ಸಾರ್ವಜನಿಕ ಹಿತದೃಷ್ಟಿಗೆ ಸೇವೆ ಸಲ್ಲಿಸುವ ನಮ್ಮ ಸಂಕಲ್ಪದ ಮೇಲೆ ಹೇಡಿತನದ ಕೃತ್ಯ: ಹಲ್ಲೆ ಬಗ್ಗೆ ದೆಹಲಿ ಸಿಎಂ ರಿಯಾಕ್ಷನ್‌

By
1 Min Read

ನವದೆಹಲಿ: ವ್ಯಕ್ತಿಯೊಬ್ಬ ತಮ್ಮ ಮೇಲೆ ಹಲ್ಲೆ ನಡೆಸಿದ ಬಗ್ಗೆ ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ.

ಸಾರ್ವಜನಿಕ ಕುಂದುಕೊರತೆ ಪರಿಹಾರ ಅಧಿವೇಶನದ ಸಂದರ್ಭದಲ್ಲಿ ವ್ಯಕ್ತಿಯೊಬ್ಬ, ದೆಹಲಿ ಸಿಎಂ ಮೇಲೆ ಹಲ್ಲೆ ನಡೆಸಿದ್ದ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿಎಂ, ಇದು ನನ್ನ ಮೇಲೆ ಮಾತ್ರವಲ್ಲ, ದೆಹಲಿ ಮತ್ತು ಸಾರ್ವಜನಿಕ ಹಿತದೃಷ್ಟಿಗೆ ಸೇವೆ ಸಲ್ಲಿಸುವ ನಮ್ಮ ಸಂಕಲ್ಪದ ಮೇಲೆ ಮಾಡಿದ ಹೇಡಿತನದ ಪ್ರಯತ್ನ ಎಂದು ಆರೋಪಿಸಿದ್ದಾರೆ. ನಾನು ಆರೋಗ್ಯವಾಗಿದ್ದೇನೆ. ಶೀಘ್ರದಲ್ಲೇ ಕೆಲಸಕ್ಕೆ ಮರಳುತ್ತೇನೆ ಎಂದು ತಿಳಿಸಿದ್ದಾರೆ.

ಗುಜರಾತ್‌ನ ರಾಜ್‌ಕೋಟ್‌ನ ಸಕಾರಿಯಾ ರಾಜೇಶ್‌ಭಾಯ್ ಖಿಮ್ಜಿಭಾಯ್ ಎಂಬಾತ ಸಿಎಂಗೆ ಕಪಾಳಮೋಕ್ಷ ಮಾಡಿದ್ದ. ಅರ್ಜಿದಾರರ ಸೋಗಿನಲ್ಲಿ ಮುಖ್ಯಮಂತ್ರಿಯನ್ನು ಭೇಟಿಯಾಗುವಾಗ, ಅವರ ಮೇಲೆ ಹಲ್ಲೆ ನಡೆಸಿದ್ದ.

ಸಿಎಂಗೆ ಕಪಾಳಮೋಕ್ಷ ಮಾಡಿ ತಳ್ಳಿದ್ದಾನೆ. ನಂತರ ಅವರ ಭದ್ರತಾ ಸಿಬ್ಬಂದಿ, ಆತನ ಮೇಲೆ ಹಲ್ಲೆ ನಡೆಸಿದ್ದಾರೆ. ಆ ವ್ಯಕ್ತಿ ಹಲ್ಲೆ ಯಾಕೆ ನಡೆಸಿದ ಎಂಬ ಬಗ್ಗೆ ನಿಖರ ಮಾಹಿತಿ ಸಿಕ್ಕಿಲ್ಲ. ಆರೋಪಿ ವಿರುದ್ಧ ಕೊಲೆ ಯತ್ನದ ಪ್ರಕರಣ ದಾಖಲಿಸಲಾಗಿದೆ.

Share This Article