ಭೀಕರ ಚಂಡಮಾರುತಕ್ಕೆ 58 ಮಂದಿ ಸಾವು – ಫಿಲಿಪೈನ್ಸ್‌ನಲ್ಲಿ ಬಿಡುವಿಲ್ಲದೇ ನಡೀತಿದೆ ಕಾರ್ಯಾಚರಣೆ

Public TV
1 Min Read

ಮಲಿನಾ: ಫಿಲಿಪೈನ್ಸ್‌ನಲ್ಲಿ ಚಂಡಮಾರುತದಿಂದಾಗಿ ಪ್ರವಾಹ, ಭೂ ಕುಸಿತ ಉಂಟಾಗಿದ್ದು, ಕಳೆದ ಎರಡು ದಿನಗಳಲ್ಲಿ ಮೃತಪಟ್ಟವರ ಸಂಖ್ಯೆ 58ಕ್ಕೆ ಏರಿಕೆಯಾಗಿದೆ. ಇದರೊಂದಿಗೆ ಸುಮಾರು 27 ಜನರು ನಾಪತ್ತೆಯಾಗಿದ್ದು, 100ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

LIFT

ಹಳ್ಳಿ-ಹಳ್ಳಿಗಳಲ್ಲಿ ಭೂ ಕುಸಿತ ಉಂಟಾಗುತ್ತಿದ್ದು, ಮಣ್ಣಿನಡಿಯಲ್ಲೇ ಸಿಲುಕಿ ಜನರು ಪ್ರಾಣಬಿಡುತ್ತಿದ್ದಾರೆ. ಸತತವಾಗಿ ಕಾರ್ಯಾಚರಣೆ ನಡೆಸುತ್ತಿರುವ ಸಿಬ್ಬಂದಿ ಬರಿಗೈನಿಂದಲೇ ಮಣ್ಣನ್ನು ಅಗೆದು ಮೃತದೇಹಗಳನ್ನು ಹೊರತೆಗೆಯುತ್ತಿದ್ದಾರೆ. ಭೂ ಕುಸಿತದೊಂದಿಗೆ ಸಣ್ಣ ಕಲ್ಲು ಮಿಶ್ರಿತ ಮಳೆಯೂ ಆಗುತ್ತಿರುವುದು ಜನರನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡಿದೆ. ಇದನ್ನೂ ಓದಿ: ಜಲಿಯನ್ ವಾಲಾಬಾಗ್ ಹತ್ಯಾಕಾಂಡದಲ್ಲಿ ಹುತಾತ್ಮರಾದವರ ತ್ಯಾಗ ಮುಂದಿನ ಪೀಳಿಗೆಗೆ ಪ್ರೇರಣೆ: ಮೋದಿ

ಪ್ರಾರಂಭದಲ್ಲಿ ಗಂಟೆಗೆ 65 ಕಿಮೀ ವೇಗದಲ್ಲಿ ಇದ್ದ ಈ ಚಂಡಮಾರುತ ಇದೀಗ ಗಂಟೆಗೆ 85 ಕಿಮೀ ವೇಗದಲ್ಲಿ ಅಪ್ಪಳಿಸುತ್ತಿದೆ. ಈ ವರ್ಷ ಅಪ್ಪಳಿಸಿದ ಮೊದಲ ಉಷ್ಣವಲಯದ ಚಂಡಮಾರುತ ಇದಾಗಿದೆ. ಉಷ್ಣವಲಯದ ಚಂಡಮಾರುತ ಮೇಗಿಯಿಂದ ಭೂಕುಸಿತವುಂಟಾಗುತ್ತಿದ್ದು, ಈಗಾಗಲೇ ಫಿಲಿಪೈನ್ಸ್‌ನಲ್ಲಿ ಸಾಕಷ್ಟು ಹಾನಿಯಾಗಿದೆ ಎಂದು ವರದಿಗಳು ಹೇಳುತ್ತಿವೆ. ಇದನ್ನೂ ಓದಿ: ದೇಶಿ ನಿರ್ಮಿತ ಪಿಸ್ತೂಲ್ ಇಟ್ಟುಕೊಂಡಿದ್ದ ಶಿಕ್ಷಕಿ ಅರೆಸ್ಟ್

PILIFINES

ಫಿಲಿಫೈನ್ಸ್ ದ್ವೀಪ ಸಮೂಹದಲ್ಲಿ 20 ವರ್ಷದಲ್ಲಿ ಸುಮಾರು 20 ಬಾರಿ ಚಂಡಮಾರುತಗಳು ಉಂಟಾಗುತ್ತವೆ. ಇದರೊಂದಿಗೆ ಮಣ್ಣಿನ ಕುಸಿತವುಂಟಾಗಿ ಅದು ಪ್ರವಾಹದ ರೂಪದಲ್ಲಿ ಹರಿದು ವಸತಿ ಪ್ರದೇಶ, ಕೃಷಿ ಭೂಮಿಗಳಿಗೆ ನುಗ್ಗುತ್ತಿದೆ. ಮಳೆಯೊಂದಿಗೆ ಮಣ್ಣಿನ ಕಣಗಳೇ ಸೋಕುತ್ತಿವೆ ಎಂದು ಜನರು ಕಂಗಾಲಾಗಿದ್ದಾರೆ ಎಂದು ಪ್ರಾಕೃತಿಕ ವಿಕೋಪ ನಿರ್ವಹಣಾ ಕೇಂದ್ರ ತಿಳಿಸಿದೆ ಎನ್ನಲಾಗಿದೆ.

ಮಂಗಳವಾರವೇ ಭೀಕರ ಭೂಕುಸಿತದಿಂದ ಹಲವು ಮನೆಗಳು ಸಮುದ್ರದ ಪಾಲಾಗಿವೆ. ಇಲ್ಲಿ ಸಿಲುಕಿದ್ದ 400 ಜನರನ್ನು ಬೋಟ್ ಮೂಲಕ ರಕ್ಷಣೆ ಮಾಡಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *