ಕೊನೆಗೂ ಟ್ಯಾಟೂ ತೆಗೆದ ದೀಪಿಕಾ-ಇಲ್ಲಿದೆ ಡಿಪ್ಪಿಯ ಟ್ಯಾಟೂ ಕಹಾನಿ

Public TV
2 Min Read

ಮುಂಬೈ: ಬಾಲಿವುಡ್ ಚೆಲುವೆ ದೀಪಿಕಾ ಪಡುಕೋಣೆ ತಮ್ಮ ಕತ್ತಿನ ಹಿಂಭಾಗದಲ್ಲಿದ್ದ ಆರ್.ಕೆ. ಟ್ಯಾಟೂ ತೆಗೆದಿದ್ದಾರೆ. ಮದುವೆ ಬಳಿಕ ಮೊದಲ ಬಾರಿಗೆ ಬೆಂಗಳೂರಿಗೆ ದೀಪಿಕಾ ಆಗಮಿಸಿದಾಗ ವಿಮಾನ ನಿಲ್ದಾಣದಲ್ಲಿ ತೆಗೆದ ಫೋಟೋಗಳಲ್ಲಿ ಕತ್ತಿನ ಹಿಂಭಾಗದಲ್ಲಿದ್ದ ಟ್ಯಾಟೂ ಮಾಯವಾಗಿದೆ.

ಏನದು ಟ್ಯಾಟೋ:
ದೀಪಿಕಾ ಸಿನಿ ಕೆರಿಯರ್ ಆರಂಭದಲ್ಲಿ ರಣ್‍ಬೀರ್ ಕಪೂರ್ ಅವರನ್ನ ಮದುವೆ ಅಗಲಿದ್ದಾರೆ ಎಂಬ ಸುದ್ದಿಗಳು ಕೇಳಿ ಬಂದಿತ್ತು. ಈ ಸುದ್ದಿಗಳಿಗೆ ಪೂರಕ ಎಂಬಂತೆ ಸಾರ್ವಜನಿಕವಾಗಿ ದೀಪಿಕಾ ಮತ್ತು ರಣ್‍ಬೀರ್ ಕಪೂರ್ ಜೊತೆಯಾಗಿ ಕಾಣಿಸಿಕೊಳ್ಳುತ್ತಿದ್ದರು. ಈ ಎಲ್ಲ ಬೆಳವಣಿಗೆಗಳ ನಡುವೆ ದೀಪಿಕಾ ಆರ್.ಕೆ. (ರಣ್‍ಬೀರ್ ಕಪೂರ್) ಟ್ಯಾಟೂ ಹಾಕಿಕೊಳ್ಳುವ ಮೂಲಕ ತಮ್ಮ ಪ್ರೀತಿಯನ್ನು ಪರೋಕ್ಷವಾಗಿ ಹೇಳಿಕೊಂಡಿದ್ದರು.

ಕೆಲ ಕಾರಣಗಳಿಂದ ದೀಪಿಕಾ ಮತ್ತು ರಣ್‍ಬೀರ್ ಇಬ್ಬರ ಮಧ್ಯೆ ವೈಮನಸ್ಸು ಮೂಡಿದ್ದರಿಂದ ಬೇರೆಯಾಗಿದ್ದರು. ಬ್ರೇಕಪ್ ಬಳಿಕ ದೀಪಿಕಾ ತಮ್ಮ ಟ್ಯಾಟೂವನ್ನು ಹಾಗೆಯೇ ಉಳಿಸಿಕೊಂಡಿದ್ದರು. ರಾಮ್‍ಲೀಲಾ ಸಿನಿಮಾದ ಬಳಿಕ ದೀಪಿಕಾ ಮತ್ತು ರಣ್‍ವೀರ್ ಸಿಂಗ್ ಇಬ್ಬರು ಪ್ರೇಮಪಾಶದಲ್ಲಿ ಸಿಲುಕಿದರು. ಇದಾದ ನಂತರ ದೀಪಿಕಾ ಮತ್ತು ರಣ್‍ವೀರ್ ಸಿಂಗ್ ಬಾಜೀರಾವ್ ಮಸ್ತಾನಿ ಮತ್ತು ಪದ್ಮಾವತ್ ಸೂಪರ್ ಹಿಟ್ ಸಿನಿಮಾಗಳಲ್ಲಿ ಜೊತೆಯಾಗಿ ನಟಿಸಿದರು.

2013ರಿಂದಲು ಪ್ರೇಮಪಾಶದಲ್ಲಿ ಸಿಲುಕಿದರೂ ಪದೇ ಪದೇ ಇಬ್ಬರ ಮದುವೆ ಮುಂದೂಡಲಾಗುತ್ತಿತ್ತು. ಕಾರಣ ರಣ್‍ವೀರ್ ಸಿಂಗ್, ಟ್ಯಾಟೂ ತೆಗೆಸುವಂತೆ ಹೇಳಿದರೂ ದೀಪಿಕಾ ಒಪ್ಪುತ್ತಿರಲಿಲ್ಲವಂತೆ. ಈ ಕಾರಣದಿಂದಲೇ ಇಬ್ಬರ ಮಧ್ಯೆ ಜಗಳ ಸಹ ನಡೆಯುತ್ತಿತ್ತು ಎಂಬ ಮಾತುಗಳು ಬಾಲಿವುಡ್ ಅಂಗಳದಲ್ಲಿ ಕೇಳಿ ಬಂದಿದ್ದವು. ಕೊನೆಗೂ ದೀಪಿಕಾ ತಮ್ಮ ಮಾಜಿ ಪ್ರಿಯಕರ ಹೆಸರಿನ ಟ್ಯಾಟೂ ತೆಗೆಸಿಕೊಂಡಿದ್ದಾರೆ.

ಲವ್ವರ್ ಬಾಯ್ ಆದ ರಣ್‍ಬೀರ್?
ಇತ್ತ ದೀಪಿಕಾರಿಂದ ದೂರವಾದ ರಣ್‍ಬೀರ್ ಹೆಸರು ಕತ್ರಿನಾ ಕೈಫ್ ಜೊತೆ ತಳುಕು ಹಾಕಿಕೊಂಡಿತ್ತು. ವಿದೇಶದಲ್ಲಿ ಇಬ್ಬರು ಬೀಚ್ ನಲ್ಲಿ ಸುತ್ತಾಡಿದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದವು. ಈ ಕುರಿತು ಸ್ಪಷ್ಟನೆ ನೀಡಿದ ಕತ್ರಿನಾ, ನಾವಿಬ್ಬರು ಒಳ್ಳೆಯ ಫ್ರೆಂಡ್ಸ್ ಅಂತಾ ಹೇಳುವ ಮೂಲಕ ಎಲ್ಲ ಗೊಂದಲಗಳಿಗೆ ತೆರೆ ಎಳೆದು ರಣ್‍ಬೀರ್ ನಿಂದ ದೂರವಾದರು. ಇತ್ತ ರಣ್‍ಬೀರ್ ಮತ್ತು ಪಾಕಿಸ್ತಾನಿ ನಟಿ ಮಹೀರಾ ಖಾನ್ ಇಬ್ಬರ ಬಗ್ಗೆ ಲವ್ ಗಾಸಿಪ್ ಗಳು ಕೇಳಿ ಬಂದಿತ್ತು. ಸದ್ಯ ರಣ್‍ಬೀರ್ ಬಹುತಾರಾಗಣವುಳ್ಳ ‘ಬ್ರಹ್ಮಾಸ್ತ್ರ’ ಚಿತ್ರದಲ್ಲಿ ನಟಿಸುತ್ತಿದ್ದಾರೆ.

ತಮ್ಮ ಮೊದಲ ಸಿನಿಮಾ ಬಿಡುಗಡೆಯಾದ ದಿನವೇ (ನವೆಂಬರ್ 14 ಮತ್ತು 15) ರಣ್‍ವೀರ್ ಮತ್ತು ದೀಪಿಕಾ ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದಾರೆ. ಬುಧವಾರ ಬೆಂಗಳೂರಿನ ಲೀಲಾ ಪ್ಯಾಲೇಸ್ ನಲ್ಲಿ ಆರತಕ್ಷತೆ ಕಾರ್ಯಕ್ರಮ ಸಹ ನಡೆದಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *