ಮುಸ್ಲಿಮರು ಜಾಸ್ತಿಯಿದ್ದರೆ ಅಲ್ಪಸಂಖ್ಯಾತರಲ್ಲ ಎಂದು ಘೋಷಿಸಿ: ಛಲವಾದಿ ನಾರಾಯಣಸ್ವಾಮಿ ಸವಾಲ್

Public TV
1 Min Read

-ರಾಹುಲ್ ಗಾಂಧಿ ತೃಪ್ತಿಪಡಿಸೋಕೆ ಜಾತಿಗಣತಿ ವರದಿ ಬಿಡುಗಡೆ ಮಾಡಿದ್ದಾರೆ

ಬೆಂಗಳೂರು: ಮುಸ್ಲಿಮರನ್ನು ಡಿವಿಷನ್ ಮಾಡಿಲ್ಲ, ಅವರು ಜಾಸ್ತಿಯಿದ್ದರೆ ಮೈನಾರಿಟಿ ಅಲ್ಲ ಎಂದು ಸರ್ಕಾರ ಘೋಷಣೆ ಮಾಡಲಿ ಎಂದು ವಿಧಾನ್ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ (Chalavadi Narayanaswamy) ಆಗ್ರಹಿಸಿದರು.ಇದನ್ನೂ ಓದಿ: 4,500 ಎಕ್ರೆಗೆ ದಾಖಲೆ ಇದೆ, ಅರಮನೆ ಹೆಸರಿಗೆ ಜಮೀನು ಬಂದ್ರೂ ಗ್ರಾಮಸ್ಥರು ಆತಂಕ ಪಡಬೇಕಿಲ್ಲ: ಪ್ರಮೋದಾದೇವಿ ಒಡೆಯರ್

ಜಾತಿಗಣತಿ (Caste Census) ವಿಚಾರವಾಗಿ ಮಾತನಾಡಿದ ಅವರು, ಜಾತಿಗಣತಿ ವರದಿ ವಿರೋಧ ಮಾಡಲು ಕಾರಣಗಳಿವೆ. ಸ್ವಾಗತಿಸಲು ಕೆಲವು ಕಾರಣಗಳಿವೆ. ಮುಸ್ಲಿಮರನ್ನು ಒಲೈಕೆ ಮಾಡಲು ನಂ.1 ಅಂತ ತೋರಿಸಿದ್ದಾರೆ. ಮುಸ್ಲಿಮರನ್ನ (Muslims) ಡಿವಿಷನ್ ಮಾಡಿಲ್ಲ. ಒಟ್ಟು ಮಾಡಿ ಗಣತಿ ಮಾಡಿದ್ದಾರೆ. ಲಿಂಗಾಯತ, ಒಕ್ಕಲಿಗ, ಪರಿಶಿಷ್ಟ ಜಾತಿ ಅವರನ್ನು ವಿಂಗಡಣೆ ಮಾಡಿದ್ದಾರೆ. ಮುಸ್ಲಿಮರು ಜಾಸ್ತಿಯಿದ್ದರೆ ಅವರು ಹೇಗೆ ಮೈನಾರಿಟಿ ಆಗುತ್ತಾರೆ. ಹಾಗಾದರೆ ಮುಸ್ಲಿಮರು ಮೈನಾರಿಟಿ ಅಲ್ಲ ಎಂದು ಸರ್ಕಾರ ಘೋಷಣೆ ಮಾಡಲಿ ಎಂದು ಸವಾಲು ಹಾಕಿದರು.

ಮುಂದಿನ ತಿಂಗಳಿಂದ ಕೇಂದ್ರ ಸರ್ಕಾರ ಜಾತಿಗಣತಿ ಪ್ರಾರಂಭ ಮಾಡುತ್ತಿದೆ. ಹೀಗಿರುವಾಗ ನೀವು ಯಾಕೆ ಜಾತಿಗಣತಿ ಬಿಡುಗಡೆ ಮಾಡಿದ್ದೀರಿ? ಈ ವರದಿ 10 ವರ್ಷಗಳ ಹಿಂದಿನ ವರದಿನಾ? ಹೊಸದಾಗಿ ಮಾಡಿರೋದಾ? 10 ವರ್ಷಗಳಲ್ಲಿ ಯಾರು ಹುಟ್ಟಿಲ್ಲವಾ, ಸತ್ತಿಲ್ಲವಾ? ಸರ್ಕಾರ ಇದಕ್ಕೆ ಉತ್ತರ ಕೊಡಬೇಕು. ಈ ಕಾಂಗ್ರೆಸ್ ಸರ್ಕಾರ ಜಾತಿ ಹಿಂದೆ ಬಿದ್ದಿದೆ. ರಾಹುಲ್ ಗಾಂಧಿ ತೃಪ್ತಿ ಮಾಡಲು ಜಾತಿಗಣತಿ ವರದಿ ಬಿಡುಗಡೆ ಮಾಡಿದ್ದಾರೆ. ಒಕ್ಕಲಿಗ, ಲಿಂಗಾಯತ ಮತ ಒಡೆದು ಮುಸ್ಲಿಮರನ್ನ ಒಲೈಕೆ ಮಾಡಲು ಹೋಗಿದ್ದಾರೆ. ನಮ್ಮ ಜನಾಂಗವನ್ನು ಕಡಿಮೆ ತೋರಿಸಿದ್ದಾರೆ. ನಮ್ಮ ನಮ್ಮ ಜನಾಂಗದ ನಡುವೆ ಹೋರಾಟ ಮಾಡುವ ಸ್ಥಿತಿಗೆ ಈ ಸರ್ಕಾರ ತಂದಿದೆ ಎಂದು ಕಿಡಿಕಾರಿದರು.ಇದನ್ನೂ ಓದಿ: ಹುಬ್ಬಳ್ಳಿ | 5 ವರ್ಷದ ಬಾಲಕಿ ಹತ್ಯೆ – ಕುರುಬ ಸಂಪ್ರದಾಯದಂತೆ ನೆರವೇರಿದ ಅಂತ್ಯಕ್ರಿಯೆ

Share This Article