ನನ್ನನ್ನು ಮದುವೆ ಆಗ್ತೀರಾ: ಸಲ್ಲುಗೆ ದೀಪಿಕಾ ಪ್ರಶ್ನೆ- ವಿಡಿಯೋ

Public TV
1 Min Read

ಮುಂಬೈ: ಬಾಲಿವುಡ್ ಬಾಯಿಜಾನ್, ಮೋಸ್ಟ್ ಎಲಿಜಿಬಲ್ ಬ್ಯಾಚುಲರ್ ಎಂದೇ ಹೆಸರು ಪಡೆದಿರುವ ನಟ ಸಲ್ಮಾನ್ ಖಾನ್‍ಗೆ ನಟಿ ದೀಪಿಕಾ ಪಡುಕೋಣೆ ನನ್ನನ್ನು ಮದುವೆಯಾಗುತ್ತೀರಾ ಎಂದು ಕೇಳಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದೆ.

ಹೌದು, ಬಾಲಿವುಡ್‍ನ ಮೋಸ್ಟ್ ಎಲಿಜಿಬಲ್ ಬ್ಯಾಚುಲರ್ ಸಲ್ಮಾನ್ ಖಾನ್ ಬಳಿ ಎಲ್ಲರೂ ನಿಮ್ಮ ಮದುವೆ ಯಾವಾಗ ಎನ್ನುವ ಪ್ರಶ್ನೆಯನ್ನು ಕೇಳುತ್ತಲೇ ಇರುತ್ತಾರೆ. ಅಂತಹ ಪ್ರಶ್ನೆ ಎದುರಾದಾಗ ಸಲ್ಲು ಜಾಣ್ಮೆಯ ಹಾಗೂ ತಮಾಷೆಯ ಉತ್ತರ ನೀಡಿ ಜಾರಿಕೊಳ್ಳುತ್ತಾರೆ. ಇಂತಹುದೇ ಒಂದು ಸನ್ನಿವೇಷ ಬಿಗ್‍ಬಾಸ್ ಕಾರ್ಯಕ್ರಮದಲ್ಲಿ ಸಲ್ಲುಗೆ ಎದುರಾಗಿತ್ತು.

ಬಿಗ್‍ಬಾಸ್‍ನ ಆವೃತ್ತಿಯನ್ನು ನಡೆಸುತ್ತಿರುವ ಸಲ್ಮಾನ್ ಖಾನ್‍ರ ಕಾರ್ಯಕ್ರಮಕ್ಕೆ ನಟಿ ದೀಪಿಕಾ ಪಡುಕೋಣೆ ಆಗಮಿಸಿದ್ದರು. ಈ ವೇಳೆ ದೀಪಿಕಾರವರು ಎಲ್ಲರೂ ಕೇಳುವ ಪ್ರಶ್ನೆಗಿಂತ ವಿಭಿನ್ನವಾಗಿ ಸಲ್ಮಾನ್ ಖಾನ್ ಮುಂದೆ ಮಂಡಿವೂರಿ, ರೊಮ್ಯಾಂಟಿಕ್ ಆಗಿ `ನೀವು ನನ್ನನ್ನು ಮದುವೆಯಾಗುತ್ತೀರಾ’ ಎಂದು ಕೇಳಿದರು. ಈ ವೇಳೆ ಇದಕ್ಕೆ ಪ್ರತಿಕ್ರಿಯಿಸಿದ ಸಲ್ಮಾನ್ ಖಾನ್ ನೀವು ರಿಯಲ್ ದೀಪಿಕಾ ಪಡುಕೋಣೆನಾ ಅಥವಾ ಬೇರೆಯಾರಾದರೂ ಇದ್ದೀರಾ ಎಂಬುದಾಗಿ ಡೌಟ್ ಆಗುತ್ತಿದೆ ಎಂದು ಹಾಸ್ಯ ಚಟಾಕಿ ಹಾರಿಸಿದರು.

ದೀಪಿಕಾ ಪಡುಕೋಣೆ ಸಲ್ಮಾನ್ ಖಾನ್‍ರವರಿಗೆ ಮದುವೆಯ ಪ್ರಪೋಸ್ ಮಾಡಿದ್ದು, ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅಭಿಮಾನಿಗಳಿಗೆ ರಸಪೂರಿತ ಮನರಂಜನೆಯನ್ನು ನೀಡಿತ್ತು. ಅಲ್ಲದೇ ಇವರಿಬ್ಬರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

https://youtu.be/j861SSkxGD0

Share This Article
Leave a Comment

Leave a Reply

Your email address will not be published. Required fields are marked *