ದೆಹಲಿಯಲ್ಲಿ ಮೋದಿ ಭೇಟಿಯಾಗ್ತೀನಿ ಎಂದ ಸಿದ್ದರಾಮಯ್ಯ; ಕಾರಣ ಏನು?

Public TV
1 Min Read

ಬೆಂಗಳೂರು: ಬರ ಪರಿಹಾರ ವಿಚಾರವಾಗಿ ಚರ್ಚೆ ನಡೆಸಲು ಪ್ರಧಾನಿ ಮೋದಿಯವರನ್ನ (Narendra Modi) ಭೇಟಿಯಾಗಲು ಮಂಗಳವಾರ (ಡಿ.19) ದೆಹಲಿಗೆ ತೆರಳುತ್ತಿರೋದಾಗಿ ಸಿಎಂ ಸಿದ್ದರಾಮಯ್ಯ (Siddaramaiah) ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಅವರು, ಪ್ರಧಾನಿಗಳು ಟೈಂ ಕೊಟ್ಟಿದ್ದಾರೆ. ಮಂಗಳವಾರ ಬೆಳಗ್ಗೆ 11 ಗಂಟೆಗೆ ಸಮಯ ಕೊಟ್ಟಿದ್ದಾರೆ. ಹೋಗಿ ಭೇಟಿ ಮಾಡ್ತೀನಿ. ಬರ ಪರಿಹಾರ (Drought Relief) ವಿಚಾರವಾಗಿಯೇ ಅವರನ್ನು ಭೇಟಿ ಆಗೋಕೆ ಹೋಗ್ತಿದ್ದೇನೆ. ಬರಗಾಲದ ಬಗ್ಗೆ ಅವರ ಬಳಿ ಚರ್ಚೆ ಮಾಡ್ತೀನಿ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಮಕ್ಕಳೊಂದಿಗೆ ಮಕ್ಕಳಾದ ಮೋದಿ – ತನಗಾಗಿ ವಿಶೇಷ ಕವಿತೆ ಹಾಡಿದ ಬಾಲಕಿಗೆ ಭೇಷ್‌ ಎಂದ ಪ್ರಧಾನಿ

ಅಲ್ಲದೇ ಕಾಂಗ್ರೆಸ್ ವರ್ಕಿಂಗ್ ಕಮಿಟಿ ಸಭೆ ಇದೆ, ಅದರಲ್ಲಿ ಭಾಗವಹಿಸುತ್ತೇನೆ. ಲೋಕಸಭೆ ಚುನಾವಣೆ ಬಗ್ಗೆಯೂ ಹೈಕಮಾಂಡ್ ಜೊತೆ ಚರ್ಚೆ ಮಾಡ್ತೀನಿ. ನಿಗಮ-ಮಂಡಳಿ ನೇಮಕಾತಿ ಬಗ್ಗೆಯೂ ಹೈಕಮಾಂಡ್ ಜೊತೆ ಚರ್ಚೆ ಮಾಡೋದಾಗಿ ತಿಳಿಸಿದರು.

ಇನ್ನೂ ಕೇರಳದಲ್ಲಿ ಕೋವಿಡ್ ಹೆಚ್ಚಳ ವಿಚಾರವಾಗಿ ರಾಜ್ಯದಲ್ಲಿ ಕ್ರಮ ತೆಗೆದುಕೊಳ್ಳುವ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿಎಂ, ಕೇರಳದಲ್ಲಿ ಕೇಸ್ ಹೆಚ್ಚಳ ಆಗ್ತಿದೆ. ನಮ್ಮ ಆರೋಗ್ಯ ಸಚಿವರಿಗೆ ಸಭೆ ಮಾಡಲು ತಿಳಿಸಿದ್ದೇನೆ. ಸಭೆ ಮಾಡಿ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳುವಂತೆ ಆರೋಗ್ಯ ಸಚಿವರಿಗೆ ಸೂಚನೆ ನೀಡಿದ್ದೇನೆ ಎಂದು ವಿವರಿಸಿದರು. ಇದನ್ನೂ ಓದಿ: ವಾರಣಾಸಿಯಲ್ಲಿ ವಿಶ್ವದ ಅತಿದೊಡ್ಡ ಧ್ಯಾನ ಕೇಂದ್ರ ಉದ್ಘಾಟಿಸಿದ ಪಿಎಂ ಮೋದಿ- ವಿಶೇಷತೆ ಏನು?

Share This Article