ಬೆಂಗಳೂರಿಗೆ ಬಂದ ದೀಪಿಕಾ ಪಡುಕೋಣೆ- ಸೆಲ್ಫಿಗಾಗಿ ಮುಗಿಬಿದ್ದ ಫ್ಯಾನ್ಸ್

Public TV
1 Min Read

ಬಾಲಿವುಡ್ (Bollywood) ಬ್ಯೂಟಿ ಕನ್ನಡದ ಹುಡುಗಿ ದೀಪಿಕಾ ಪಡುಕೋಣೆ (Deepika Padukone) ತಮ್ಮರೂ ಬೆಂಗಳೂರಿಗೆ (Bengaluru) ಬಂದಿದ್ದರು. ಜಯ್ ಶೆಟ್ಟಿ (Jay Shetty) ಅವರ ಲವ್ ರೂಲ್ಸ್ ಟೂರ್ ಶೋನಲ್ಲಿ ಸಹೋದರಿ ಅನಿಶಾ ಪಡುಕೋಣೆ – ಕುಟುಂಬದ ಜೊತೆ ದೀಪಿಕಾ ಆಗಮಿಸಿದ್ದರು. ಇದನ್ನೂ ಓದಿ:ಹೈದರಾಬಾದ್‌ನಲ್ಲಿ ಐಷಾರಾಮಿ ಮನೆ ಖರೀದಿಸಿದ ನಟಿ ಸಮಂತಾ

‘ಪಠಾಣ್’ (Pathaan) ಚಿತ್ರದ ಸೂಪರ್ ಡೂಪರ್ ಸಕ್ಸಸ್ ನಂತರ ಮೊದಲ ಬಾರಿಗೆ ತಮ್ಮರೂ ಬೆಂಗಳೂರಿಗೆ ದೀಪಿಕಾ ಭೇಟಿ ನೀಡಿದ್ದಾರೆ. ಶಾರುಖ್ ಖಾನ್ (Sharukh Khan) ಜೊತೆ ನಟಿಸಿದ ಪಠಾಣ್ ಚಿತ್ರ ಕೋಟಿ ಕೋಟಿ ಲೂಟಿ ಮಾಡಿದ ಬೆನ್ನಲ್ಲೇ ನಟಿ ಬೆಂಗಳೂರಿಗೆ ಬಂದಿದ್ದಾರೆ. ಜಯ್ ಶೆಟ್ಟಿ ಶೋಗೆ ದೀಪಿಕಾ ಆಗಮಿಸುತ್ತಿದ್ದಂತೆ ಅಭಿಮಾನಿಗಳು ನಟಿಯ ಜೊತೆ ಸೆಲ್ಫಿ ಕ್ಲಿಕ್ಕಿಸಲು ಮುಗಿಬಿದ್ದಿದ್ದಾರೆ.

ಅಂತರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡ್ತಿರುವ ದೀಪಿಕಾ ಪಡುಕೋಣೆ ‘ಪಠಾಣ್’ ಸಕ್ಸಸ್ ನಂತರ ಫೈಟರ್ ಸಿನಿಮಾದಲ್ಲಿ ಹೃತಿಕ್ ರೋಷನ್‌ಗೆ ನಾಯಕಿಯಾಗಿ ನಟಿಸುತ್ತಿದ್ದಾರೆ. ಬಿಗ್ ಆಫರ್ಸ್ ನಟಿಗೆ ಅರಸಿ ಬರುತ್ತಿದೆ. ಕನ್ನಡದ ‘ಐಶ್ವರ್ಯ’ (Aishwarya) ಚಿತ್ರದ ಮೂಲಕ ಶುರುವಾದ ಸಿನಿ ಬದುಕು, ಬಾಲಿವುಡ್- ಹಾಲಿವುಡ್ ಅಂಗಳದಲ್ಲಿ ಜನಪ್ರಿಯ ನಟಿಯಾಗಿ ಸದ್ದು ಮಾಡ್ತಿದ್ದಾರೆ.

Share This Article