70ನೇ ವಯಸ್ಸಿನಲ್ಲಿ ದೀಪಿಕಾ ಪಡುಕೋಣೆ ಈ ರೀತಿ ಇರ್ತಾರಂತೆ!

Public TV
1 Min Read

ಪ್ಯಾರಿಸ್: ತನ್ನ 70ನೇ ವಯಸ್ಸಿನಲ್ಲಿ ಸಂತೋಷದ ಕುಟುಂಬದ ಜೊತೆ ಶಾಂತಿಯುತ ಜೀವನ ನಡೆಸುವ ಕನಸನ್ನು ಕಂಡಿದ್ದಾರೆ ದೀಪಿಕಾ ಪಡುಕೋಣೆ.

ಹೌದು, 70ನೇ ಕ್ಯಾನೆ ಫಿಲ್ಮ್ ಫೆಸ್ಟಿವಲ್‍ನಲ್ಲಿ ಮಾಧ್ಯಮದ ಜೊತೆ ಮಾತನಾಡಿದ ಅವರು, “ನಾನು 70ನೇ ವರ್ಷವಾದಾಗ ಸುಂದರವಾದ ಪ್ರಕೃತಿಯಲ್ಲೊಂದು ಮನೆ, ಸಾಕಷ್ಟು ಮಕ್ಕಳು, ಮೊಮ್ಮಕ್ಕಳೊಂದಿಗೆ ಉತ್ತಮ ಶಾಂತಿಯುತ ಜೀವನವನ್ನು ನಡೆಸಲು ಇಚ್ಛಿಸುತ್ತೇನೆ” ಎಂದು ಹೇಳಿದ್ದಾರೆ.

ಎಕ್ಸ್ ಎಕ್ಸ್ ಎಕ್ಸ್: ರಿಟರ್ನ್ ಆಫ್ ಕ್ಸೇಂಡರ್ ಕೇಜ್ ಹೀರೋ ವಿನ್ ಡಿಸೆಲ್ ಬಗ್ಗೆ ಪ್ರತಿಕ್ರಿಯಿಸಿ, ಅವರು ನನ್ನನ್ನು ತುಂಬಾ ಇಷ್ಟಪಡುತ್ತಾರೆ. ಇದುವರೆಗೆ ನಾನು ಈ ರೀತಿಯ ವಿಶೇಷವಾದ ವ್ಯಕ್ತಿಯನ್ನು ಭೇಟಿ ಮಾಡಿರಲಿಲ್ಲ. ಅವರು ಜೊತೆ ಉತ್ತಮವಾದ ಅನುಭವವನ್ನು ಪಡೆದಿದ್ದೇನೆ ಎಂದು ತಿಳಿಸಿದರು.

31 ವರ್ಷ ವಯಸ್ಸಿನ ದೀಪಿಕಾ ಎರಡು ದಿನದ ಚಲನಚಿತ್ರೋತ್ಸವದಲ್ಲಿ ಎಲ್ಲರ ಚಿತ್ತವನ್ನು ತನ್ನತ್ತ ಸೆಳೆಯುವಂತೆ ಮಾಡಿದ್ದಾರೆ. ಒಂದನೇ ದಿನ ಚಿನ್ನದ ಬಣ್ಣದ ಧಿರಿಸಿನಲ್ಲಿ ಕಂಗೊಳಿಸುತಿದ್ದರೆ ಎರಡನೇ ದಿನ ಹಸಿರು ಬಾರ್ಡರ್ ಗೌನ್‍ನಿಂದ ಮಿಂಚುತ್ತಿದ್ದರು. ಇದೇ ಫಿಲ್ಮ್ ಫೆಸ್ಟಿವಲ್‍ನಲ್ಲಿ ನೀಲಿ ಕಂಗಳ ಸುಂದರಿ ಐಶ್ವರ್ಯ ರೈ ಬಚ್ಚನ್ ತಮ್ಮ ವಿಭಿನ್ನ ಶೈಲಿಯ ಡ್ರೆಸ್ ಧರಿಸಿ ಕಾಣಿಸಿಕೊಂಡರು.

ಸಂಜಯ್ ಲೀಲಾ ಬಲ್ಸಾಲಿ ಅವರ ‘ಪದ್ಮಾವತಿ’ ಚಿತ್ರದಲ್ಲಿ ರಣವೀರ್ ಸಿಂಗ್ ಮತ್ತು ಶಾಹಿದ್ ಕಪೂರ್ ಜೊತೆ ಮುಂದೆ ಸ್ಕ್ರೀನ್ ಶೇರ್ ಮಾಡಲಿದ್ದಾರೆ.

 

Day-1 Cannes 2017 @marchesafashion @georginachapmanmarchesa @kerencraigmarchesa @elizabethsaltzman @lorealmakeup @lorealhair

A post shared by Deepika Padukone (@deepikapadukone) on

Day-2 Cannes 2017 @brandonmaxwell @elizabethsaltzman @lorealmakeup @lorealhair

A post shared by Deepika Padukone (@deepikapadukone) on

Share This Article
Leave a Comment

Leave a Reply

Your email address will not be published. Required fields are marked *