ಮಂತ್ರಾಲಯ, ರಾಯಚೂರಿನ ದೇವಾಲಯಗಳಿಗೆ ನಾಳೆ ಡಿಕೆಶಿ ಭೇಟಿ

Public TV
1 Min Read

ರಾಯಚೂರು: ರಾಜ್ಯದಲ್ಲಿ ನವೆಂಬರ್ ಕ್ರಾಂತಿ ಚರ್ಚೆ ಬೆನ್ನಲ್ಲೇ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ (DK Shivakumar) ಅವರು ದೀಪಾವಳಿ ಹಬ್ಬದ ಸಂದರ್ಭದಲ್ಲಿ ಟೆಂಪಲ್ ರನ್‌ಗೆ ಸಿದ್ಧವಾಗಿದ್ದಾರೆ. ನಾಳೆ (ಅ.22) ಡಿಸಿಎಂ ಡಿ.ಕೆ.ಶಿವಕುಮಾರ್ ಮಂತ್ರಾಲಯ (Mantralaya) ಸೇರಿ ರಾಯಚೂರಿನ ದೇವಾಲಯಗಳಿಗೆ ಭೇಟಿ ನೀಡಲಿದ್ದಾರೆ.

ಕುಟುಂಬ ಸಹಿತರಾಗಿ ರಾಯರ ಮಠ ಹಾಗೂ ದೇವಾಲಯಗಳಿಗೆ ಭೇಟಿ ನೀಡಲಿದ್ದಾರೆ. ಯಾವುದೇ ಬಹುಮುಖ್ಯ ರಾಜಕೀಯ ಅಥವಾ ಸರ್ಕಾರಿ ಕಾರ್ಯಕ್ರಮವಿಲ್ಲದೆ ಒಂದು ದಿನ ದೇವಾಲಯಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿ, ಪ್ರಾರ್ಥನೆ ಮಾಡಲಿದ್ದಾರೆ. ನಾಳೆ ಬೆಳಗ್ಗೆ 8ಕ್ಕೆ ಮಂತ್ರಾಲಯದಲ್ಲಿ ಗುರುರಾಘವೇಂದ್ರ ಸ್ವಾಮಿ ದರ್ಶನ ಪಡೆದು, ಪೂಜೆ ಸಲ್ಲಿಸಲಿದ್ದಾರೆ.ಇದನ್ನೂ ಓದಿ:Maharashtra | ಬಹುಮಹಡಿ ಕಟ್ಟಡದಲ್ಲಿ ಬೆಂಕಿ ಅವಘಡ – ನಾಲ್ವರು ಸಾವು, 10 ಮಂದಿಗೆ ಗಾಯ

ಬೆಳಗ್ಗೆ 10ಕ್ಕೆ ರಾಯಚೂರು ತಾಲೂಕಿನ ಬಿಚ್ಚಾಲಿಯಲ್ಲಿರುವ ರಾಯರ ಏಕಾಶಿಲಾವೃಂದಾವನ ಹಾಗೂ ಬಿಚ್ಚಾಲಮ್ಮ ದೇವಿ ದರ್ಶನ ಪಡೆದು ಪೂಜೆ ಸಲ್ಲಿಸಲಿದ್ದಾರೆ. ಬೆಳಗ್ಗೆ 11ಕ್ಕೆ ಗಾಣಧಾಣ ಪಂಚಮುಖಿ ಆಂಜನೇಯ ಸ್ವಾಮಿ ದರ್ಶನ, ಪೂಜೆ ಸಲ್ಲಿಸಲಿದ್ದಾರೆ.

ಬಳಿಕ ಪಂಚಮುಖಿಯಲ್ಲಿ ಬ್ಲಾಕ್ ಕಾಂಗ್ರೆಸ್ ನೂತನ ಪದಾಧಿಕಾರಿಗಳ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ನಂತರ ಮಧ್ಯಾಹ್ನ 1ರಿಂದ ಸಂಜೆ 6:55ರವರೆಗೆ ಮಂತ್ರಾಲಯದಲ್ಲಿ ಉಳಿಯಲಿರುವ ಡಿಕೆಶಿ ಬಳಿಕ ರೈಲಿನ ಮೂಲಕ ಬೆಂಗಳೂರಿಗೆ ಪ್ರಯಾಣ ಬೆಳೆಸಲಿದ್ದಾರೆ.ಇದನ್ನೂ ಓದಿ: ಡ್ರೆಸ್ಸಿಂಗ್‌ ರೂಮಿನಲ್ಲಿ ಇಸ್ಲಾಂ ಪ್ರಚಾರ ಮಾಡಿದ್ದಕ್ಕೆ ಕ್ಯಾಪ್ಟನ್ಸಿಯಿಂದ ರಿಜ್ವಾನ್‌ ಔಟ್‌!

Share This Article