ನಾನು ನಂಬಿದ ದೇವರು ಆರೋಪಿಗಳಿಗೆ ಶಿಕ್ಷೆ ನೀಡ್ತಾನೆ: ದೀಪಕ್ ತಾಯಿ ಕಣ್ಣೀರು

Public TV
2 Min Read

ಮಂಗಳೂರು: ನನ್ನ ಮಗನನ್ನು ಕೊಂದವರಿಗೆ ಕಠಿಣ ಶಿಕ್ಷೆಯಾಗಲಿ. ನಾನು ನಂಬಿದ ದೇವರು ಅವರನ್ನು ಬಿಡಲ್ಲ. ಕೊಂದವರಿಗೆ ತಕ್ಕುದಾದ ಶಿಕ್ಷೆಯನ್ನು ದೇವರು ಕೊಡುತ್ತಾನೆ ಎಂದು ಮೃತ ದೀಪಕ್ ತಾಯಿ ಪ್ರೇಮರಾವ್ ಕಣ್ಣೀರು ಹಾಕಿದ್ದಾರೆ.

ಮಗನ ಸಾವಿನ ಕುರಿತು ಪ್ರತಿಕ್ರಿಯೆ ನೀಡಿದ ಅವರು, ನನ್ನ ಮಗ ಪಾಪದ ಹುಡುಗ. ಯಾವ ಗಲಾಟೆಗೂ ಹೋಗುವವನಲ್ಲ, ಬೆಳಗ್ಗೆ ಚಹಾ ಕುಡಿದು ಹೋದವ ಮತ್ತೆ ವಾಪಾಸ್ ಬರಲಿಲ್ಲ. ದೀಪಕ್ ಕೊಲೆಯಾದ ಬಗ್ಗೆ ಯಾರೂ ನನಗೆ ಹೇಳಲಿಲ್ಲ. ಪ್ರಸ್ತುತ ನಮ್ಮ ಕುಟುಂಬದ ಆಧಾರವೇ ಇಲ್ಲವಾಗಿದೆ ಎಂದು ಕಣ್ಣೀರಿಟ್ಟರು.

ಮಗನಿಗೆ ಮದುವೆ ಮಾಡುವ ಕನಸು ಹೊತ್ತಿದ್ದೆವು. ಆದರೆ ಮದುವೆ ಒಂದು ವರ್ಷ ಬೇಡ ಎಂದು ದೀಪಕ್ ಹೇಳಿದ್ದ. ವಿದೇಶದಲ್ಲಿ ಉದ್ಯೋಗ ಮಾಡುತ್ತೇನೆ ಎಂದು ಹಠ ಮಾಡುತ್ತಿದ್ದ. ನಾನೇ ವಿದೇಶದಲ್ಲಿ ಕೆಲಸ ಬೇಡ ಎಂದು ಹೇಳಿದ್ದೆ. ಸಾಲ ಮಾಡಿ ಮನೆ ಕಟ್ಟಿಸಿದ್ದ. ಮನೆಯ ಸಾಲ ಇನ್ನೂ ತೀರಿಸಿಲ್ಲ ಎಂದು ದು:ಖ ವ್ಯಕ್ತಪಡಿಸಿದರು. ಇದನ್ನೂ ಓದಿ: ದೀಪಕ್ ಹತ್ಯೆ ಕೇಸ್: ಪೊಲೀಸರ 27 ಕಿ.ಮೀ ಥ್ರಿಲ್ಲಿಂಗ್ ಚೇಸಿಂಗ್ ಸ್ಟೋರಿ ಓದಿ 

ಸರ್ಕಾರ ದೀಪಕ್ ಸಾವಿಗೆ ಪರಿಹಾರವಾಗಿ ಘೋಷಣೆ ಮಾಡಿದ್ದ 10 ಲಕ್ಷ ರೂ.ಪರಿಹಾರವನ್ನು ಕುಟುಂಬ ಸದಸ್ಯರಿಗೆ ಹಸ್ತಾಂತರಿಸುವ ಸಲುವಾಗಿ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ದೀಪಕ್ ಮನೆಗೆ ಆಗಮಿಸಿ ತಾಯಿಗೆ ಚೆಕ್ ಹಸ್ತಾಂತರಿಸಲು ಮುಂದಾದರು. ಆದರೆ ದೀಪಕ್ ತಾಯಿ ಸರ್ಕಾರದ ಚೆಕ್ ಬೇಡ ಎಂದು ಕಣ್ಣೀರಿಟ್ಟರು. ಈ ವೇಳೆ ಡಿಸಿ ಸಸಿಕಾಂತ್ ಅವರು, ನಾನು ನಿಮ್ಮ ಮಗನ ಹಾಗೇ, ಸರಕಾರ ಕೊಟ್ಟ ಪರಿಹಾರ ಬೇಡ ಎನ್ನಬೇಡಿ ಎಂದು ದೀಪಕ್ ಅವರ ತಾಯಿಯನ್ನು ಮನವೊಲಿಸಿದರು. ಇದನ್ನೂ ಓದಿ: 7 ವರ್ಷಗಳ ಕಾಲ ನನ್ನ ಜೊತೆಯಿದ್ದ ದೀಪಕ್ ಸಾವು ಊಹಿಸಲು ಸಾಧ್ಯವಿಲ್ಲ: ಮಾಲೀಕ ಮಜೀದ್

ಈ ನಡುವೆ ದೀಪಕ್ ಮೂಗ ತಮ್ಮ ಸತೀಶ್ ತನ್ನ ನೋವನ್ನು ಯಾರಿಗೂ ಹೇಳಲು ಆಗದೇ ರೋದನ ಅನುಭವಿಸುತ್ತಿದ್ದು ಕಂಡು ಬಂತು. ದೀಪಕ್ ಸಾವಿನಿಂದ ಸುರತ್ಕಲ್ ಕಾಟಿಪಳ್ಳದಲ್ಲಿರುವ ಮನೆಯಲ್ಲಿ ಮಡುಗಟ್ಟಿದ ವಾತಾವರಣ ನಿರ್ಮಾಣವಾಗಿದೆ.

ಇದನ್ನೂ ಓದಿ: Exclusive: ಪೊಲೀಸ್ ಇಲಾಖೆಯಲ್ಲಿನ ‘ಹಸ್ತ’ಕ್ಷೇಪವೇ ಕರಾವಳಿಯಲ್ಲಿ ಶಾಂತಿ ಕದಡಲು ಕಾರಣ!

ಇದನ್ನೂ ಓದಿ: ಕೊಲೆ ಸಂಖ್ಯೆ 21. ಇನ್ನು ಎಷ್ಟು ಕೊಲೆಯಾಗಬೇಕು: ಸಿಎಂಗೆ ಪ್ರತಾಪ್ ಸಿಂಹ ಪ್ರಶ್ನೆ

ಇದನ್ನೂ ಓದಿ: ಆಗ ಸುಮ್ಮನಿದ್ದವರು ಈಗೇನು ಮಾತನಾಡೋದು: ಬಿಜೆಪಿ ನಾಯಕರ ವಿರುದ್ಧ ಮುತಾಲಿಕ್ ಕಿಡಿ

https://www.youtube.com/watch?v=h2ySxt7VrtE

Share This Article
Leave a Comment

Leave a Reply

Your email address will not be published. Required fields are marked *