ಶಾಸಕರ ಸಂಬಳ ಹೆಚ್ಚಳಕ್ಕೆ ತೀರ್ಮಾನ – ಈಗ ಎಷ್ಟಿದೆ? ಎಷ್ಟು ಏರಿಕೆ ಆಗುತ್ತೆ?

Public TV
1 Min Read

ಬೆಂಗಳೂರು: ಶಾಸಕರ ವೇತನವನ್ನು (Salary Hike) 50%ನಷ್ಟು ಹೆಚ್ಚಿಸಲು ಕಲಾಪ ಸಲಹಾ ಸಮಿತಿ ನಿರ್ಧರಿಸಿದೆ. ಇದರೊಂದಿಗೆ ಶಾಸಕರ ಕ್ಲಬ್‌ಗೆ 20 ಕೋಟಿ ರೂ. ಅನುದಾನ ನೀಡಲು ಕಲಾಪ ಸಲಹಾ ಸಮಿತಿ ತೀರ್ಮಾನಿಸಿದೆ.

ವೇತನ ಹೆಚ್ಚಳಕ್ಕೆ ಸಂಬಂಧಿಸಿದ ವಿಧೇಯಕವನ್ನು ಇದೇ ಅಧಿವೇಶನದಲ್ಲಿ (Session) ಸರ್ಕಾರ ಮಂಡಿಸಲಿದೆ. ಇದಕ್ಕೆ ಒಪ್ಪಿಗೆ ಸಿಕ್ಕ ತಕ್ಷಣ ಜನಪ್ರತಿನಿಧಿಗಳ ವೇತನ 50% ಹೆಚ್ಚಾಗಲಿದೆ. ಇದರ ಜೊತೆ ಇತರೆ ಭತ್ಯೆಗಳ ಮೊತ್ತವೂ ಹೆಚ್ಚಲಿದೆ.

ಕಳೆದ ಅಧಿವೇಶನದಲ್ಲಿ ಶಾಸಕರ ವೇತನ ಹೆಚ್ಚಳ ಮಾಡುವಂತೆ ವಿಪಕ್ಷ ಉಪನಾಯಕ ಅರವಿಂದ್ ಬೆಲ್ಲದ್ ಪ್ರಸ್ತಾಪ ಮಾಡಿದ್ದರು. ಮಸೂದೆಗೆ ಒಪ್ಪಿಗೆ ಸಿಕ್ಕಿದರೆ ಶಾಸಕರ ವೇತನ 80 ಸಾವಿರ ರೂ.ಗೆ ಏರಿಕೆಯಾಗಲಿದೆ.

ಸದ್ಯ ಶಾಸಕರ ತಿಂಗಳ ವೇತನ/ಭತ್ಯೆ ಎಷ್ಟಿದೆ?
* ವೇತನ – 40,000 ರೂ.
* ಕ್ಷೇತ್ರ ಭತ್ಯೆ – 60,000 ರೂ.
* ಪ್ರಯಾಣ ಭತ್ಯೆ – 60,000 ರೂ
* ಆಪ್ತ ಸಹಾಯಕರ ವೇತನ – 20,000 ರೂ.
* ದೂರವಾಣಿ ವೆಚ್ಚ – 20,000 ರೂ.
* ಅಂಚೆ ವೆಚ್ಚ – 5000 ರೂ
* ಒಟ್ಟು ಮೊತ್ತ – 2,05,000 ರೂ.

ಪ್ರಸ್ತುತ ಇರುವ ಸಂಬಳ ಎಷ್ಟು?
ವಿಧಾನಸಭೆ ಸ್ಪೀಕರ್ ಮತ್ತು ವಿಧಾನ ಪರಿಷತ್ ಸಭಾಪತಿ – 75,000 ರೂ.
ಮುಖ್ಯಮಂತ್ರಿ – 75,000 ರೂ.
ಉಪ ಸ್ಪೀಕರ್ ಮತ್ತು ಉಪ ಸಭಾಪತಿ – 60,000 ರೂ.
ಕ್ಯಾಬಿನೆಟ್ ಸಚಿವರು – 60,000 ರೂ.
ವಿಪಕ್ಷ ನಾಯಕರು – 60,000 ರೂ.
ರಾಜ್ಯ ಸಚಿವ ದರ್ಜೆ – 50,000 ರೂ.
ಸರ್ಕಾರ-ವಿಪಕ್ಷ ಮುಖ್ಯ ಸಚೇತಕ -50,000 ರೂ.
ಎಂಎಲ್‌ಸಿ – 40,000 ರೂ.

Share This Article