ದೀಪಾವಳಿ ಹಬ್ಬದ ಪೂಜೆಯ ವೇಳೆ ಮನೆ ಮನೆಗೂ ಬರುವ ಲಕ್ಷ್ಮಿ – ನಿಮ್ಮ ಪೂಜೆ ಹೀಗಿರಲಿ

Public TV
2 Min Read

ದೀಪಾವಳಿಯಂದು ಲಕ್ಷ್ಮೀ ದೇವಿಯನ್ನು ವಿಶೇಷವಾಗಿ ಪೂಜಿಸಲಾಗುತ್ತದೆ. ಈ ಸಮಯದಲ್ಲಿ ಲಕ್ಷ್ಮೀ ದೇವಿ ಭೂಮಿಗೆ ಬರುತ್ತಾಳೆ ಎಂಬ ನಂಬಿಕೆ ಇದೆ. ಪೂಜೆಯ ಸಮಯದಲ್ಲಿ ಮನೆಗೆ ಪ್ರವೇಶಿಸಿ ಭಕ್ತರನ್ನು ಹರಿಸುತ್ತಾಳೆ ಎಂಬ ಪ್ರತೀತಿ ಇದೆ. ಲಕ್ಷ್ಮೀ ದೇವಿಯ ಜನನ ಹಾಗೂ ಪೂಜೆಯ ವಿಧಾನ ಹಾಗೂ ಮಹತ್ವ ಮಹತ್ವವನ್ನು ಇಲ್ಲಿ ತಿಳಿಸಲಾಗಿದೆ.

ಶಾಪದಿಂದ ಕಳೆಗುಂದಿದ ದೇವಲೋಕ
ದುರ್ವಾಸ ಮುನಿಗಳು ನೀಡಿದ ಮಾಲೆಯನ್ನು ಇಂದ್ರ ಎಸೆದಿದ್ದರಿಂದ ಅವರ ಶಾಪಕ್ಕೆ ಗುರಿಯಾಗುತ್ತಾನೆ. ಇದರಿಂದ ದೇವ ಲೋಕದ ಸಂಪತ್ತು, ಐಶ್ವರ್ಯ ಎಲ್ಲಾ ಕುಂದಿ ಹೋಗುತ್ತದೆ. ದೇವತೆಗಳ ಶಕ್ತಿ ದುರ್ಬಲವಾಗ ತೊಡಗುತ್ತದೆ. ಇದರ ಲಾಭ ಪಡೆದುಕೊಂಡ ರಾಕ್ಷಸರು ದೇವ ಲೋಕದ ಮೇಲೆ ಮೇಲೆ ದಾಳಿ ಮಾಡಿ ಸ್ವರ್ಗವನ್ನು ತಮ್ಮ ಹಿಡಿತಕ್ಕೆ ತಂದುಕೊಳ್ಳುತ್ತಾರೆ.

ದೇವತೆಗಳು ತಮ್ಮ ಅಸಹಾಯಕ ಸ್ಥಿತಿಯಲ್ಲಿ, ಬ್ರಹ್ಮ ದೇವರ ಬಳಿಗೆ ಹೋಗಿ ತಮ್ಮ ಸಮಸ್ಯೆಯನ್ನು ಹೇಳಿಕೊಂಡಾಗ ಲಕ್ಷ್ಮಿ ದೇವಿಯನ್ನು ಕರೆತರದ ಹೊರತು ನೀವು ಶಕ್ತಿಯನ್ನು ಹಿಂಪಡೆಯಲು ಸಾಧ್ಯವಿಲ್ಲ ಎಂದು ಹೇಳುತ್ತಾನೆ. ಇದಕ್ಕಾಗಿ ಸಮುದ್ರ ಮಂಥನದ ಸಲಹೆಯನ್ನು ನೀಡಿದನು.

ಪಾಲ್ಗಡಲ ಕಡೆವಾಗ!
ಕ್ಷೀರ ಸಮುದ್ರ ಮಂಥನದಿಂದ ಅಮೃತ ದೊರೆಯುತ್ತದೆ. ಇದರಿಂದ ನಾವು ಅಮರರಾಗಬಹುದು ಎಂದು ಬ್ರಹ್ಮ ಹೇಳುತ್ತಾನೆ. ಇದಕ್ಕೆ ಒಪ್ಪಿದ ದೇವತೆಗಳು ಹಾಗೂ ರಾಕ್ಷಸರು ಒಟ್ಟಾಗಿ ಸಮುದ್ರ ಮಂಥನ ಮಾಡಲು ನಿರ್ಧರಿಸಿದರು. ವಾಸುಕಿಯನ್ನು ಹಗ್ಗವಾಗಿ ಬಳಸಿಕೊಂಡು ಮಂದರಾಚಲ ಪರ್ವತವನ್ನು ಕಡಗೋಲನ್ನಾಗಿ ಮಾಡಿ ಮಥಿಸಲು ಪ್ರಾರಂಭಿಸಿದರು. ಮಂದಾರಚಲ ಪರ್ವತವನ್ನು ಸಮುದ್ರದಲ್ಲಿ ಮುಳುಗದಂತೆ ರಕ್ಷಿಸಲು, ವಿಷ್ಣುವು ಆಮೆಯ ಅವತಾರವನ್ನೂ ಎತ್ತುತ್ತಾನೆ.

ಸಾಗರ ಮಂಥನದ ವೇಳೆ ಚಂದ್ರ, ಕಾಮಧೇನು, ಐರಾವತ ಆನೆ, ಕೊನೆಗೆ ಅಮೃತ ಸೇರಿದಂತೆ ನಾನಾ ದಿವ್ಯ ದ್ರವ್ಯಗಳು ಕಾಣಿಸಿಕೊಂಡವು. ಈ ಮಂಥನದಿಂದ ಜನಿಸಿದ ಲಕ್ಷ್ಮೀದೇವಿ ವಿಷ್ಣುವಿಗೆ ಮನಸೋತು ವಿವಾಹವಾದಳು.

ಲಕ್ಷ್ಮಿ ಪೂಜೆಯ ಮಹತ್ವ
ಲಕ್ಷ್ಮಿ ದೇವಿಯನ್ನು ಸಂಪತ್ತು ಮತ್ತು ಸಮೃದ್ಧಿಯ ದೇವತೆ ಎಂದು ಕರೆಯಲಾಗುತ್ತದೆ. ಅವಳನ್ನು ಪೂಜಿಸುವುದರಿಂದ ಮನೆ ಸುರಕ್ಷಿತವಾಗಿರುತ್ತದೆ ಮತ್ತು ಆರ್ಥಿಕ ಸಮೃದ್ಧಿ ಇರುತ್ತದೆ. ಈ ದಿನ ವ್ಯಾಪಾರಸ್ಥರಿಗೆ ವಿಶೇಷವಾಗಿದೆ. ಅಮವಾಸ್ಯೆಯ ಕತ್ತಲ ರಾತ್ರಿಯಂದು ದೀಪ ಹಚ್ಚಿ ಪೂಜಿಸುವುದರಿಂದ ನಕಾರಾತ್ಮಕತೆ ನಾಶವಾಗುತ್ತದೆ.

ಲಕ್ಷ್ಮಿ ಪೂಜೆಯ ಸಮಯ
ಪಂಚಾಂಗದ ಪ್ರಕಾರ, ಅಕ್ಟೋಬರ್ 20, ರಂದು ಲಕ್ಷ್ಮಿ-ಗಣೇಶ ಪೂಜೆಗೆ ಹಲವಾರು ಶುಭ ಸಮಯಗಳು ಇರುತ್ತವೆ, ಆದರೆ ಪ್ರದೋಷ ಕಾಲ ಮತ್ತು ಸ್ಥಿರ ಲಗ್ನದ ಸಂಯೋಜನೆಯು ಉತ್ತಮವಾಗಿದೆ.

ಪ್ರದೋಷ ಕಾಲ ಸಂಜೆ 05:46 ರಿಂದ ರಾತ್ರಿ 08:18 ರವರೆಗೆ
ಲಕ್ಷ್ಮಿ ಪೂಜೆ ಸಮಯ : ಸಂಜೆ 7:08 ರಿಂದ 8:18 ರವರೆಗೆ

ಪೂಜಾ ವಿಧಾನ
ದೀಪಾವಳಿಯಂದು ಲಕ್ಷ್ಮೀ ಪೂಜೆಯನ್ನು ಪ್ರಾರಂಭಿಸುವ ಮೊದಲು ಬ್ರಹ್ಮಮುಹೂರ್ತದಲ್ಲಿ ಎದ್ದು ಸ್ನಾನ ಮಾಡಬೇಕು. ಅದರ ನಂತರ ತೊಳೆದ ಬಟ್ಟೆಗಳನ್ನು ಧರಿಸಬೇಕು ಮತ್ತು ಲಕ್ಷ್ಮಿ ಗಣೇಶನ ವಿಗ್ರಹಗಳನ್ನು ಅಥವಾ ಫೋಟೋಗಳನ್ನು ಕೆಂಪು ಬಟ್ಟೆಯ ಮೇಲೆ ಇಡಬೇಕು. ಅದಕ್ಕೂ ಮೊದಲು ಅಕ್ಕಿಯ ಮೇಲೆ ಸ್ವಸ್ತಿಕ್ ಚಿಹ್ನೆಯನ್ನು ಸಿದ್ಧಪಡಿಸಬೇಕು. ವಿಗ್ರಹಗಳ ಬಲಭಾಗದಲ್ಲಿ ಕಲಶವನ್ನು ಇಡಬೇಕು. ನಂತರ ಎಡಗೈಯಲ್ಲಿ ದೀಪವನ್ನು ಬೆಳಗಿಸಿ. ಅದರ ನಂತರ ಕುಬೇರ, ಸರಸ್ವತಿ ಮತ್ತು ಕಾಳಿಮಾತೆಯನ್ನು ಪೂಜಿಸಿ. ಹಾಗೆಯೇ ಶ್ರೀ ಮಹಾವಿಷ್ಣುವನ್ನೂ ಪೂಜಿಸಬೇಕು. ಚಿನ್ನ, ಬೆಳ್ಳಿ ನಾಣ್ಯಗಳು, ಆಭರಣಗಳು, ಗೋಮತಿಚಕ್ರ, ಶಂಖ ಇತ್ಯಾದಿಗಳನ್ನು ಪೂಜಿಸಬೇಕು.

Share This Article