ಜ್ಯೂ.ಎನ್‍ಟಿಆರ್ ಜೊತೆ ನಟಿಸಲು ಇಷ್ಟ ಎಂದ ಪದ್ಮಾವತಿ

Public TV
2 Min Read

ಮುಂಬೈ: ಬಾಲಿವುಡ್ ಪದ್ಮಾವತಿ ದೀಪಿಕಾ ಪಡುಕೋಣೆ ದಕ್ಷಿಣ ಭಾರತದ ಸೂಪರ್ ಸ್ಟಾರ್ ಜ್ಯೂನಿಯರ್ ಎನ್‍ಟಿಆರ್ ಜೊತೆ ನಟಿಸಲು ಆಸೆಯನ್ನು ವ್ಯಕ್ತಪಡಿಸಿದರು.

ದೀಪಿಕಾ ಪಡುಕೋಣೆ ಅವರು ಇತ್ತೀಚಿನ ಸಂದರ್ಶನವೊಂದರಲ್ಲಿ ತಾವು ಕೆಲಸ ಮಾಡಲು ಬಯಸುವ ನಟರು ಮತ್ತು ನಿರ್ದೇಶಕರ ಪಟ್ಟಿಯನ್ನು ಬಹಿರಂಗಪಡಿಸಿದ್ದಾರೆ. ತಾನು ಜ್ಯೂನಿಯರ್ ಎನ್‌ಟಿಆರ್‌ನೊಂದಿಗೆ ನಟಿಸಲು ಇಷ್ಟ ಪಡುತ್ತೇನೆ. ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಅವರ ಜೊತೆಯೂ ನಟಿಸಲು ಇಷ್ಟ ಎಂದು ತಿಳಿಸಿದರು. ಇದನ್ನೂ ಓದಿ: ಕೊನೆಗೂ ನಮ್ಮ ಕನಸು ನನಸಾಗಿದೆ: ಆಲಿಯಾ ಹೀಗೆಂದಿದ್ದೇಕೆ?

ನಾನು ಎಲ್ಲರೊಂದಿಗೆ ಕೆಲಸ ಮಾಡಲು ಇಷ್ಟಪಡುತ್ತೇನೆ. ಅದರಲ್ಲಿ ಯಾವುದೇ ರೀತಿಯ ಗೊಂದಲಗಳಿಲ್ಲ. ಆದರೆ ನಾನು ಜೂನಿಯರ್ ಎನ್‍ಟಿಆರ್ ಮತ್ತು ಅಲ್ಲು ಅರ್ಜುನ್ ಅವರೊಂದಿಗೆ ಕೆಲಸ ಮಾಡಲು ಇಷ್ಟಪಡುತ್ತೇನೆ. ಅದರಲ್ಲಿಯೂ ನಾನು ಜೂನಿಯರ್ ಎನ್‍ಟಿಆರ್ ಅವರೊಂದಿಗೆ ನಟಿಸಲು ಇಷ್ಟಪಡುತ್ತೇನೆ. ಆದ ವ್ಯಕ್ತಿತ್ವ ನನಗೆ ಇಷ್ಟವಾಯ್ತು ಎಂದು ಹೊಗಳಿದರು.

ನಿರ್ದೇಶಕರ ಬಗ್ಗೆ ಮಾತನಾಡಿದ ಅವರು, ‘ಯೇ ಜವಾನಿ ಹೈ ದೀವಾನಿ’ ಸಿನಿಮಾದ ನಿರ್ದೇಶಕ ‘ಅಯಾನ್ ಮುಖರ್ಜಿ’ ಅವರೊಂದಿಗೆ ಮತ್ತೆ ಕೆಲಸ ಮಾಡಲು ಬಯಸುತ್ತೇನೆ. ಅದೇ ರೀತಿ ನಾನು ರಾಜಮೌಳಿ ಅವರೊಂದಿಗೆ ಕೆಲಸ ಮಾಡಲು ಬಯಸುತ್ತೇನೆ ಎಂದು ತಿಳಿಸಿದರು.

ಶೂಟಿಂಗ್ ಬಗ್ಗೆ ವಿವರಿಸಿದ ಅವರು, ನಾನು ಕಲಿಯುವ ಮನಸ್ಸಿನಿಂದ ಸೆಟ್‍ಗೆ ಹೋಗುತ್ತೇನೆ. ಪ್ರತಿಯೊಂದು ಅನುಭವಗಳನ್ನು ಎಂಜಾಯ್ ಮಾಡಲು ಬಯಸುತ್ತೇನೆ. ಎಲ್ಲರಿಗಿಂತ ನನಗೆ ಚೆನ್ನಾಗಿ ಗೊತ್ತು ಎಂದು ನಾನು ಆಲೋಚನೆ ಮಾಡುವುದಿಲ್ಲ. ಆ ರೀತಿ ನಾನು ಸೆಟ್‍ಗೆ ಹೋಗುವುದಿಲ್ಲ. ನಾನು ಹೆಚ್ಚು ಹೊಸ ರೀತಿ ಪ್ರಯೋಗ ಮಾಡುವ ಗುಂಪಿನಿಂದ ಕಲಿಯಲು ಬಯಸುತ್ತೇನೆ. ‘ಗೆಹ್ರೈಯಾನ್’ ಸಿನಿಮಾ ಪೂರ್ತಿ ಹೊಸ ತಂಡ. ಈ ತಂಡದ ಜೊತೆ ಕೆಲಸ ಮಾಡಲು ಖುಷಿಯಾಗುತ್ತೆ ಎಂದು ಅನುಭವವನ್ನು ಹಂಚಿಕೊಂಡರು. ಇದನ್ನೂ ಓದಿ: ಅಪ್ಪು ಜೊತೆಗೆ ಕೊನೆ ಕ್ಷಣದ ವೀಡಿಯೋ ಹಂಚಿಕೊಂಡ ನವರಸ ನಾಯಕ!

ಪ್ರಸ್ತುತ, ದೀಪಿಕಾ ತಮ್ಮ ಮುಂಬರುವ ‘ಗೆಹ್ರೈಯಾನ್’ ಸಿನಿಮಾ ಪ್ರಚಾರದಲ್ಲಿ ನಿರತರಾಗಿದ್ದಾರೆ. ಈ ಸಿನಿಮಾವನ್ನು ‘ಶಕುನ್ ಬಾತ್ರಾ’ ನಿರ್ದೇಶಿಸಿದ್ದು, ಈ ಸಿನಿಮಾದಲ್ಲಿ ಸಿದ್ಧಾಂತ್ ಚತುರ್ವೇದಿ, ಅನನ್ಯ ಪಾಂಡೆ ಮತ್ತು ಧೈರ್ಯ ಕರ್ವಾ ಸಹ ನಟಿಸಿದ್ದಾರೆ. ಈ ಸಿನಿಮಾ ಇಂದು ಓಟಿಟಿಯಲ್ಲಿ ರಿಲೀಸ್ ಆಗುತ್ತಿದೆ.

Share This Article
Leave a Comment

Leave a Reply

Your email address will not be published. Required fields are marked *