ಪ್ರತೀಕಾರಕ್ಕೆ ಕೃತ್ಯ ಎಂದು ಪೋಸ್ಟ್‌ – ದೆಹಲಿ ಸ್ಫೋಟಕ್ಕೆ ಖಲಿಸ್ತಾನಿ ನಂಟು, ತನಿಖೆ ಆರಂಭ

Public TV
1 Min Read

ನವದೆಹಲಿ: ರೋಹಿಣಿಯ ಪ್ರಶಾಂತ್ ವಿಹಾರ್ ಪ್ರದೇಶದಲ್ಲಿನ ಸಿಆರ್‌ಪಿಎಫ್ ಶಾಲೆಯ (CRPF) ಬಳಿ ನಡೆದ ಸ್ಫೋಟಕ್ಕೆ (Blast) ಖಲಿಸ್ತಾನಿ ನಂಟಿದ್ಯಾ ಎಂಬ ಶಂಕೆ ಈಗ ಎದ್ದಿದೆ.

ಭಾರತೀಯ ಏಜೆಂಟರು ಖಲಿಸ್ತಾನ್ (Khalistani) ಪರ ಪ್ರತ್ಯೇಕತಾವಾದಿಗಳನ್ನು ಗುರಿಯಾಗಿಸಿಕೊಂಡಿದ್ದಕ್ಕೆ ಪ್ರತೀಕಾರವಾಗಿ ಸ್ಫೋಟ ನಡೆಸಿದ್ದೇವೆ ಎಂದು ಪಾಕಿಸ್ತಾನದ ಟೆಲಿಗ್ರಾಂ ಚಾನೆಲ್‌ನಲ್ಲಿ ಖಲಿಸ್ತಾನಿ ಗುಂಪು ಹೇಳಿಕೊಂಡಿದೆ.

ಭಾನುವಾರ ನಡೆದ ಸ್ಫೋಟದ (Blast) ತೀವ್ರತೆಗೆ ಹತ್ತಿರದಲ್ಲಿದ್ದ ಕಟ್ಟಡಗಳು ಅದುರಿವೆ. ಸ್ಫೋಟದ ಶಬ್ಧ ಸುಮಾರು 2 ಕಿ.ಮೀ ದೂರದವರೆಗೆ ಕೇಳಿದೆ. ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ದಳ ನಡೆಸುತ್ತಿದೆ.

ಕಡಿಮೆ ತೀವ್ರತೆಯ ಸುಧಾರಿತ ಸ್ಫೋಟಕ ಸಾಧನ (IED) ಬಳಸಿ ಈ ಕೃತ್ಯ ಎಸಗಲಾಗಿದೆ. ಬಾಲ್‌ ಬೇರಿಂಗ್‌ ಇರಲಿಲ್ಲ. ಟೈಮರ್ ಅಥವಾ ರಿಮೋಟ್‌ನಿಂದ ಇದನ್ನು ನಿಯಂತ್ರಿಸಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಇದನ್ನೂ ಓದಿ: ಖಲಿಸ್ತಾನಿ ಉಗ್ರರು ಕೆನಡಾ ಗುಪ್ತಚರ ಸಂಸ್ಥೆಯ ಆಸ್ತಿ: ಭಾರತೀಯ ಹೈಕಮಿಷನರ್ ಸಂಜಯ್ ಕುಮಾರ್ ವರ್ಮಾ ಕಿಡಿ

ಪೋಸ್ಟ್‌ನಲ್ಲಿ ಏನಿದೆ?
ಭಾರತೀಯ ಹೇಡಿ ಸಂಸ್ಥೆ ಮತ್ತು ಮಾಸ್ತರ್‌ ನಮ್ಮ ಸದಸ್ಯರನ್ನು ಗುರಿಯಾಗಿಸಿ ಗುಂಡಾಗಳನ್ನು ನೇಮಿಸಿ ನಮ್ಮ ಧ್ವನಿಯನ್ನು ಹತ್ತಿಕ್ಕುತ್ತಿದ್ದಾರೆ ಎಂದರೆ ಅದು ಮುರ್ಖತನವಾದಿತು. ನಾವು ಎಷ್ಟು ಹತ್ತಿರದಲ್ಲಿದ್ದೇವೆ ಮತ್ತು ನಾವು ಯಾವಾಗ ಬೇಕಾದರೂ ದಾಳಿ ನಡೆಸಲು ಸಮರ್ಥರಿದ್ದೇವೆ ಎಂದು ಜಸ್ಟೀಸ್‌ ಲೀಗ್‌ ಇಂಡಿಯಾ ಹೇಳಿಕೊಂಡಿದೆ. ಈ ಪೋಸ್ಟ್‌ನೊಂದಿಗೆ ಸ್ಫೋಟಗೊಳ್ಳುತ್ತಿರುವ ದೃಶ್ಯದ ವಿಡಿಯೋವನ್ನು ಅಪ್ಲೋಡ್‌ ಮಾಡಿ ಖಲಿಸ್ತಾನ ಜಿಂದಾಬಾದ್‌ ಎಂದು ಹೇಳಿದೆ.

ಸ್ಫೋಟದ ನಂತರ, ರಾಷ್ಟ್ರೀಯ ತನಿಖಾ ದಳ, ರಾಷ್ಟ್ರೀಯ ಭದ್ರತಾ ಪಡೆ (ಎನ್‌ಎಸ್‌ಜಿ), ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ಮತ್ತು ದೆಹಲಿ ಪೊಲೀಸರ ತಂಡಗಳು ಪ್ರದೇಶವನ್ನು ಸುತ್ತುವರೆದಿವೆ. ವಿಧಿವಿಜ್ಞಾನ ತಜ್ಞರು ಸ್ಥಳದಿಂದ ಮಾದರಿಗಳನ್ನು ಸಂಗ್ರಹಿಸಿದ್ದಾರೆ. ಸಿಸಿಟಿವಿ ಕ್ಯಾಮೆರಾದಲ್ಲಿ ಸ್ಫೋಟ ಸೆರೆಯಾಗಿದೆ. ಸ್ಫೋಟದ ತೀವ್ರತೆಗೆ ಹತ್ತಿರದ ಅಂಗಡಿಗಳ ಕಿಟಕಿ ಗಾಜುಗಳನ್ನು ನಾಶಪಡಿಸಿದೆ ಮತ್ತು ಹತ್ತಿರದಲ್ಲಿ ನಿಲ್ಲಿಸಿದ್ದ ಕೆಲವು ಕಾರುಗಳನ್ನು ಹಾನಿಗೊಯಾಗಿದೆ.

ಭಾನುವಾರ ಬೆಳಗ್ಗೆ 7:35ರಿಂದ 7:40ರ ನಡುವೆ ಬಾಂಬ್ ಸ್ಫೋಟಗೊಂಡಿದೆ ಎಂದು ಸ್ಥಳೀಯ ನಿವಾಸಿಗಳು ಹೇಳಿದ್ದರಿಂದ ತಡರಾತ್ರಿ ಬಾಂಬ್ ಇರಿಸಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

 

Share This Article