ವಿಚಾರಣೆ ನಡೆಸಿದ ಕೋರ್ಟ್, ಪೊಲೀಸರು ಹೆಚ್ಚಿನ ವಿಚಾರಣೆಗೆ ಸಮಯ ಕೇಳಿದ ಹಿನ್ನೆಲೆ ಎಂಟು ದಿನ ಪೊಲೀಸ್ ಕಸ್ಟಡಿಗೆ ನೀಡಿದೆ. ವಿಚಾರಣೆ ವೇಳೆ ಆರೋಪಿ ಸರಬ್ಜೀತ್ ಸಿಂಗ್ ತಮ್ಮ ಸಹೋದರಿಯ ಮಗ ಹರ್ಮನ್ ಕಾಣೆಯಾಗಿರುವುದರ ಬಗ್ಗೆ ಪೊಲೀಸರ ಗಮನ ಸೆಳೆಯಲು ಈ ಕೃತ್ಯ ಮಾಡಿದ್ದೇನೆ. ಅದೇ ಕಾರಣಕ್ಕೆ ಸ್ಪೀಕರ್ ವಿಜೇಂದರ್ ಗುಪ್ತಾ ಅವರನ್ನು ಭೇಟಿ ಮಾಡಲು ಬಂದಿದ್ದೆ ಎಂದು ಹೇಳಿದ್ದಾರೆ ಎನ್ನಲಾಗಿದೆ. ಆದರೆ ಕುಟುಂಬಸ್ಥರು ಆರೋಪಿಯು ಮಾನಸಿಕ ಅಸ್ಥಿರತೆಯಿಂದ ಬಳಲುತ್ತಿದ್ದಾನೆ ಎಂದು ಹೇಳಿದ್ದಾರೆ. ಅವರ ಚಿಕಿತ್ಸೆಗೆ ಸಂಬಂಧಿಸಿದ ದಾಖಲೆಗಳನ್ನೂ ಪೊಲೀಸರಿಗೆ ನೀಡಿದ್ದಾರೆ. ಇದನ್ನೂ ಓದಿ: ದೆಹಲಿ ವಿಧಾನಸೌಧದಲ್ಲಿ ಹೂಗುಚ್ಛ ಇಟ್ಟು, ಸ್ಪೀಕರ್ ಕಾರಿನ ಮೇಲೆ ಇಂಕ್ ಎರಚಿದ್ದವ 2 ಗಂಟೆಯಲ್ಲೇ ಅರೆಸ್ಟ್
ಪೊಲೀಸರು ಈ ಪ್ರಕರಣದಲ್ಲಿ ಭದ್ರತಾ ಉಲ್ಲಂಘನೆ, ಕೊಲೆ ಪ್ರಯತ್ನ ಸೇರಿದಂತೆ ವಿವಿಧ ಸೆಕ್ಷನ್‌ಗಳಡಿ ಪ್ರಕರಣ ದಾಖಲಿಸಿ, ತನಿಖೆ ನಡೆಸುತ್ತಿದ್ದಾರೆ.’
ಆಗಿದ್ದೇನು?
ಸೋಮವಾರ (ಏ.6) ಮಧ್ಯಾಹ್ನ 2 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ.UP-26 AZ 8090 ಸಂಖ್ಯೆಯ ಟಾಟಾ ಸಿಯೆರಾ ಕಾರು, ಭದ್ರತೆಗಾಗಿ CRPF ಸಿಬ್ಬಂದಿ ನಿಯೋಜಿಸಲಾಗಿದ್ದ VIP ಪ್ರವೇಶದ್ವಾರದಲ್ಲಿ ಗೇಟ್ ಅನ್ನು ಭೇದಿಸಿ ಒಳಗೆ ಪ್ರವೇಶಿಸಿತು. ತಡೆಗೋಡೆಯನ್ನು ಭೇದಿಸಿ ಮುಖವಾಡ ಧರಿಸಿಕೊಂಡಿದ್ದ ಚಾಲಕ ವಾಹನವನ್ನು ಹಠಾತ್ತನೆ ನಿಲ್ಲಿಸಿ, ಗೇಟ್ ಬಳಿ ಹೂಗುಚ್ಛವನ್ನು ಇರಿಸಿ ನಂತರ ಎಸ್ಕೇಪ್ ಆಗಿದ್ದ. ಈ ವೇಳೆ ಬೂಮ್ ಬ್ಯಾರಿಯರ್‌ಗೂ ಡಿಕ್ಕಿ ಹೊಡೆದಿದ್ದು, ಸಂಪೂರ್ಣ ಘಟನೆ ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿದೆ.
ಪೊಲೀಸರು ತ್ವರಿತ ಕ್ರಮ ಕೈಗೊಂಡು ಸುಮಾರು ಎರಡು ಗಂಟೆಗಳೊಳಗೆ ಮೂವರು ಆರೋಪಿಗಳನ್ನು ಬಂಧಿಸಿದ್ದು, ಕಾರನ್ನು ವಶಪಡಿಸಿಕೊಂಡಿದ್ದಾರೆ. ಕಾರು ಚಾಲಕನಾಗಿದ್ದ ಸರಬ್ಜೀತ್ ಸಿಂಗ್‌ನನ್ನು ಮುಖ್ಯ ಆರೋಪಿಯಾಗಿ ಗುರುತಿಸಲಾಗಿದೆ. ಈತ ಉತ್ತರ ಪ್ರದೇಶದ ಪಿಲಿಭೀತ್‌ನ ಪುರಾನ್‌ಪುರ್ ಪ್ರದೇಶದ ನಿವಾಸಿ ಎಂದು ತಿಳಿದುಬಂದಿದೆ.ಇದನ್ನೂ ಓದಿ: ದೆಹಲಿ ವಿಧಾನಸೌಧದಲ್ಲಿ ಭದ್ರತಾಲೋಪ – ಸ್ಪೀಕರ್ ಕಾರ್ ಮೇಲೆ ಇಂಕ್ ಎರಚಿ ಆಗಂತುಕರು ಎಸ್ಕೇಪ್

