ದೀಪಿಕಾ-ರಣ್‍ವೀರ್ ಹನಿಮೂನ್ ಪ್ಲಾನ್ ಲೀಕ್

Public TV
2 Min Read

ಮುಂಬೈ: ಭಾರತೀಯ ಸಿನಿ ಅಂಗಳದಲ್ಲಿ ದೀಪಿಕಾ ಪಡುಕೋಣೆ ಮತ್ತು ರಣ್‍ವೀರ್ ಸಿಂಗ್ ಮದುವೆಯ ಕಲರವ ಕಾಣುತ್ತಿದೆ. ಇಟಲಿಯ ಕೋಮೋ ಸಿಟಿ ತಲುಪಿರುವ ಎಲ್ಲರು ಮದುವೆ ಸಿದ್ಧತೆಯಲ್ಲಿ ತೊಡಗಲಿದ್ದಾರೆ. ಬುಧವಾರ ಮತ್ತು ಗುರುವಾರ ಎರಡು ದಿನಗಳ ಕಾಲ ಮದುವೆ ನಡೆಯಲಿದ್ದು, ನವೆಂಬರ್ 28ರಂದು ಮುಂಬೈನಲ್ಲಿ ಆರತಕ್ಷತೆ ನಡೆಯಲಿದೆ. ಸಾಂಸರಿಕ ಜೀವನಕ್ಕೆ ಕಾಲಿರಿಸಿದ ಬಳಿಕ ದೀಪಿಕಾ ಮತ್ತು ರಣ್‍ವೀರ್ ಹನಿಮೂನ್ ಗೆ ಯಾವ ಸ್ಥಳಕ್ಕೆ ಹೋಗಲಿದ್ದಾರೆ ಎಂಬ ಚರ್ಚೆಗಳು ಸೋಶಿಯಲ್ ಮೀಡಿಯಾದಲ್ಲಿ ಆರಂಭವಾಗಿವೆ.

ಮದುವೆ ಬಳಿಕ ದೀಪಿಕಾ ಮತ್ತು ರಣ್‍ವೀರ್ ತಮ್ಮ ಕೆಲಸಗಳಲ್ಲಿ ಬ್ಯೂಸಿಯಾಗಲಿದ್ದಾರೆ ಎಂದು ಸಿನಿ ಮಾಧ್ಯಮವೊಂದು ವರದಿ ಮಾಡಿದೆ. ಲಾಂಗ್ ಹಾಲಿ ಡೇ ಇಬ್ಬರಿಗೂ ಲಭ್ಯವಾಗದ ಹಿನ್ನೆಲೆಯಲ್ಲಿ ನಾಲ್ಕು ಅಥವಾ ಐದು ದಿನ ಮಾತ್ರ ಖಾಸಗಿಯಾಗಿ ಕಳೆಯಲಿದ್ದಾರೆ ಎಂಬ ಮಾತುಗಳು ಸಹ ಕೇಳಿ ಬರುತ್ತಿವೆ. ನವೆಂಬರ್ 28ರಂದು ಮುಂಬೈನಲ್ಲಿ ನಡೆಯುವ ಆರತಕ್ಷತೆ ಬಳಿಕ ರಣ್‍ವೀರ್ ‘ಸಿಂಬಾ’ ಚಿತ್ರೀಕರಣದಲ್ಲಿ ತೊಡಗಿಕೊಳ್ಳಲಿದ್ದಾರಂತೆ. ಇತ್ತ ದೀಪಿಕಾ ಸಹ ತಮ್ಮ ಮುಂದಿನ ಪ್ರಾಜೆಕ್ಟ್ ನಲ್ಲಿ ಭಾಗಿಯಾಗಲಿದ್ದಾರೆ.

ರಣ್‍ವೀರ್ ಮದುವೆಗಾಗಿ ‘ಸಿಂಬಾ’ ಚಿತ್ರತಂಡ ಚಿತ್ರೀಕರಣವನ್ನು ಮುಂದೂಡಿದ್ದು, ಡಿಸೆಂಬರ್ ಮೊದಲ ವಾರದಲ್ಲಿ ಶೂಟಿಂಗ್ ನಲ್ಲಿ ಭಾಗಿಯಾಗಲಿದ್ದಾರೆ. ರೋಹಿತ್ ಶೆಟ್ಟಿ ನಿರ್ದೇಶನದಲ್ಲಿ ಸಿಂಬಾ ಮೂಡಿ ಬರುತ್ತಿದ್ದು, ಸೈಫ್ ಅಲಿಖಾನ್ ಪುತ್ರಿ ಸಾರಾ ನಾಯಕಿಯಾಗಿ ನಟಿಸುತ್ತಿದ್ದಾರೆ. ಸಿಂಬಾ ಚಿತ್ರದಲ್ಲಿ ವಿಶೇಷ ಪಾತ್ರವೊಂದರಲ್ಲಿ ನಟ ಕಿಚ್ಚ ಸುದೀಪ್ ಸಹ ನಟಿಸಿದ್ದು, ಚಿತ್ರೀಕರಣದ ವಿಶೇಷ ಫೋಟೋಗಳು ವೈರಲ್ ಆಗಿದ್ದವು.

ಸೋಮವಾರ ಸಂಜೆ ಪತ್ರಿಕೆಯೊಂದು ದೀಪಿಕಾ ಮತ್ತು ರಣ್‍ವೀರ್ ಆರತಕ್ಷತೆ ಮುಂಬೈನಲ್ಲಿ ಆಯೋಜನೆ ಮಾಡಲಾಗಿದೆ ಎಂದು ಆಮಂತ್ರಣ ಪತ್ರಿಕೆಯನ್ನು ಬಿಡುಗಡೆ ಮಾಡಿತ್ತು. ಆದ್ರೆ ನವೆಂಬರ್ 21 ರಂದು ದೀಪಿಕಾ ತಂದೆ ಪ್ರಕಾಶ್ ಪಡುಕೋಣೆ ತಮ್ಮ ಬಂಧುಗಳಿಗಾಗಿ ಬೆಂಗಳೂರಿನ ‘ಲೀಲಾ ಪ್ಯಾಲೇಸ್’ನಲ್ಲಿ ವಿಶೇಷ ಔತಣಕೂಟವನ್ನು ಏರ್ಪಡಿಸಿದ್ದಾರೆ ಎಂಬ ಸುದ್ದಿಗಳು ಸಿನಿ ಗಲ್ಲಿಗಳಲ್ಲಿ ಹರಿದಾಡುತ್ತಿವೆ.

ಮದುವೆ ದಿನ ದೀಪಿಕಾ ವಿಶೇಷವಾಗಿ ಸಿದ್ಧಪಡಿಸಿರುವ ಗಾಢ ಕೆಂಪು ಬಣ್ಣದ ಲೆಹಂಗಾ ಧರಿಸಲಿದ್ದಾರಂತೆ. ರಣ್‍ವೀರ್ ನೀಲಿ ಬಣ್ಣದ ಕಾಂಚೀವರಂ ಕುರ್ತಾ ಹಾಕಲಿದ್ದಾರಂತೆ ಎಂದು ಹೇಳಲಾಗುತ್ತಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

Share This Article
Leave a Comment

Leave a Reply

Your email address will not be published. Required fields are marked *