ಸಿಎಂ ಮನಸ್ಸಲ್ಲಿ ನಾನಿದ್ದೇನೆ, ಈ ಬಾರಿ ಸಚಿವ ಸ್ಥಾನ ಸಿಗುತ್ತೆ: ಶಾಸಕ ಪುಟ್ಟರಂಗಶೆಟ್ಟಿ

Public TV
1 Min Read

ಚಾಮರಾಜನಗರ: ಸಿಎಂ ಮನಸ್ಸಿನಲ್ಲಿ ನಾನಿದ್ದೇನೆ, ಈ ಬಾರಿ ಸಚಿವ ಸ್ಥಾನ ಕೊಟ್ಟೆ ಕೊಡ್ತಾರೆಂದು ಚಾಮರಾಜನಗರದಲ್ಲಿ ಶಾಸಕ ಹಾಗೂ ಎಂಎಸ್ಐಎಲ್ ನಿಗಮದ ಅಧ್ಯಕ್ಷ ಪುಟ್ಟರಂಗಶೆಟ್ಟಿ ಹೇಳಿದರು.

136 ಸೀಟು ಗೆದ್ದು ಸಂಪುಟ ರಚನೆ ವೇಳೆ ನನ್ನ ಹೆಸರಿತ್ತು. ನಂಗೆ ಕಳೆದ ಬಾರಿಯೇ ಸಚಿವ ಸ್ಥಾನ ಕೊಡಬೇಕು ಅಂತಾ ತೀರ್ಮಾನವಾಗಿತ್ತು. ಕಾರಣಾಂತರದಿಂದ ಸಚಿವ ಸ್ಥಾನ ಕೈತಪ್ಪಿ ಹೋಗಿತ್ತು. ಈ ವೇಳೆ ಸಿಎಂ ಸಿದ್ದರಾಮಯ್ಯ ಒಂದು ವರ್ಷ ಉಪ ಸಭಾಪತಿ ಆಗಲೂ ಹೇಳಿದ್ದರು. ಆ ವೇಳೆ ನಾನು ಉಪ ಸಭಾಪತಿ ಸ್ಥಾನ ನಿರಾಕರಿಸಿದ್ದೆ. ಒಂದು ವರ್ಷ ಕಾಲ ಸುಮ್ಮನಿರಲೂ ಸಿಎಂ ಹೇಳಿದ್ದರು ಎಂದು ತಿಳಿಸಿದರು.

ಈ ಬಾರಿ ಸಂಪುಟ ಪುನಾರಚನೆ ಆದ್ರೆ ಸಚಿವ ಸ್ಥಾನ ಕೊಡ್ತಾರೆ. ಜಾತಿವಾರು, ಜಿಲ್ಲಾವಾರು ನೋಡಿದರು ಕೂಡ ನಂಗೆ ಸಚಿವ ಸ್ಥಾನ ಕೊಡಬೇಕು. ನಾನು ಕೂಡ ಕಾಂಗ್ರೆಸ್ ಪಕ್ಷದಲ್ಲಿ ಹಿರಿಯನಿದ್ದೇನೆ‌. ಮಲ್ಲಿಕಾರ್ಜುನ ಖರ್ಗೆ, ಡಿಕೆಶಿ, ಸಿಎಂ ಎಲ್ಲರ ಮೇಲೆ ನಂಬಿಕೆಯಿದೆ. ಈ ಬಾರಿ ಸಚಿವ ಸ್ಥಾನ ಸಿಗುವ ವಿಶ್ವಾಸವಿದೆ ಎಂದರು.

Share This Article