ಅಮೆರಿಕದ ಶಸ್ತ್ರಾಸ್ತ್ರ, ವಿಮಾನ ಖರೀದಿಸುವ ಯೋಜನೆ ಸ್ಥಗಿತಗೊಳಿಸಿಲ್ಲ: ಭಾರತದ ರಕ್ಷಣಾ ಸಚಿವಾಲಯ ಸ್ಪಷ್ಟನೆ

Public TV
2 Min Read

– ಸುಳ್ಳು ಸುದ್ದಿ ಹರಡದಂತೆ ಮನವಿ

ನವದೆಹಲಿ: ಟ್ರಂಪ್‌ ಸುಂಕ (Tariff) ಸಮರಕ್ಕೆ ತಿರುಗೇಟು ನೀಡುವ ನಿಟ್ಟಿನಲ್ಲಿ ಅಮೆರಿಕದ ಶಸ್ತ್ರಾಸ್ತ್ರ, ವಿಮಾನ ಖರೀದಿಸುವ ಯೋಜನೆಯನ್ನು ಭಾರತ ಸ್ಥಗಿತಗೊಳಿಸಿದೆ ಎಂಬ ಸುದ್ದಿ ಸುಳ್ಳು ಎಂದು ರಕ್ಷಣಾ ಸಚಿವಾಲಯ (Defence Ministry) ಸ್ಪಷ್ಟಪಡಿಸಿದೆ.

ಡೊನಾಲ್ಡ್ ಟ್ರಂಪ್ (Donald Trump) ಭಾರತೀಯ ಸರಕುಗಳ ಮೇಲೆ ಹೆಚ್ಚುವರಿಯಾಗಿ 25% ರಷ್ಟು ಸುಂಕ ವಿಧಿಸುವುದಾಗಿ ಘೋಷಿಸಿದ ನಂತರ ಭಾರತ ಅಮೆರಿಕದಿಂದ ರಕ್ಷಣಾ ಖರೀದಿಯನ್ನು ಸ್ಥಗಿತಗೊಳಿಸಿದೆ ಎಂಬ ಮಾಧ್ಯಮ ವರದಿಗಳನ್ನು ಸಚಿವಾಲಯ ನಿರಾಕರಿಸಿದೆ. ಇದನ್ನೂ ಓದಿ: ಟ್ರಂಪ್‌ ಸುಂಕ ಶಾಕ್‌ ಬೆನ್ನಲ್ಲೇ ಈ ವರ್ಷ ಭಾರತಕ್ಕೆ ಪುಟಿನ್‌ ಭೇಟಿ

ಅಮೆರಿಕದ ಹೊಸ ಶಸ್ತ್ರಾಸ್ತ್ರಗಳು ಮತ್ತು ವಿಮಾನಗಳನ್ನು ಖರೀದಿಸುವ ಯೋಜನೆಯನ್ನು ಭಾರತ ಸ್ಥಗಿತಗೊಳಿಸಿದೆ ಎಂಬ ಸುದ್ದಿಗಳು ಹರಡಿದ್ದವು. ಈ ವರದಿಗಳೆಲ್ಲ ಸುಳ್ಳು. ಖರೀದಿಯು ಕಾರ್ಯವಿಧಾನಗಳ ಪ್ರಕಾರವೇ ಮುಂದುವರಿಯಲಿದೆ ಎಂದು ರಕ್ಷಣಾ ಸಚಿವಾಲಯದ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಕೆಲವು ಖರೀದಿಗಳ ಕುರಿತು ಘೋಷಣೆಗಾಗಿ ಮುಂಬರುವ ವಾರಗಳಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರನ್ನು ಅಮೆರಿಕಗೆ ಕಳುಹಿಸುವ ಭಾರತದ ಯೋಜನೆಗಳನ್ನು ಸಹ ರದ್ದುಗೊಳಿಸಲಾಗಿದೆ ಎಂದು ಕೂಡ ವರದಿಗಳು ಪ್ರಕಟವಾಗಿದ್ದವು. ಇದನ್ನೂ ಓದಿ: ಭಾರತಕ್ಕೆ ಮತ್ತೊಂದು ಶಾಕ್ – ಆಮದುಗಳ ಮೇಲೆ 50% ಸುಂಕ ವಿಧಿಸಿದ ಟ್ರಂಪ್

ರಷ್ಯಾದಿಂದ ತೈಲ ಖರೀದಿಸಿದ್ದಕ್ಕಾಗಿ ಭಾರತದ ವಿರುದ್ಧ ಟ್ರಂಪ್‌ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ರಷ್ಯಾ ಜೊತೆಗಿನ ತೈಲ ಖರೀದಿಯನ್ನು ನಿಲ್ಲಿಸದಿದ್ದರೆ ಭಾರಿ ದಂಡ ತೆರಬೇಕಾಗುತ್ತದೆ ಎಂದು ಎಚ್ಚರಿಸಿದ್ದರು. ಅದರಂತೆ ಆ.1ರಿಂದಲೇ ಜಾರಿಗೆ ಬರುವಂತೆ ಭಾರತದ ಮೇಲೆ 25% ಟ್ಯಾರಿಫ್‌ ವಿಧಿಸಿಸಿರುವುದಾಗಿ ಘೋಷಿದ್ದರು. ಬಳಿಕ ಮತ್ತೆ 25% ಹೆಚ್ಚುವರಿ ಟ್ಯಾರಿಫ್‌ ಘೋಷಿಸಿದ್ದರು.

ಅಮೆರಿಕ, ಭಾರತೀಯ ರಫ್ತಿನ ಮೇಲಿನ ಒಟ್ಟು ಸುಂಕವನ್ನು ಶೇ.50 ಕ್ಕೆ ಏರಿಸಿತು. ಇದು ಯಾವುದೇ ಯುಎಸ್ ವ್ಯಾಪಾರ ಪಾಲುದಾರರಲ್ಲಿ ಅತ್ಯಧಿಕವಾಗಿದೆ.

Share This Article