– ಧರ್ಮಸ್ಥಳ ಥೀಮ್‌ನಡಿ ಗಣೇಶೋತ್ಸವ ಆಚರಣೆಗೆ ನಿರ್ಧಾರ
ಬೆಂಗಳೂರು: ಗೌರಿ-ಗಣೇಶ ಹಬ್ಬಕ್ಕೆ ಕೌಂಟ್‌ಡೌನ್ ಆರಂಭವಾಗಿದ್ದು, ಹಬ್ಬವನ್ನು ಭರಮಾಡಿಕೊಳ್ಳಲು ಸಿಲಿಕಾನ್ ಸಿಟಿ ಬೆಂಗಳೂರು (Bengaluru) ಸಜ್ಜಾಗಿದೆ. ಈ ಬಾರಿ ಬೆಂಗಳೂರು ಮಹಾನಗರ ಗಣೇಶ ಉತ್ಸವ ಸಮಿತಿ ಧರ್ಮಸ್ಥಳ ಥೀಮ್‌ನಡಿ (Dharmasthala Theme) ಗಣೇಶೋತ್ಸವ ಆಚರಿಸಲು ನಿರ್ಧರಿಸಿದೆ.
ವಿಘ್ನ ನಿವಾರಕ ವಿಘ್ನೇಶ್ವರಿಗೆ ನಾಡಿನೆಲ್ಲೆಡೆ ಬಹುದೊಡ್ಡ ಭಕ್ತಗಣವಿದ್ದು, ಗಣೇಶೋತ್ಸವ ದೊಡ್ಡ ಹಬ್ಬವಾಗಿದೆ. ಈ ಹಬ್ಬ ಕೇವಲ ಸಂಭ್ರಮಾಚರಣೆಯ ಸಂಕೇತ ಮಾತ್ರವಲ್ಲ, ಸಹಬಾಳ್ವೆ, ಒಗ್ಗಟ್ಟಿನ ಸಂಕೇತವೂ ಹೌದು. ಈ ನಿಟ್ಟಿನಲ್ಲಿ ಹಿಂದೂಗಳ ಒಗ್ಗಟ್ಟನ್ನು ಈ ಬಾರಿಯ ಗಣೇಶೋತ್ಸವದ ಮೂಲಕ ಪ್ರದರ್ಶಿಸಲು ಬೆಂಗಳೂರು ಮಹಾನಗರ ಗಣೇಶ ಉತ್ಸವ ಸಮಿತಿ ನಿರ್ಧರಿಸಿದೆ.ಇದನ್ನೂ ಓದಿ: AI ವೀಡಿಯೋಗೆ ಸಾಕ್ಷಿ ಕೊಡಲು ತಡಬಡಿಸಿದ ಬುರುಡೆ ಸಮೀರ್
ಈ ಕುರಿತು ಬೆಂಗಳೂರು ಮಹಾನಗರ ಗಣೇಶ ಉತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಮಾತನಾಡಿ, ಈ ಬಾರಿ `ಆಪರೇಷನ್ ಸಿಂಧೂರ’ದ ಮಹತ್ವ ಹಾಗೂ `ಧರ್ಮಸ್ಥಳದ ಮಹಾತ್ಮೆ’ ಸಾರಲು ಗಣೇಶೋತ್ಸವ ಸಮಿತಿಗಳು ನಿರ್ಧರಿಸಿವೆ. ಈ ಬೆಂಗಳೂರು ಗಣೇಶೋತ್ಸವ ಸಮಿತಿಯಡಿ ಬರುವ 2,500 ಸಮಿತಿಗಳಲ್ಲಿ ಬರುವ ಎಲ್ಲಾ ಮಹಿಳಾ ಭಕ್ತಾದಿಗಳಿಗೆ ಆಪರೇಷನ್ ಸಿಂಧೂರದ ನೆನಪಿಗಾಗಿ, ನಿಮ್ಮ ಸಿಂಧೂರದ ಜೊತೆ ನಾವಿದ್ದೇವೆ ಎಂದು ಸಾರಲು ಅರಿಶಿಣ, ಕುಂಕುಮ ನೀಡಲಿದ್ದಾರೆ.
ಇನ್ನೂ ಧರ್ಮಸ್ಥಳದ ಬಗ್ಗೆ ಅಪಪ್ರಚಾರ ಮಾಡಲಾಗಿದೆ. ಈ ನಿಟ್ಟಿನಲ್ಲಿ ಜನರಲ್ಲಿನ ಗೊಂದಲ ಹೋಗಲಾಡಿಸಲು ಧರ್ಮಸ್ಥಳ ಸತ್ಯದ ಪೋಸ್ಟರ್ ಮತ್ತು ಬ್ಯಾನರ್‌ಗಳನ್ನು ಗಣೇಶ ಮಂಟಪಗಳಲ್ಲಿ ಅಳವಡಿಸಲು ಸೂಚಿಸಲಾಗಿದೆ. ಭಕ್ತಾದಿಗಳೇ ಧರ್ಮಸ್ಥಳವನ್ನು ಕಾಪಾಡುತ್ತಾರೆ ಎಂದು ಈ ಮೂಲಕ ಸಾರಲಿದ್ದಾರೆ. ಇನ್ನೂ ಕಬ್ಬನ್ ಪೇಟೆಯ ಗಜಾನನ ಮಿತ್ರ ಮಂಡಳಿಯಿಂದ ಈ ಬಾರಿ ಧರ್ಮಸ್ಥಳ ಥೀಮ್‌ನಲ್ಲಿ ಗಣೇಶ ಹಾಗೂ ಮಂಟಪ ರೆಡಿಯಾಗುತ್ತಿದೆ. ಧರ್ಮಸ್ಥಳ ಕೇಸ್‌ಗೆ ಸಂಬಂಧಿಸಿದ ಕೆಲವರ ಮುಖವಾಡಗಳ ದರ್ಶನವನ್ನು ತೋರಿಸಲಿದ್ದಾರೆ ಎಂದು ಗಜಾನನ ಮಿತ್ರ ಮಂಡಳಿಯ ರವಿ ತಿಳಿಸಿದ್ದಾರೆ.
ಒಟ್ಟಿನಲ್ಲಿ ಈ ಬಾರಿಯ ಗಣೇಶೋತ್ಸವ ಮೂಲಕ ಧರ್ಮಸ್ಥಳದ ಭಕ್ತಿ, ಪರಾಕಾಷ್ಠೆ ವ್ಯಕ್ತವಾಗಲಿದೆ.ಇದನ್ನೂ ಓದಿ: ಧರ್ಮಸ್ಥಳ ಕೇಸ್ 90% ತನಿಖೆ ಮುಗಿದಿದೆ, ಎನ್‌ಐಎ, ಸಿಬಿಐ ಅಗತ್ಯವಿಲ್ಲ: ರಾಮಲಿಂಗಾ ರೆಡ್ಡಿ