ಪ್ರಾಜೆಕ್ಟ್ ಕೆ ಚಿತ್ರದ ದೀಪಿಕಾ ಲುಕ್ ಸೂಪರ್: ಜುಲೈ 20ಕ್ಕೆ ಫಸ್ಟ್ ಗ್ಲಿಂಪ್ಸ್ ರಿಲೀಸ್

Public TV
2 Min Read

ತೆಲುಗಿನ ಖ್ಯಾತ ನಟ ಪ್ರಭಾಸ್ (Prabhas) ಮತ್ತು ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಕಾಂಬಿನೇಷನ್ ನ ‘ಪ್ರಾಜೆಕ್ಟ್ ಕೆ’ (Project K) ಸಿನಿಮಾದಲ್ಲಿ ದೀಪಿಕಾ ಹೇಗೆ ಕಾಣಿಸಲಿದ್ದಾರೆ ಎನ್ನುವ ಕುತೂಹಲ ಎಲ್ಲರದ್ದಾಗಿತ್ತು. ಅದಕ್ಕೀಗ ಉತ್ತರ ಸಿಕ್ಕಿದೆ. ಚಿತ್ರತಂಡವು ದೀಪಿಕಾ ಅವರ ಫೇಸ್ ಬಹಿರಂಗ ಪಡಿಸಿದೆ. ಅಲ್ಲದೇ, ಮತ್ತೊಂದು ಕುತೂಹಲವನ್ನೂ ಅದು ಉಳಿಸಿಕೊಂಡಿದೆ.

ಪ್ರಾಜೆಕ್ಟ್ ಕೆ ಸಿನಿಮಾದ ಹಲವಾರು ವಿಚಾರಗಳನ್ನು ಇದೇ ಜುಲೈ 20 ಹಾಗೂ 21ರಂದು ವಿಶ್ವದಾದ್ಯಂತ ಹಂಚಿಕೊಳ್ಳುತ್ತಿದೆ ಚಿತ್ರತಂಡ. ಇದರ ಭಾಗವಾಗ ಫಸ್ಟ್ ಗ್ಲಿಂಪ್ಸ್ (First Glimpses) ಅನ್ನು ಬಿಡುಗಡೆ ಮಾಡಲಿದೆ. ಸುಮಾರು 600 ಕೋಟಿಗೂ ಅಧಿಕ ಬಜೆಟ್ ನಲ್ಲಿ ಈ ಸಿನಿಮಾ ತಯಾರಾಗಲಿದ್ದು, ಕಮಲ್ ಹಾಸನ್ ಸೇರಿದಂತೆ ಅನೇಕ ದಿಗ್ಗಜ ಕಲಾವಿದರು ಈ ಚಿತ್ರಕ್ಕಾಗಿ ಒಂದಾಗಲಿದ್ದಾರೆ.

ಈ ಸಿನಿಮಾಗೆ ದೀಪಿಕಾ ಪಡೆದ ಸಂಭಾವನೆ

ಬಾಲಿವುಡ್‌ನಲ್ಲಿ (Bollywood) ದುಬಾರಿ ನಾಯಕಿ ಎಂದೆನಿಸಿಕೊಳ್ಳುವ ಮೂಲಕ ದೀಪಿಕಾ ಪಡುಕೋಣೆ (Deepika Padukone) ಸುದ್ದಿಯಲ್ಲಿದ್ದಾರೆ. `ಪಠಾಣ್’ (Pathaan) ಚಿತ್ರದ ಸೂಪರ್ ಸಕ್ಸಸ್‌ನಲ್ಲಿರುವ ನಟಿ ಈಗ ಪ್ರಭಾಸ್ ನಟನೆಯ `ಪ್ರಾಜೆಕ್ಟ್ ಕೆ’ ಸಿನಿಮಾಗೆ ಭರ್ಜರಿ ಸಂಭಾವನೆ ಪಡೆದಿದ್ದಾರೆ.

ಐಶ್ವರ್ಯಾ’ (Aishwarya Kannada Film) ಸಿನಿಮಾ ಮೂಲಕ ರಿಯಲ್ ಸ್ಟಾರ್ ಉಪ್ಪಿಗೆ (Upendra)  ನಾಯಕಿಯಾಗುವ ಮೂಲಕ ಬಣ್ಣದ ಲೋಕಕ್ಕೆ ಕನ್ನಡತಿ ದೀಪಿಕಾ ಪಡುಕೋಣೆ ಎಂಟ್ರಿ ಕೊಟ್ಟರು. ಬಳಿಕ ಶಾರುಖ್ ಖಾನ್‌ಗೆ (Sharukh Khan) ನಾಯಕಿಯಾಗಿ `ಓಂ ಶಾಂತಿ ಓಂ’ ಚಿತ್ರದಿಂದ ಬಾಲಿವುಡ್‌ಗೆ ಲಗ್ಗೆ ಇಟ್ಟರು. ಸಾಕಷ್ಟು ಹಿಂದಿ ಸಿನಿಮಾಗಳಲ್ಲಿ ಸ್ಟಾರ್ ನಟರ ಜೊತೆ ತೆರೆಹಂಚಿಕೊಂಡು ಸೈ ಎನಿಸಿಕೊಂಡಿದ್ದಾರೆ.

ಈ ವರ್ಷ `ಪಠಾಣ್’ ಚಿತ್ರದ ಮೂಲಕ ಭರ್ಜರಿ ಓಪನಿಂಗ್ಸ್ ಪಡೆದಿದ್ದಾರೆ. ಶಾರುಖ್ ನಾಯಕಿಯಾಗಿ ದೀಪಿಕಾ ಮಿಂಚಿದ್ದಾರೆ. ಸಿನಿಮಾ 1000 ಕೋಟಿ ರೂಪಾಯಿ ಕಲೆಕ್ಷನ್ ಮಾಡಿ ಹೊಸ ದಾಖಲೆ ಬರೆದಿದೆ. ಹಾಗಾಗಿ ತಮ್ಮ ಮುಂದಿನ ಸಿನಿಮಾ `ಪ್ರಾಜೆಕ್ಟ್ ಕೆ’ ಚಿತ್ರಕ್ಕೆ ದುಬಾರಿ ಸಂಭಾವನೆಯನ್ನೇ ನಟಿ ಪಡೆದಿದ್ದಾರೆ.

 

ಈ ಸಿನಿಮಾಗಾಗಿ ಅವರು ದೊಡ್ಡ ಕಾಲ್‌ಶೀಟ್ ನೀಡಿದ್ದಾರೆ. ಹಲವು ದಿನಗಳನ್ನ ಈ ಚಿತ್ರಕ್ಕಾಗಿ ಮುಡಿಪಿಟ್ಟಿದ್ದಾರೆ. ನಾಗ್ ಅಶ್ವೀನ್ ನಿರ್ದೇಶನದ ಈ ಚಿತ್ರಕ್ಕೆ 10 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ ಎನ್ನಲಾಗುತ್ತಿದೆ. ಕೆಲ ಸ್ಟಾರ್ ಹೀರೋಗಳು ಕೂಡ ಇಷ್ಟು ಸಂಭಾವನೆ ಪಡೆಯಲ್ಲ ಅನ್ನೋದು ಗಮಿನಿಸಬೇಕಾದ ವಿಷಯ. ಪ್ರಭಾಸ್ ಜೊತೆಗಿನ ಈ ಚಿತ್ರ ಮುಂದಿನ ವರ್ಷ ತೆರೆಗೆ ಅಪ್ಪಳಿಸಲಿದೆ.

Web Stories

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್