ಕೊಲೆ ಬೆದರಿಕೆ: ನಟಿ ಶರಣ್ಯ ವಿರುದ್ಧ ದೂರು ದಾಖಲು

Public TV
1 Min Read

ಮಿಳಿನ ಹೆಸರಾಂತ ನಟಿ, ದಕ್ಷಿಣದ ತಾರೆ ಶರಣ್ಯ (Saranya Ponvannan)  ವಿರುದ್ಧ ಚೆನ್ನೈನ ವಿರುಂಭಾಗಕಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ತಾಯಿ ಪಾತ್ರಗಳ ಮೂಲಕ ಅಸಂಖ್ಯಾತ ಅಭಿಮಾನಿಗಳನ್ನು ಹೊಂದಿರುವ ಶರಣ್ಯ ಪೊನ್ವನನ್ ವಿರುದ್ಧ ದೂರು (Complaint) ದಾಖಲಾಗಿದ್ದಕ್ಕೆ ಅಭಿಮಾನಿಗಳಿಗೆ ಸಹಜವಾಗಿ ಆತಂಕವಾಗಿದೆ.

ಶರಣ್ಯ ವಿರುದ್ಧ ದೂರು ದಾಖಲಿಸಿದವರು, ಅವರ ಪಕ್ಕದ ಮನೆಯ ಮಹಿಳೆ ಎನ್ನುವುದು ಅಚ್ಚರಿಯ ಸಂಗತಿ. ಪಾರ್ಕಿಂಗ್ ವಿಷಯವಾಗಿ ಪಕ್ಕದ ಮನೆಯವರೊಂದಿಗೆ ಶರಣ್ಯ ಗಲಾಟೆ ಮಾಡಿದ್ದಾರಂತೆ ಜೊತೆಗೆ ಮಹಿಳೆಗೆ ಕೊಲೆ ಬೆದರಿಕೆ (Death threat) ಹಾಕಿದ್ದಾರೆ ಎಂದು ದೂರಿನಲ್ಲಿ ದಾಖಲಾಗಿದೆ.

 

ಶ್ರೀದೇವಿ ಅನ್ನುವವರ ಜೊತೆ ಪದೇ ಪದೇ ಶರಣ್ಯ ಪಾರ್ಕಿಂಗ್ ವಿಚಾರವಾಗಿ ಗಲಾಟೆ ಮಾಡುತ್ತಿದ್ದರಂತೆ. ಈಗ ಕೊಲೆ ಬೆದರಿಕೆ ಕೂಡ ಹಾಕಿದ್ದಾರೆ ಎಂದು ದೂರು ನೀಡಿದ್ದಾರೆ. ಅದಕ್ಕೆ ಸಾಕ್ಷಿ ಎನ್ನುವಂತೆ ಸಿಸಿಟಿವಿ ದೃಶ್ಯಾವಳಿಗಳನ್ನೂ ನೀಡಿದ್ದಾರಂತೆ. ಸದ್ಯ ಪೊಲೀಸರು ಈ ಕುರಿತಂತೆ ವಿಚಾರಣೆ ನಡೆಸುತ್ತಿದ್ದಾರೆ.

Share This Article