ದೆಹಲಿಯಲ್ಲಿ ಪೊಲ್ಯೂಷನ್ ಲಾಕ್‍ಡೌನ್ – 1 ವಾರ ಆನ್‌ಲೈನ್‌ ಕ್ಲಾಸ್‌, ವರ್ಕ್‌ ಫ್ರಂ ಹೋಂ

Public TV
1 Min Read

ನವದೆಹಲಿ: ವಾಯುಮಾಲಿನ್ಯ ಮಿತಿಮೀರಿರುವ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ಪೊಲ್ಯೂಷನ್ ಲಾಕ್‍ಡೌನ್ ಜಾರಿ ಮಾಡಲಾಗಿದೆ.

ಭಾನುವಾರದಿಂದ ಒಂದು ವಾರದ ಮಟ್ಟಿಗೆ ಕಾಲ ಶಾಲೆ, ಕಾಲೇಜುಗಳಿಗೆ ಆನ್‌ಲೈನ್‌ ಕ್ಲಾಸ್‌ ಮಾಡಬೇಕು ಮತ್ತು ಖಾಸಗಿ ಕಚೇರಿಗಳು ವರ್ಕ್‌ ಫ್ರಂ ಹೋಂ ಮೂಲಕ ಕಾರ್ಯನಿರ್ವಹಿಸಬೇಕು ಎಂದು ಆದೇಶ ಹೊರಡಿಸಲಾಗಿದೆ. ಕಟ್ಟಡ ನಿರ್ಮಾಣ, ಕಲ್ಲು ಕ್ರಷರ್ ಸಹ ಒಂದು ವಾರ ಬಂದ್ ಆಗಲಿದೆ.

ಪೂರ್ಣ ಪ್ರಮಾಣದ ಲಾಕ್‍ಡೌನ್ ಬಗ್ಗೆಯೂ ಚಿಂತನೆ ನಡೆದಿದೆ ಎಂದು ಸಿಎಂ ಕೇಜ್ರಿವಾಲ್ ತಿಳಿಸಿದ್ದಾರೆ. ಬೆಳಗ್ಗೆಯಷ್ಟೇ ವಾಯುಮಾಲಿನ್ಯದ ಬಗ್ಗೆ ಸುಪ್ರೀಂಕೋರ್ಟ್ ಕಳವಳ ವ್ಯಕ್ತಪಡಿಸಿತ್ತು. 2 ದಿನ ಲಾಕ್‍ಡೌನ್ ಏನಾದ್ರೂ ಜಾರಿ ಮಾಡುತ್ತೀರಾ ಎಂದು ಕೇಳಿತ್ತು. ಇದನ್ನೂ ಓದಿ: ಟ್ರ್ಯಾಕ್ಟರ್ ರ್‍ಯಾಲಿಯಲ್ಲಿ ಬಂಧನಕ್ಕೊಳಗಾಗಿರುವ ರೈತರಿಗೆ 2 ಲಕ್ಷ ಪರಿಹಾರ- ಪಂಜಾಬ್ ಸರ್ಕಾರ

ಸುಪ್ರೀಂ ಹೇಳಿದ್ದು ಏನು?
ಇಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎನ್.ವಿ ರಮಣ ನೇತೃತ್ವದ ತ್ರಿ ಸದಸ್ಯ ಪೀಠ ವಾಯುಮಾಲಿನ್ಯ ಪ್ರಮಾಣ ಕಂಡು ಕಳವಳ ವ್ಯಕ್ತಪಡಿಸಿತ್ತು. ಇದನ್ನೂ ಓದಿ: ಅಮೆರಿಕಗೆ ತೆರಳಿದ ಅಪ್ಪು ಮಗಳು ಧೃತಿ

ರಜಾ ದಿನವಾಗಿದ್ದರೂ ವಿಶೇಷ ವಿಚಾರಣೆ ನಡೆಸಿದ ಪೀಠ ಮಾಲಿನ್ಯವನ್ನು ಕ್ಷಿಪ್ರಗತಿಯಲ್ಲಿ ಕಡಿಮೆ ಮಾಡುವ ಕ್ರಮಗಳೇನು ಎಂದು ಕೇಂದ್ರ ಸರ್ಕಾರ ಮತ್ತು ಮಾಲಿನ್ಯ ನಿಯಂತ್ರಣ ಮಂಡಳಿಗೆ ಪ್ರಶ್ನಿಸಿತು. ಇದಕ್ಕೆ ಉತ್ತರ ನೀಡಿದ ಮಾಲಿನ್ಯ ನಿಯಂತ್ರಣ ಮಂಡಳಿ ರೈತರ ಗೋಧಿ ಬೆಳೆ ಕಟಾವು ಸುಡುತ್ತಿದ್ದು ಇದಕ್ಕೆ ಮಾಲಿನ್ಯಕ್ಕೆ ಕಾರಣ ಎಂದು ಉತ್ತರಿಸಿತ್ತು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಮುಖ್ಯ ನ್ಯಾಯಮೂರ್ತಿ ಎನ್.ವಿ ರಮಣ ಪ್ರತಿ ಬಾರಿ ರೈತರನ್ನೇ ಗುರಿಯಾಗಿಸುವುದು ಸರಿಯಲ್ಲ. ಅಲ್ಲದೇ ಏರ್ ಕ್ವಾಲಿಟಿ ಇಂಡೆಕ್ಸ್ (Air Quality Index) 500 ರಿಂದ  200ಕ್ಕೆ ಇಳಿಯಲು ಮಾಡಬೇಕಿರುವ ಕ್ರಮಗಳೇನು ಎಂದು ಮರುಪ್ರಶ್ನಿಸಿದರು. ಇಂತಹ ಮಾಲಿನ್ಯದ ಸಂದರ್ಭದಲ್ಲಿ ಜನರು ಬದುಕುವುದು ಹೇಗೆ?. ಎರಡು ಮೂರು ದಿನಗಳಲ್ಲಿ ಮಾಲಿನ್ಯ ಪ್ರಮಾಣ ತಗ್ಗಬೇಕು ಅದಕ್ಕೆ ಯಾವುದೇ ಕ್ರಮಗಳನ್ನು ತೆಗೆದುಕೊಳ್ಳಿ ಅನಿವಾರ್ಯವಾದರೇ ಎರಡು ದಿನ ದೆಹಲಿ ಮತ್ತು ಎನ್‍ಸಿಆರ್ ಪ್ರದೇಶ ಲಾಕ್ ಡೌನ್ ಮಾಡಿ ಎಂದು ಸಲಹೆ ನೀಡಿದ್ದರು.

Share This Article
Leave a Comment

Leave a Reply

Your email address will not be published. Required fields are marked *