ಸಂಜ್ಞಾ ಭಾಷೆ ಅರ್ಥಮಾಡಿಕೊಳ್ಳುವ ಎಐ ಮಾದರಿಯನ್ನು ಅಭಿವೃದ್ಧಿ ಪಡಿಸಿದ 20ರ ಯುವತಿ

Public TV
2 Min Read

ನವದೆಹಲಿ: ಸರಿಯಾಗಿ ಮಾತನಾಡಲು ಅಥವಾ ಮಾತನಾಡಲು ಸಾಧ್ಯವಾಗದ ಜನರು ಸನ್ನೆ ಭಾಷೆ ಅರ್ಥವಾಗದ ವ್ಯಕ್ತಿಯ ಜೊತೆಗೆ ಸಂವಹನಿಸಲು ಸಾಕಷ್ಟು ಸವಾಲುಗಳನ್ನು ಎದುರಿಸುತ್ತಾರೆ. ಅಂತಹ ಮಾತುಬಾರದ ಜನರ ಜೊತೆ ಮಾತನಾಡಲು ಸಾಧ್ಯವಾಗಿಸುವ ಪ್ರಯತ್ನದಲ್ಲಿ, ದೆಹಲಿ ಮೂಲದ ಎಂಜಿನಿಯರಿಂಗ್ ವಿದ್ಯಾರ್ಥಿನಿ ಪ್ರಿಯಾಂಜಲಿ ಗುಪ್ತಾ ಸನ್ನೆಗಳನ್ನು ಅರ್ಥಮಾಡಿಕೊಳ್ಳುವ ಎಐ(ಅರ್ಟಿಫಿಶಿಯಲ್ ಇಂಟಲಿಜೆನ್ಸ್) ಮಾದರಿಯೊಂದನ್ನು ರಚಿಸಿದ್ದಾರೆ.

ತಮಿಳುನಾಡಿನ ವೆಲ್ಲೂರ್ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ವಿದ್ಯಾರ್ಥಿನಿಯಾಗಿರುವ ಪ್ರಿಯಾಂಜಲಿ ಪ್ರಸ್ತುತ ಇಂಜಿನಿಯರಿಂಗ್ ಪದವಿ ಓದುತ್ತಿದ್ದಾರೆ. ಪ್ರಿಯಾಂಜಲಿಯ ತಾಯಿ ದೆಹಲಿ ವಿಶ್ವವಿದ್ಯಾಲಯದಲ್ಲಿ ಉಪನ್ಯಾಸಕಿ ಮತ್ತು ಆಕೆಯ ತಂದೆ ಸ್ಪೈಸ್ ಜೆಟ್‍ನಲ್ಲಿ ಕೆಲಸ ಮಾಡುತ್ತಿದ್ದಾರೆ. ಇದನ್ನೂ ಓದಿ: ಬೆಳಗಾವಿಯಲ್ಲಿ ಹಿಜಬ್ ಹೈಡ್ರಾಮಾ – ಅಲ್ಲಾಹು ಅಕ್ಬರ್ ಘೋಷಣೆ ಕೂಗಿದ ಆರು ಯುವಕರು ವಶ

ಆವಿಷ್ಕಾರದ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನನ್ನ ತಾಯಿ ನನಗೆ ಚಿಕ್ಕಂದಿನಿಂದಲೂ ಎಂಜಿನಿಯರ್ ಆಗುವಂತೆ ಹೇಳುತ್ತಿದ್ದರು. ನೀನು ಎಂಜಿನಿಯರ್ ಆಗುವುದರ ಜೊತೆಗೆ ಎನಾದರೂ ಹೊಸ ಅನ್ವೇಷನೆಯೊಂದನ್ನು ಜನರಿಗೆ ಪರಿಚಯಿಸು. ಇತ್ತೀಚಿನ ದಿನಗಳಲ್ಲಿ ಜನರು ಹಲವಾರು ಸ್ಟಾರ್ಟಪ್‍ಗಳನ್ನು ಮಾಡುತ್ತಿದ್ದಾರೆ. ಹಾಗೇ ಹೊಸ ಹೊಸ ಆವಿಷ್ಕಾರಗಳನ್ನು ಸಹ ಮಾಡುತ್ತಿದ್ದಾರೆ. ನೀನು ಕೂಡಾ ಇಂಜಿನಿಯರಿಂಗ್ ವಿದ್ಯಾರ್ಥಿ, ನೀನು ಏನಾದರೂ ಮಾಡಬೇಕು ಎಂದು ದೆಹಲಿ ಮನೆಗೆ ಹೋದಾಗ ನನಗೆ ನನ್ನ ತಾಯಿ ಪ್ರೇರೆಪಿಸಿದ್ದರು. ಇದನ್ನೂ ಓದಿ: ಏರ್ ಇಂಡಿಯಾ ವಿಶ್ವದಲ್ಲೇ ಅತ್ಯುತ್ತಮವಾಗಿಸುವುದು ನಮ್ಮ ಗುರಿ: ಎನ್ ಚಂದ್ರಶೇಖರನ್

ಮೊಬೈಲ್ ಫೋನ್ ಬಳಕೆದಾರರು ಮಾತನಾಡುವಾಗ ಕಮಾಂಡ್‍ಗಳನ್ನು ತೆಗೆದುಕೊಳ್ಳುವ ಅಲೆಕ್ಸಾ ಸಾಧನವನ್ನು ನಾನು ಗಮನಿಸಿದ್ದೇನೆ. ಮಾತನಾಡಲು ಅಥವಾ ಕೇಳಲು ಸಾಧ್ಯವಾಗದವರಿಗೆ ಅಲೆಕ್ಸಾ ಯಾವುದೇ ಪ್ರಯೋಜನವಿಲ್ಲ ಅಂತ ನಾನು ಅರಿತುಕೊಂಡೆ. ಈ ವೇಳೆ ಅಲ್ಲಿಯೇ ಎಐ ಮಾದರಿಯನ್ನು ತಯಾರಿಸುವ ಕಲ್ಪನೆಯು ನನ್ನ ಮನಸ್ಸಿಗೆ ಬಂದಿತು. ನಾನು ಅದರ ಮೇಲೆ ಕೆಲಸ ಮಾಡಲು ಪ್ರಾರಂಭಿಸಿದೆ ಎಂದರು.

ಟೆನ್ಸಾರ್‌ಫ್ಲೋ  ಆಬ್ಜೆಕ್ಟ್ ಡಿಟೆಕ್ಷನ್ ಎಪಿಐ ಬಳಸಿ ಈ ಮಾದರಿಯನ್ನು ತಯಾರಿಸಲಾಗಿದೆ. ಪೂರ್ವ ತರಬೇತಿ ಪಡೆದ ಎಸ್‍ಎಸ್‍ಡಿ ಮೊಬೈಲ್‍ನೆಟ್ ಮಾದರಿಯಿಂದ ಅನುವಾದಿಸುವ ಕಲಿಕೆಯನ್ನು ಬಳಸಿಕೊಂಡು ಕೆಲವು ಎಎಸ್‍ಎಲ್ ಚಿಹ್ನೆಗಳನ್ನು ಇಂಗ್ಲಿಷ್‍ಗೆ ಅನುವಾದಿಸುತ್ತದೆ ಎಂದು ತಿಳಿಸಿದರು.

ಪ್ರಿಯಾಂಜಲಿ ಫೆಬ್ರವರಿ 2021 ರಲ್ಲಿ ಈ ಕಲ್ಪನೆಯ ಮೇಲೆ ಕೆಲಸ ಮಾಡಲು ಪ್ರಾರಂಭಿಸಿದರು. ಅವರು ಕಳೆದ ವರ್ಷ ಡಿಸೆಂಬರ್‍ನಲ್ಲಿ ಕಂಪ್ಯೂಟರ್ ವಿಷನ್ ಬಗ್ಗೆ ಅವರ ಜ್ಞಾನದ ಆಧಾರದ ಮೇಲೆ ಮಾಡೆಲ್ ಅನ್ನು ತಯಾರಿಸಿದ್ದರು. ಆದರೆ ಅದು ಸರಿಯಾಗಿ ಕೆಲಸ ಮಾಡಲಿಲ್ಲ. ಆದರೂ ಅವರು ಈ ಆವಿಷ್ಕಾರವನ್ನು ಅಲ್ಲಿಗೆ ಬಿಡದೆ ಮತ್ತೆ ಜನವರಿಯಲ್ಲಿ ಪ್ರಯತ್ನಿಸಿದರು. ಎಐ ಮಾದರಿಯನ್ನು ಆವಿಷ್ಕರಿಸಲು ಅವರು ಇಂಟರ್ನೆಟ್‍ನಿಂದ ಸಹಾಯವನ್ನು ತೆಗೆದುಕೊಂಡಿದ್ದಾರೆ.

ಇದನ್ನು ಮಾಡಲು ನಾನೇ ಎಲ್ಲಾ ಸಂಶೋಧನೆ ಮತ್ತು ಕಠಿಣ ಪರಿಶ್ರಮವನ್ನು ಮಾಡಿದ್ದೇನೆ. ಯಾವುದೇ ಮಾರ್ಗದರ್ಶನ ನನಗೆ ಸಿಗಲಿಲ್ಲ. ಆದರೆ ಇಂಟರ್ನೆಟ್ ಬಹಳಷ್ಟು ಸಹಾಯ ಮಾಡಿತು. ಈ ಮಾದರಿಯನ್ನು ಅಂತಿಮ ಹಂತಕ್ಕೆ ತರಲು ನಾನು ಸತತ ಮೂರು ರಾತ್ರಿಗಳವರೆಗೆ ನಿದ್ದೆ ಬಿಟ್ಟು ಕೆಲಸ ಮಾಡಿದ್ದೇನೆ ಎಂದರು.

Share This Article
Leave a Comment

Leave a Reply

Your email address will not be published. Required fields are marked *