ವಿವಾದಾತ್ಮಕ ಹೇಳಿಕೆಯಿಂದ ಸದ್ದು ಮಾಡಿದ ದೆಹಲಿ ಚುನಾವಣೆಯ ಬಹಿರಂಗ ಪ್ರಚಾರ ಅಂತ್ಯ

Public TV
2 Min Read

– ಕುತೂಹಲದತ್ತ ದಿಲ್ಲಿ ಚುನಾವಣೆ, ಶನಿವಾರ ಮತದಾನ

ನವದೆಹಲಿ: ಕಳೆದ ಹದಿನೈದು ದಿನಗಳಿಂದ ರಂಗು ತುಂಬಿದ ದೆಹಲಿ ಚುನಾವಣಾ ಕಣದ ಬಹಿರಂಗ ಪ್ರಚಾರಕ್ಕೆ ಇಂದು ತೆರೆ ಬಿದ್ದಿದೆ. ನಾಳೆ ಮನೆ ಮನೆ ಪ್ರಚಾರ ನಡೆಯಲಿದ್ದು ಮತದಾರರನ್ನು ಒಲಿಸಿಕೊಳ್ಳುವ ಕಡೆಯ ಪ್ರಯತ್ನ ನಡೆಯಲಿದೆ.

ಹದಿನೈದುಕ್ಕೂ ಹೆಚ್ಚು ದಿನ ನಡೆದ ದೆಹಲಿ ವಿಧಾನಸಭೆ ಚುನಾವಣೆ ಪ್ರಚಾರ ಹೊಸ ಚರ್ಚೆಯನ್ನು ಹುಟ್ಟುಹಾಕಿದೆ. ಆಡಳಿತಾರೂಢ ಆಮ್ ಅದ್ಮಿ ಪಾರ್ಟಿ ಹೊಸ ಮಾದರಿಯಲ್ಲಿ ಪ್ರಚಾರ ನಡೆಸುವ ಮೂಲಕ ಕುತೂಹಲ ಮೂಡಿಸಿತು. ಪ್ರಚಾರದ ಆರಂಭದ ದಿನದಿಂದಲೂ ಆಮ್ ಅದ್ಮಿ ಅಭಿವೃದ್ಧಿ ಮೂಲ ಮಂತ್ರ ಪಠಿಸುತ್ತಾ ಬಂದಿದೆ. ಕಳೆದ ಐದು ವರ್ಷದ ಅವಧಿಯಲ್ಲಿ ತಾನು ಮಾಡಿದ ಅಭಿವೃದ್ಧಿ ಕೆಲಸಗಳೇನು ಮತ್ತು ಮುಂದಿನ ಐದು ವರ್ಷಕ್ಕೆ ತಮ್ಮ ಪ್ರಣಾಳಿಕೇನು ಎಂಬುದರ ಮೇಲೆ ಪ್ರಚಾರ ನಡೆಸಿದೆ. ಬಿಜೆಪಿ ಬೀಸಿದ ಬಲೆಗೆ ಬೀಳದೆ ವಿವಾದಗಳಿಗೆ ಆಸ್ಪದ ನೀಡದೆ ಎಚ್ಚರಿಕೆಯಿಂದ ಪ್ರಚಾರ ನಡೆಸಿದೆ. ಇದನ್ನೂ ಓದಿ: ದೆಹಲಿ ಸರ್ಕಾರ ರಚನೆ ಫಿಕ್ಸ್, 45 ಸ್ಥಾನ ಗೆಲ್ಲುತ್ತೇವೆ: ಅಮಿತ್ ಶಾ 

ಬಿಜೆಪಿ ಮತ್ತು ಕಾಂಗ್ರೆಸ್ ಭಿನ್ನವಿಲ್ಲದಂತೆ ಎದಿನಂತೆ ಅದೇ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡದ್ದವು. ಕಾಂಗ್ರೆಸ್ ಆಮ್ ಅದ್ಮಿ ಮೇಲೆ ಸ್ವಲ್ಪ ಮೃಧು ಧೋರಣೆ ಕಂಡು ಬಂದರೂ ಆಡಳಿತ ವಿಚಾರದಲ್ಲಿ ರಾಜ್ಯವನ್ನು ಸರ್ಕಾರವನ್ನು ಟೀಕಿಸುತ್ತು. ಜೊತೆಗೆ ಬದ್ಧ ವೈರಿ ಬಿಜೆಪಿ, ಪ್ರಧಾನಿ ಮೋದಿ ಕೇಂದ್ರ ಸರ್ಕಾರದ ಯೋಜನೆಗಳು ಹೊಸ ಕಾಯ್ದೆಗಳ ವಿರುದ್ಧ ಕಾಂಗ್ರೆಸ್ ವಾಗ್ದಾಳಿ ನಡೆಸಿದೆ. ಕೊನೆಯ ಎರಡು ದಿನ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ, ಪ್ರಿಯಾಂಕ ಗಾಂಧಿ ಅಬ್ಬರದ ಪ್ರಚಾರ ನಡೆಸಿದರು.

ಬಿಜೆಪಿ ಎಂದಿನಂತೆ ಪ್ರಧಾನಿ ನರೇಂದ್ರ ಮೋದಿ ಕೇಂದ್ರ ಸರ್ಕಾರ ಯೋಜನೆಗಳನ್ನು ಬಳಸಿಕೊಂಡು ಚುನಾವಣಾ ಪ್ರಚಾರ ನಡೆಸಿದೆ. ಈ ನಡುವೆ ಸಿಎಎ ವಿರೋಧದ ಪ್ರತಿಭಟನೆಗಳನ್ನು ಟೀಕಿಸುವ ಭರದಲ್ಲಿ ಕೇಂದ್ರ ಸಚಿವರ ದಂಡು ವಿವಾದ್ಮಕ ಹೇಳಿಕೆಯನ್ನು ನೀಡಿದ್ದರು ಮತ್ತು ಗೃಹ ಸಚಿವ ಅಮಿತ್ ಶಾ ಪ್ರಧಾನಿ ಮೋದಿ ಪಾಕಿಸ್ತಾನವನ್ನು ದಿಲ್ಲಿ ಚುನಾವಣಾ ಕಣದಲ್ಲಿ ಚರ್ಚೆಗೆ ಎಳೆದು ತಂದಿದ್ದರು. ಸಿಎಂ ಅರವಿಂದ ಕೇಜ್ರಿವಾಲ್ ಭಯೋತ್ಪಾದಕ ಪಾಕಿಸ್ತಾನದ ಮೇಲೆ ಮೃಧು ಧೋರಣೆ ಹೊಂದಿದ್ದಾರೆಂದು ಬಿಜೆಪಿ ನಾಯಕರು ಟೀಕಿಸಿದ್ದರು. ಇದು ಸಾಮಾಜಿಕ ಜಾಣತಾಣದಲ್ಲಿ ಜನರ ವಿರೋಧಕ್ಕೂ ಕಾರಣವಾಗಿತ್ತು.

ಆಪ್ ಪ್ರಚಾರ ಕಲೆಯನ್ನು ಅನುಸರಿಸಿದ ಬಿಜೆಪಿ ಮನೆ ಮನೆ ಪ್ರಚಾರಕ್ಕೆ ಹೆಚ್ಚು ಆದ್ಯತೆ ನೀಡಿತ್ತು. ದಕ್ಷಿಣ ಭಾರತದ ಮತಗಳನ್ನು ಸೆಳೆಯುವ ಪ್ರಯತ್ನ ಮಾಡಿತ್ತು. ಅಭಿವೃದ್ಧಿ ಮಂತ್ರ ಪಠಸಿ ಆಮ್ ಅದ್ಮಿ ಪ್ರಚಾರ ನಡೆಸಿದರೆ ಕಾಂಗ್ರೆಸ್ ಬಿಜೆಪಿ ಆರೋಪ ಪ್ರತ್ಯಾರೋಪಗಳಲ್ಲಿ ಕ್ಯಾಂಪೇನ್ ಮಾಡಿ ಮುಗಿಸಿದೆ. ಶನಿವಾರ ಮತದಾನ ನಡೆಯಲಿದ್ದು ಮತದಾರರ ಯಾವುದಕ್ಕೆ ಮನ್ನಣೆ ಕೊಡಲಿದ್ದಾನೆ ಎನ್ನುವುದು ಫೆಬ್ರವರಿ 11 ಕ್ಕೆ ತಿಳಿಯಲಿದೆ.

Share This Article
Leave a Comment

Leave a Reply

Your email address will not be published. Required fields are marked *