ಕಲಬುರಗಿಯಲ್ಲಿ ಒಬ್ಬಂಟಿಯಾದ ಡಿಸಿಎಂ ಗೋವಿಂದ ಕಾರಜೋಳ

Public TV
1 Min Read

ಕಲಬುರಗಿ: ಜಿಲ್ಲೆಯಲ್ಲಿ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಒಬ್ಬಂಟಿಯಾದ್ರಾ ಅನ್ನೋ ಪ್ರಶ್ನೆ ಹುಟ್ಟಿಕೊಂಡಿದೆ. ಜಿಲ್ಲಾ ಉಸ್ತುವಾರಿಯಾದ್ರೂ ಕಲಬುರಗಿಗೆ ಕಾರಜೋಳ ಅವರು ಬಂದಿಲ್ಲ ಎಂದು ಸ್ಥಳೀಯ ಕಾಂಗ್ರೆಸ್ ಮುಖಂಡ ಮಜರ್ ಖಾನ್ ತರಾಟೆಗೆ ತೆಗೆದುಕೊಂಡರು ಬಿಜೆಪಿಯ ಯಾವ ನಾಯಕರು ಕಾರಜೋಳ ಅವರ ಪರ ಮಾತನಾಡದೇ ಮೌನವಾಗಿದ್ದರು. ಕೊನೆಗೆ ಕಲಬುರಗಿ ಜಿಲ್ಲಾಧಿಕಾರಿ ಬಿ.ಶರತ್ ಮಧ್ಯೆ ಪ್ರವೇಶಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು.

ನಗರದಲ್ಲಿನ ಕಂಟೈನ್‍ಮೆಂಟ್ ಝೋನ್‍ಗಳ ಪರಿಸ್ಥಿತಿ ಹಾಗೂ ಅಲ್ಲಿನ ಸ್ಥಳೀಯರಿಗೆ ಇನ್ನು ಒದಗಿಸಬೇಕಾದ ಸೌಕರ್ಯಗಳ ಮಾಹಿತಿ ಪಡೆಯಲು ಸಾಥ್ ಗುಮ್ಮಜ ಬಳಿಯ ಪ್ರದೇಶಕ್ಕೆ ಗೋವಿಂದ ಕಾರಜೋಳ ಭೇಟಿ ನೀಡಿದ್ದರು. ಈ ವೇಳೆ ಸ್ಥಳದಲ್ಲಿದ್ದ ಕಾಂಗ್ರೆಸ್ ಮುಖಂಡ ಮತ್ತು ಅವರ ಬೆಂಬಲಿಗರು ಉಪಮುಖ್ಯಮಂತ್ರಿಗಳ ವಿರುದ್ಧ ಅಸಮಾಧಾನ ಹೊರಹಾಕಿದರು.

ನಮಸ್ಕಾರ ಹೇಗಿದ್ದಿರಿ ಅಂತಾ ಕಾರಜೋಳ ಪ್ರಶ್ನೆಗೆ ಖಾರವಾಗಿ ಪ್ರತಿಕ್ರಿಯಿಸಿದ ಕೈ ಮುಖಂಡ ಬದಿಕಿದ್ದವೆ ಇನ್ನು ಸತ್ತಿಲ್ಲ. ಬಹಳ ಬೇಗ ನಮ್ಮ ಕಡೆ ಬಂದಿದ್ದಿರಿ ಎಂದರು. ಗೋವಿಂದ ಕಾರಜೋಳ ಹಾಗೆಲ್ಲ ಮಾತನಾಡಬಾರದು ಎಂದು ಸಮಾಧಾನ ಮಾಡಲು ಮುಂದಾದ್ರು. ಹೀಗೆ ಇಬ್ಬರ ಮಾತು ಚಕಮಕಿಗೆ ಕಾರಣವಾಯ್ತು. ಕೊನೆಗೆ ಸ್ಥಳದಲ್ಲಿದ್ದ ಅಧಿಕಾರಿಗಳು ಮತ್ತು ಜಿಲ್ಲಾಧಿಕಾರಿಗಳು ಪರಿಸ್ಥಿತಿ ತಿಳಿಗೊಳಿಸಿದರು.

ಸ್ಥಳದಲ್ಲಿದ್ದ ಬಿಜೆಪಿ ಸಂಸದ ಡಾ.ಉಮೇಶ್ ಜಾಧವ್ ಸೇರಿದಂತೆ ಯಾವ ಶಾಸಕರು ಸಹ ಒಬ್ಬರು ಕಾರಜೋಳ ಅವರ ಬೆನ್ನಿಗೆ ನಿಲ್ಲಲಿಲ್ಲ. ಇನ್ನು ಸ್ಥಳದಲ್ಲಿಯೇ ಪೊಲೀಸ್ ಆಯುಕ್ತ ಎನ್.ಸತೀಶ್‍ಕುಮಾರ್ ಸೇರಿದಂತೆ ಹಲವು ಪೊಲೀಸ್ ಅಧಿಕಾರಿಗಳು ಇದ್ರು ಸಹ ಅವರು ಕೈ ಮುಖಂಡನಿಗೆ ಒಂದು ಮಾತು ಸಹ ಆಡಲಿಲ್ಲ.

ಅಂತಾ ಕಾರಜೋಳ ಅವರನ್ನು ತರಾಟೆ ತೆಗೆದುಕೊಂಡಿದ್ದಾರೆ. ನಂತರ ಈ ಸಮಯದಲ್ಲಿ ಸಹ ಪ್ರತಿಕ್ರಿಯಿಸಿದ ಕಾರಜೋಳ ಹಾಗ ಮಾತನಾಡಬಾದು ಅಂತಾ ಹೇಳಿದ್ದಾಗ ಸಹ ಕೈ ಮುಖಂಡರು, ಗೋವಿಂದ ಕಾರಜೋಳ ಅವರಿಗೆ ಇಷ್ಟು ದಿನ ಯಾಕೆ ಬಂದಿಲ್ಲ, ಇಲ್ಲಿಯವರೆಗೆ ಜಿಲ್ಲೆಗೆ ಎರಡು ಬಾರಿ ಅದು ಎರಡು ಗಂಟೆ ಸಭೆ ನಡೆಸಿ ಹೋಗಿದ್ದಿರಿ ಅಂತಾ ತರಾಟೆಗೆ ತೆಗೆದುಕೊಂಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *