ದೀಪಾವಳಿ ಗುಡ್‌ ನ್ಯೂಸ್;‌ ಹುಬ್ಬಳ್ಳಿಯಿಂದ ಮೈಸೂರು, ಬೆಂಗಳೂರು, ಜೈಪುರ, ಗೋವಾಕ್ಕೆ ವಿಶೇಷ ರೈಲು

Public TV
3 Min Read

ಹುಬ್ಬಳ್ಳಿ: ದೀಪಾವಳಿ (Deepavali) ಹಬ್ಬದ ಪ್ರಯುಕ್ತ ಹೆಚ್ಚುವರಿ ಪ್ರಯಾಣಿಕರ ದಟ್ಟಣೆಯನ್ನು ನಿಭಾಯಿಸಲು, ನೈರುತ್ಯ ರೈಲ್ವೆ ಮಂಡಳಿ ಮೈಸೂರು ಮತ್ತು ಜೈಪುರ ನಡುವೆ ಪ್ರತಿ ದಿಕ್ಕಿನಲ್ಲಿ ತಲಾ ಎರಡು ಟ್ರಿಪ್‌ಗಳಿಗೆ ವಿಶೇಷ ಎಕ್ಸ್‌ಪ್ರೆಸ್ ರೈಲುಗಳ ಕಾರ್ಯಾಚರಣೆಗೆ ಅನುಮೋದನೆ ನೀಡಿದೆ. ಬೆಂಗಳೂರು-ವಾಸ್ಕೊ-ಡ-ಗಾಮ ನಡುವೆ ವಿಶೇಷ ರೈಲು ವ್ಯವಸ್ಥೆ ಮಾಡಲಾಗಿದೆ.

ಟ್ರೈನ್ ವಿವರಗಳು ಈ ಕೆಳಗಿನಂತಿವೆ:
ರೈಲು ಸಂಖ್ಯೆ 06231 ಮೈಸೂರು–ಜೈಪುರ ಎಕ್ಸ್‌ಪ್ರೆಸ್ ವಿಶೇಷ ರೈಲು ಅ.18 ಮತ್ತು 25 ರಂದು ಮೈಸೂರಿನಿಂದ ರಾತ್ರಿ 11:55 ಗಂಟೆಗೆ ಹೊರಡಲಿದೆ. ಸೋಮವಾರ ಸಂಜೆ 6:40 ಗಂಟೆಗೆ ಜೈಪುರವನ್ನು ತಲುಪಲಿದೆ. ಮತ್ತೆ ಹಿಂದಿರುಗುವ ದಿಕ್ಕಿನಲ್ಲಿ, ರೈಲು ಸಂಖ್ಯೆ 06232 ಜೈಪುರ–ಮೈಸೂರು ಎಕ್ಸ್‌ಪ್ರೆಸ್ ವಿಶೇಷ ರೈಲು ಅ.21 ಮತ್ತು 28 ರಂದು ಜೈಪುರದಿಂದ ಮುಂಜಾನೆ 4 ಗಂಟೆಗೆ ಹೊರಟು, ಗುರುವಾರ ಮುಂಜಾನೆ 3:30ಕ್ಕೆ ಮೈಸೂರಿಗೆ ಆಗಮಿಸಲಿದೆ. ಇದನ್ನೂ ಓದಿ: ಲೋಕ ಕಲ್ಯಾಣಕ್ಕಾಗಿಯೇ ಜನ್ಮ ತಾಳಿದ ಮಹಾನದಿ ಈ‌ ಕಾವೇರಿ – ಪುರಾಣ ಪುಣ್ಯಕಥೆ ನಿಮಗೆ ಗೊತ್ತೆ?

ಈ ವಿಶೇಷ ರೈಲು ಮಾರ್ಗಮಧ್ಯೆ ಮಂಡ್ಯ, ಕೆಎಸ್‌ಆರ್ ಬೆಂಗಳೂರು, ತುಮಕೂರು, ಅರಸೀಕೆರೆ, ಕಡೂರು, ದಾವಣಗೆರೆ, ಎಸ್‌ಎಸ್‌ಎಸ್ ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ಘಟಪ್ರಭಾ, ಮೀರಜ್, ಸಾಂಗ್ಲಿ, ಸತಾರಾ, ಪುಣೆ, ಕಲ್ಯಾಣ್, ವಸಾಯಿ ರೋಡ್, ಪಾಲ್ಘರ್, ವಾಪಿ, ವಲ್ಸಾದ, ಸೂರತ್, ವಡೋದರಾ, ಅಹಮದಾಬಾದ್, ಸಾಬರಮತಿ ಬಿಜಿ, ಮಹೆಸನಾ, ಪಾಲನ್‌ಪುರ, ಅಬು ರೋಡ್, ಫಲ್ನಾ, ರಾಣಿ, ಮಾರ್ವಾರ್, ಸೋಜತ್ ರೋಡ್, ಬೇವರ್, ಅಜ್ಮೀರ್, ಮತ್ತು ಕಿಶನ್‌ಗಢ ನಿಲ್ದಾಣಗಳಲ್ಲಿ ನಿಲುಗಡೆ ಇರಲಿದೆ.

ಜೈಪುರದ ಕಡೆಗೆ ಹೋಗುವ ರೈಲು ಸಂಖ್ಯೆ 06231 ತನ್ನ ಪ್ರಯಾಣದಲ್ಲಿ ಸಾಬರಮತಿ ಬಿಜಿ ನಿಲುಗಡೆಯನ್ನು ಬಿಟ್ಟುಬಿಡುತ್ತದೆ. ಮತ್ತು ಮೈಸೂರಿನ ಕಡೆಗೆ ಹಿಂದಿರುಗುವ ಪ್ರಯಾಣದಲ್ಲಿ ರೈಲು ಸಂಖ್ಯೆ 06232 ಅಹಮದಾಬಾದ್ ನಿಲುಗಡೆ ಇರುವುದಿಲ್ಲ.

ಈ ವಿಶೇಷ ರೈಲು ಒಟ್ಟು 18 ಬೋಗಿಗಳನ್ನು ಒಳಗೊಂಡಿರುತ್ತದೆ. ಅವುಗಳಲ್ಲಿ 2 ಎಸಿ ಟು-ಟೈರ್, 12 ಎಸಿ ತ್ರಿ-ಟೈರ್, 2 ಸ್ಲೀಪರ್ ಕ್ಲಾಸ್ ಮತ್ತು 2 ಸೆಕೆಂಡ್ ಕ್ಲಾಸ್ ಲಗೇಜ್-ಕಮ್-ಬ್ರೇಕ್ ವ್ಯಾನ್‌ಗಳು ಇರಲಿವೆ.

ಬೆಂಗಳೂರು-ವಾಸ್ಕೊ-ಡ-ಗಾಮ ನಡುವೆ ವಿಶೇಷ ರೈಲುಗಳು
ದೀಪಾವಳಿ ಹಬ್ಬದ ಸಂದರ್ಭದಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿಭಾಯಿಸಲು ನೈಋತ್ಯ ರೈಲ್ವೆಯು ಕೆಎಸ್ಆರ್ ಬೆಂಗಳೂರು– ವಾಸ್ಕೊ-ಡ-ಗಾಮ – ಬೆಂಗಳೂರು ಕಂಟೋನ್ಮೆಂಟ್ ನಡುವೆ ವಿಶೇಷ ಎಕ್ಸ್‌ಪ್ರೆಸ್‌ ರೈಲುಗಳನ್ನು ಓಡಿಸಲು ನಿರ್ಧರಿಸಿದೆ. ಇದನ್ನೂ ಓದಿ: ಸರ್ಕಾರಿ ಜಾಗಗಳಲ್ಲಿ ನಮಾಜ್‌ ಮಾಡಲು ಅವಕಾಶ ಕೊಡಬೇಡಿ – ಸರ್ಕಾರಕ್ಕೆ ಯತ್ನಾಳ್‌ ಪತ್ರ

ರೈಲು ಸಂಖ್ಯೆ 07317/07318 ಕೆಎಸ್ಆರ್ ಬೆಂಗಳೂರು – ವಾಸ್ಕೊ-ಡ-ಗಾಮ – ಬೆಂಗಳೂರು ಕಂಟೋನ್ಮೆಂಟ್ ಎಕ್ಸ್‌ಪ್ರೆಸ್‌ ವಿಶೇಷ (ಒಂದು ಟ್ರಿಪ್):
ರೈಲು ಸಂಖ್ಯೆ 07317 ಕೆಎಸ್ಆರ್ ಬೆಂಗಳೂರು – ವಾಸ್ಕೊ-ಡ-ಗಾಮ ವಿಶೇಷ ಎಕ್ಸ್‌ಪ್ರೆಸ್‌ ರೈಲು ಅ.17ರ ರಾತ್ರಿ 11:25ಕ್ಕೆ ಕೆಎಸ್ಆರ್ ಬೆಂಗಳೂರಿನಿಂದ ಹೊರಟು, ಮರುದಿನ ಮಧ್ಯಾಹ್ನ 2:55ಕ್ಕೆ ವಾಸ್ಕೊ-ಡ-ಗಾಮ ತಲುಪಲಿದೆ. ಮರಳಿ ಪ್ರಯಾಣದಲ್ಲಿ, ರೈಲು ಸಂಖ್ಯೆ 07318 ವಾಸ್ಕೊ-ಡ-ಗಾಮ – ಕಂಟೋನ್ಮೆಂಟ್ ವಿಶೇಷ ಎಕ್ಸ್‌ಪ್ರೆಸ್‌ ರೈಲು ಅ.18 ರಂದು ಸಂಜೆ 5 ಕ್ಕೆ ವಾಸ್ಕೊ-ಡ-ಗಾಮದಿಂದ ಹೊರಟು, ಮರುದಿನ ಬೆಳಗ್ಗೆ 8:30ಕ್ಕೆ ಬೆಂಗಳೂರು ಕಂಟೋನ್ಮೆಂಟ್‌ಗೆ ತಲುಪಲಿದೆ.

ರೈಲು ಸಂಖ್ಯೆ 07317 ಮಾರ್ಗ ಮಧ್ಯೆ ಬೆಂಗಳೂರು ಕಂಟೋನ್ಮೆಂಟ್, ಎಸ್ಎಂವಿಟಿ ಬೆಂಗಳೂರು, ತುಮಕೂರು, ಅರಸೀಕೆರೆ, ಕಡೂರು, ಚಿಕ್ಕಜಾಜೂರು, ದಾವಣಗೆರೆ, ಹರಿಹರ, ರಾಣೆಬೆನ್ನೂರು, ಎಸ್ಎಂಎಂ ಹಾವೇರಿ, ಎಸ್ಎಸ್ಎಸ್ ಹುಬ್ಬಳ್ಳಿ, ಧಾರವಾಡ, ಅಳ್ನಾವರ, ಲೋಂಡಾ, ಕ್ಯಾಸಲ್ ರಾಕ್, ಕುಲೆಮ್, ಸ್ಯಾನ್‌ವೊರ್ಡೆಮ್ ಮತ್ತು ಮಡಗಾಂವ್ ನಿಲ್ದಾಣಗಳಲ್ಲಿ ನಿಲುಗಡೆ ನೀಡಲಿದೆ. ಅದೇ ರೀತಿ, ರೈಲು ಸಂಖ್ಯೆ 07318 ಸಹ ಬೆಂಗಳೂರು ಕಂಟೋನ್ಮೆಂಟ್‌ನತ್ತ ಹಿಮ್ಮುಖ ದಿಕ್ಕಿನಲ್ಲಿ ಇದೇ ನಿಲ್ದಾಣಗಳಲ್ಲಿ ನಿಲುಗಡೆ ನೀಡಲಿದೆ. ಈ ರೈಲು ಒಟ್ಟು 22 ಬೋಗಿಗಳ ಸಂಯೋಜನೆಯನ್ನು ಹೊಂದಿದ್ದು, ಅದರಲ್ಲಿ 13 ಎಸಿ 3-ಟೈರ್, 7 ಸ್ಲೀಪರ್ ದರ್ಜೆ ಮತ್ತು 2 ಲಗೇಜ್-ಕಮ್-ಬ್ರೇಕ್ ವ್ಯಾನ್‌ಗಳು ಇರಲಿವೆ.

Share This Article