ಹಾಸನದಲ್ಲಿ ಎಚ್‍ಡಿ ರೇವಣ್ಣ ಆಪ್ತನ ಮೇಲೆ ಡೆಡ್ಲಿ ಅಟ್ಯಾಕ್!

Public TV
1 Min Read

ಹಾಸನ: ಪ್ರಥಮ ದರ್ಜೆ ಗುತ್ತಿಗೆದಾರನ ಮತ್ತು ಎಚ್.ಡಿ ರೇವಣ್ಣ (HD Revanna) ಆಪ್ತನ ಕೊಲೆಗೆ ಯತ್ನಿಸಿದ ಘಟನೆ ಹಾಸನದಲ್ಲಿ (Hassan) ನಡೆದಿದೆ.

ಹೊಳೆನರಸೀಪುರ ತಾಲೂಕಿನ ಸೂರನಹಳ್ಳಿ ಗ್ರಾಮದ ಹಂಪ್ಸ್ ಬಳಿ ಮಂಗಳವಾರ ರಾತ್ರಿ ಅಟ್ಯಾಕ್ ನಡೆದಿದ್ದು, ಎಚ್‍ಡಿಆರ್ ಆಪ್ತರಾಗಿರುವ ಅಶ್ವಥ್ ನಾರಾಯಣಗೌಡ ಮೇಲೆ ದಾಳಿ ನಡೆದಿದೆ. ಕೂದಲೆಳೆ ಅಂತರದಲ್ಲಿ ಅಶ್ವತ್ಥ್ ನಾರಾಯಣ ಗೌಡ ಪಾರಾಗಿದ್ದಾರೆ.

ರೇವಣ್ಣ ಜೊತೆಯೇ ನಾರಾಯಣಗೌಡ ರಾತ್ರಿ 8.30ರ ಸುಮಾರಿನಲ್ಲಿ ಚನ್ನರಾಯಪಟ್ಟಣದ ತಮ್ಮ ನಿವಾಸಕ್ಕೆ ಕೆಎ-53-ಎಂಎಫ್-5555 ನಂಬರಿನ ಫಾರ್ಚೂನರ್ ಕಾರಿನಲ್ಲಿ ಹೊರಟಿದ್ದರು. ಅಶ್ವಥ್ ಮನೆಗೆ ಹೊರಟಿರುವ ಬಗ್ಗೆ ಮಾಹಿತಿ ಪಡೆದು ಸೂರನಹಳ್ಳಿ ಹಂಪ್ಸ್ ಬಳಿ ಕಾರಿನ ಮೇಲೆ ದುಷ್ಕರ್ಮಿಗಳು ದಿಢೀರ್ ಅಟ್ಯಾಕ್ ಮಾಡಿದ್ದಾರೆ. ಇದನ್ನೂ ಓದಿ: ಸಮುದ್ರದಲ್ಲಿ ಮುಳುಗುತ್ತಿದ್ದ ಒಂದೇ ಕುಟುಂಬದ 7 ಜನರ ರಕ್ಷಣೆ

ಮೊದಲು ಕಲ್ಲನ್ನು ಕಾರಿನ ಗ್ಲಾಸ್ ಮೇಲೆ ಎತ್ತಿಹಾಕಿ ನಂತರ ಮಾರಕಾಸ್ತ್ರಗಳಿಂದ ಕೊಲೆ ಮಾಡಲು ಮುಂದಾಗಿದ್ದಾರೆ. ಕೂಡಲೇ ಕಾರನ್ನು ರಿವರ್ಸ್ ತೆಗೆದು ಅಶ್ವಥ್ ಎಸ್ಕೇಪ್ ಆಗಿದ್ದಾರೆ. ಮೂಡಲಹಿಪ್ಪೆ ಗ್ರಾಮದವರೆಗೂ ಅಶ್ವಥ್‍ರನ್ನು ಹಿಂಬಾಲಿಸಿದ ದುಷ್ಕರ್ಮಿಗಳು, ನಂತರ ಪರಾರಿಯಾಗಿದ್ದಾರೆ.

ಈ ಸಂಬಂಧ ಚನ್ನರಾಯಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Web Stories

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್