ಸಿಕ್ಸ್‌ ಮೇಲೆ ಸಿಕ್ಸ್‌, ನೋಟ್‌ಬುಕ್ ಸ್ಟೈಲ್‌ ಸಂಭ್ರಮಾಚರಣೆ – ರಾಥಿಯನ್ನು ಬೆಂಡೆತ್ತಿ ಕಿಚಾಯಿಸಿದ ರಾಣಾ

By
2 Min Read

ನವದೆಹಲಿ: ದೆಹಲಿ ಪ್ರೀಮಿಯರ್‌ ಲೀಗ್‌ (Delhi Premier League) ಕ್ರಿಕೆಟಿನಲ್ಲಿ ಡೆಲ್ಲಿ ಸೂಪರ್‌ಸ್ಟಾರ್‌ ತಂಡದ ದಿಗ್ವೇಶ್‌ ರಾಥಿ (Digvesh Rathi) ಮತ್ತು ಡೆಲ್ಲಿ ಲಯನ್ಸ್‌ ತಂಡದ ನಾಯಕ ನಿತೀಶ್‌ ರಾಣಾ (Nitish Rana) ಪರಸ್ಪರ ಜಗಳಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್‌ ಸೃಷ್ಟಿಸಿದೆ.

10ನೇ ಓವರ್‌ ಎಸೆಯುವಾಗ ನಿತೀಶ್‌ ರಾಣಾ ಕ್ರೀಸ್‌ನಲ್ಲಿ ಇದ್ದರು. ಈ ವೇಳೆ ರಾಥಿ ಬೌಲಿಂಗ್‌ ಮಾಡಲು ಓಡಿ ಬಂದಿದ್ದರೂ ಬಾಲ್‌ ಎಸೆಯಲಿಲ್ಲ. ಇದಕ್ಕೆ ಸಿಟ್ಟಾದ ರಾಣಾ ರಾಥಿ ಮತ್ತೊಮ್ಮೆ ಬಾಲ್‌ ಎಸೆಯಲು  ಬಂದಾಗ ಕೈ ಎತ್ತಿ ತಡೆದು ಬೌಲಿಂಗ್‌ ನಿಲ್ಲಿಸಿದರು. ನಂತರ ಎಸೆತವನ್ನು ರಿವರ್ಸ್‌ ಸ್ವೀಪ್‌ ಮೂಲಕ ಸಿಕ್ಸ್‌ಗೆ ಅಟ್ಟಿದರು.

ಈ ಬೆನ್ನಲ್ಲೇ ರಾಣಾ ಅವರು ರಾಥಿ ಸ್ಟೈಲ್‌ನಲ್ಲಿ ನೋಟ್‌ಬುಕ್ ಸಂಭ್ರಮಾಚರಣೆ ಮಾಡಿ ಕಿಚಾಯಿಸಿದರು. ಇದಕ್ಕೆ ರಾಥಿ ಸಿಟ್ಟಾಗಿ ಏನೋ ಹೇಳಿದ್ದಾರೆ. ರಾಥಿ ಮಾತಿಗೆ ಕೋಪಗೋಂಡ ರಾಣಾ ಜಗಳ ಮಾಡುತ್ತಾ ರಾಥಿ ಹತ್ತಿರ ಬಂದರು. ಈ ಸಮಯದಲ್ಲಿ ಉಳಿದ ಆಟಗಾರರು ಮತ್ತು ಅಂಪೈರ್‌ ಮಧ್ಯಪ್ರವೇಶಿಸಿ ರಾಣಾ ಅವರನ್ನು ತಡೆದರು. ಇದನ್ನೂ ಓದಿ: ಮುಖ್ಯಕೋಚ್‌ ಹುದ್ದೆಗೆ ಗುಡ್‌ಬೈ ಒಂದೇ ವರ್ಷಕ್ಕೆ RR ಫ್ರಾಂಚೈಸಿಯಿಂದ ಹೊರಬಂದ ರಾಹುಲ್‌ ದ್ರಾವಿಡ್‌

ನಿತೀಶ್‌ ರಾಣಾ ಅವರ ಅಜೇಯ ಶತಕ 134 ರನ್‌(55 ಎಸೆತ, 8 ಬೌಂಡರಿ, 15 ಸಿಕ್ಸ್‌) ನೆರವಿನಿಂದ ಡೆಲ್ಲಿ ಲಯನ್ಸ್‌ 3 ವಿಕೆಟ್‌ ನಷ್ಟಕ್ಕೆ 202 ರನ್‌ ಹೊಡೆದು 7 ವಿಕೆಟ್‌ಗಳ ಜಯ ಸಾಧಿಸಿತು. ಅದರಲ್ಲೂ ದಿಗ್ವೇಶ್‌ ರಾಥಿ ಎಸೆದ 11 ಎಸೆತದಲ್ಲಿ ರಾಣಾ 38 ರನ್‌ ಹೊಡೆದು ಬೆಂಡೆತ್ತಿದ್ದರು. ಇದನ್ನೂ ಓದಿ: 5 ಎಸೆತಗಳಲ್ಲಿ 5 ವಿಕೆಟ್ ಮತ್ತೆ ದಿಗ್ವೇಶ್‌ ರಾಥಿ ಕಮಾಲ್‌

26 ವರ್ಷದ ದಿಗ್ವೇಶ್‌ ಈ ಬಾರಿಯ ಐಪಿಎಲ್‌ನಲ್ಲಿ ಕಮಾಲ್‌ ಮಾಡಿದ್ದರು. 13 ಪಂದ್ಯಗಳಲ್ಲಿ 14 ವಿಕೆಟ್‌ ಪಡೆದು ಮಿಂಚಿದ್ದರು. ಚೊಚ್ಚಲ ಐಪಿಎಲ್‌ ಆವೃತ್ತಿಯಲ್ಲಿ ಉದ್ಧಟತನ ತೋರಿದ್ದಕ್ಕೆ ದಿಗ್ವೇಶ್ ಅವರನ್ನು ಅಮಾನತು ಮಾಡಲಾಗಿತ್ತು. ವಿಕೆಟ್‌ ಪಡೆದ ನಂತರ ನೋಟ್‌ಬುಕ್ ಸಂಭ್ರಮಾಚರಣೆ ಮಾಡಿದ್ದಕ್ಕಾಗಿ ರಾಥಿ ಅವರಿಗೆ ದಂಡ ವಿಧಿಸಲಾಗಿತ್ತು.

Share This Article