಾಂಕ್‌ ಖರ್ಗೆ ವಾಗ್ದಾಳಿ

ದೆಹಲಿ ಮುಖ್ಯಮಂತ್ರಿ ಸ್ಥಾನಕ್ಕೆ ನಾನು ರಾಜೀನಾಮೆ ನೀಡುವ ಯಾವುದೇ ಪ್ರಶ್ನೆಯಿಲ್ಲ. ನಾನು ಯಾವುದಕ್ಕೂ ಹೆದರುವುದಿಲ್ಲ. ನಾನು ಜೈಲಿಗೆ ಮರಳುವುದು ಸಮಸ್ಯೆಯಲ್ಲ. ಈ ದೇಶದ ಭವಿಷ್ಯವು ಅಪಾಯದಲ್ಲಿದೆ. ಅವರು ನನ್ನನ್ನು ಎಷ್ಟು ದಿನ ಬೇಕಾದರೂ ಜೈಲಿಗೆ ಹಾಕಲಿ, ನಾನು ಹೆದರುವುದಿಲ್ಲ ಎಂದು ತಿಳಿಸಿದರು.

ಸದ್ಯ ಅರವಿಂದ್ ಕೇಜ್ರಿವಾಲ್ ಅವರು ಜೂನ್ 1 ರವರೆಗೆ ಲೋಕಸಭೆ ಚುನಾವಣೆ (Lok Sabha Election) ಪ್ರಚಾರಕ್ಕಾಗಿ ಮಧ್ಯಂತರ ಜಾಮೀನಿನ (Bail) ಮೇಲೆ ಹೊರಗಿದ್ದಾರೆ. ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಜೂನ್ 2 ರಂದು ಅವರು ತಿಹಾರ್ ಜೈಲಿನಲ್ಲಿ ಶರಣಾಗಬೇಕಾಗುತ್ತದೆ.

 

Share This Article