ಚಿತ್ರೀಕರಣದಲ್ಲಿ ದೀಪಿಕಾ: ಕಳವಳ ವ್ಯಕ್ತ ಪಡಿಸಿದ ಫ್ಯಾನ್ಸ್

Public TV
1 Min Read

ತ್ತೀಚೆಗಷ್ಟೇ ತಾನು ತಾಯಿ ಆಗುತ್ತಿರುವ ಕುರಿತಂತೆ ದೀಪಿಕಾ ಪಡುಕೋಣೆ ಹೇಳಿಕೊಂಡಿದ್ದರು. ಪ್ರೆಗ್ನೆಂಟ್ (Pregnant) ಅಂತ ಹೇಳಿ ಇದೀಗ ಸಿನಿಮಾವೊಂದರ ಚಿತ್ರೀಕರಣದಲ್ಲಿ ತೊಡಗಿದ್ದಾರೆ ನಟಿ. ಈ ನಡೆಗೆ ಫ್ಯಾನ್ಸ್ ಆತಂಕ ವ್ಯಕ್ತ ಪಡಿಸಿದ್ದಾರೆ. ಈ ಸಮಯದಲ್ಲಿ ಚಿತ್ರೀಕರಣದಲ್ಲಿ ಪಾಲ್ಗೊಳ್ಳೋದು ಸರಿಯಲ್ಲ ಎಂದು ತಿಳುವಳಿಕೆ ಹೇಳಿದ್ದಾರೆ. ಯಾವುದಕ್ಕೂ ಹುಷಾರಾಗಿ ಕೆಲಸ ಮಾಡಿ ಎಂದು ಸಲಹೆಯನ್ನೂ ನೀಡಿದ್ದಾರೆ.


ದೀಪಿಕಾ ಪಡುಕೋಣೆ (Deepika Padukone) ಸದ್ಯ ‘ಸಿಂಗಂ ಅಗೈನ್’ (Singham Again) ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಕಾಯಕವೇ ಕೈಲಾಸ ಅಂತ ಈಗಾಗಲೇ ಒಪ್ಪಿಕೊಂಡಿರುವ ಸಿನಿಮಾಗಳಿಗೆ ಗರ್ಭಿಣಿ ದೀಪಿಕಾ ಸಾಥ್ ನೀಡುತ್ತಿದ್ದಾರೆ. ಸದ್ಯ ಚಿತ್ರೀಕರಣಕ್ಕೆ ಹಾಜರಿ ಹಾಕಿರುವ ದೀಪಿಕಾ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.

‘ಪಠಾಣ್’ ಮತ್ತು ‘ಜವಾನ್’ ಸಿನಿಮಾಗಳ ಸಕ್ಸಸ್ ನಂತರ ದೀಪಿಕಾ ಪಡುಕೋಣೆ ಸದ್ಯ ಬಾಲಿವುಡ್‌ನ ಟಾಪ್ ನಟಿಯಾಗಿದ್ದಾರೆ. ಕೈತುಂಬಾ ಸಿನಿಮಾಗಳು ಅವರ ಲಿಸ್ಟ್ನಲ್ಲಿದೆ. ಇದರ ನಡುವೆ ಇತ್ತೀಚೆಗೆ ತಾವು ತಾಯಿಯಾಗಿರುವ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಆದರೆ ಈಗಾಗಲೇ ಒಪ್ಪಿಕೊಂಡಿರುವ ಚಿತ್ರಗಳನ್ನು ನಟಿ ಕೈಬಿಟ್ಟಿಲ್ಲ.

‘ಸಿಂಗಂ ಅಗೈನ್’ ಚಿತ್ರದಲ್ಲಿ ದೀಪಿಕಾ ಪೊಲೀಸ್ ಅಧಿಕಾರಿ ನಟಿಸುತ್ತಿದ್ದಾರೆ. ಕಳೆದ ವರ್ಷದ ಅಂತ್ಯದಿಂದಲೇ ಅವರ ಭಾಗದ ಚಿತ್ರೀಕರಣ ಶುರುವಾಗಿತ್ತು. ಪ್ರೆಗ್ನೆಂಟ್ ಆಗಿರುವ ದೀಪಿಕಾ ವಿಶ್ರಾಂತಿ ಪಡೆಯಬೇಕಿತ್ತು. ಆದರೆ ಸಿನಿಮಾಗೆ ತೊಂದರೆ ಆಗಬಾರದು ಎಂದು ಕೊಟ್ಟ ಮಾತಿನಂತೆ, ತಮ್ಮ ಭಾಗದ ಚಿತ್ರೀಕರಣವನ್ನು ಮುಗಿಸಿ ಕೊಡಲು ಮತ್ತೆ ಶೂಟಿಂಗ್‌ಗೆ ನಟಿ ಭಾಗಿಯಾಗಿದ್ದಾರೆ. ಇದೀಗ ನಟಿಯ ಶೂಟಿಂಗ್ ಫೋಟೋಗಳು ಗಮನ ಸೆಳೆಯುತ್ತಿವೆ.

 

‘ಸಿಂಗಂ ಅಗೈನ್’ ಚಿತ್ರದಲ್ಲಿ ಅಜಯ್ ದೇವಗನ್, ಅಕ್ಷಯ್ ಕುಮಾರ್, ರಣ್‌ವೀರ್ ಸಿಂಗ್, ಟೈಗರ್ ಶ್ರಾಫ್, ಅರ್ಜುನ್ ಕಪೂರ್, ಕರೀನಾ ಕಪೂರ್ ಕೂಡ ನಟಿಸುತ್ತಿದ್ದಾರೆ. ದೀಪಿಕಾ ಪಡುಕೋಣೆ ಪೊಲೀಸ್ ಅಧಿಕಾರಿಯಾಗಿ ಶಕ್ತಿ ಶೆಟ್ಟಿ ಎಂಬ ಪಾತ್ರ ನಿರ್ವಹಿಸುತ್ತಿದ್ದಾರೆ. ಈ ಚಿತ್ರವನ್ನು ರೋಹಿತ್‌ ಶೆಟ್ಟಿ ನಿರ್ದೇಶನ ಮಾಡುತ್ತಿದ್ದಾರೆ.

Share This Article