ಕಂಡಕಂಡಲ್ಲಿ ಕಸ ಬಿಸಾಡಿದ್ರೆ ಕೇಸ್ ಹಾಕ್ತೇವೆ: ಡಿಸಿಎಂ

Public TV
2 Min Read

ಬೆಂಗಳೂರು: ದಸರಾ ಹಿನ್ನೆಲೆ ಕಸ ಜಾಸ್ತಿ ಬಂದಿದೆ. ಕಂಡಕಂಡಲ್ಲಿ ಯಾರು ಕಸ ಹಾಕಿದ್ರು ಅಂತ ಪರಿಶೀಲಿಸಿ ಅವರ ವಿರುದ್ಧ ಕೇಸ್ ಹಾಕುತ್ತೇವೆ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ (DK Shivakumar) ಹೇಳಿದ್ದಾರೆ.

ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ಡಿಸಿಎಂ ನೇತೃತ್ವದಲ್ಲಿ ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರದ ಸಭೆ ನಡೆದಿತ್ತು. ಈ ವೇಳೆ ಮಾತನಾಡಿದ ಅವರು ದಸರಾ ಹಬ್ಬ ಇದ್ದಿದ್ದರಿಂದ ಜಾಸ್ತಿ ಕಸ ಬಂದಿದೆ. ಕಸ ಎತ್ತಲು ಡ್ರೈವ್ ಮಾಡಲು ಸೂಚನೆ ನೀಡಲಾಗಿದೆ. ಎಲ್ಲೆಲ್ಲಿ ಸಾರ್ವಜನಿಕರು ಕಸ ಹಾಕಿದ್ದಾರೆ ಎಂಬುದನ್ನು ಟ್ರಾಫಿಕ್ ಪೊಲೀಸ್, ಸಿಸಿ ಕ್ಯಾಮರಾಗಳ ಮೂಲಕ ಪರಿಶೀಲಿಸಿ, ಕಸ ಹಾಕಿದವರ ವಿರುದ್ಧ ಕೇಸ್ ಹಾಕಿ ಎಂದು ಸೂಚನೆ ನೀಡಿದ್ದೇನೆ ಎಂದಿದ್ದಾರೆ. ಇದನ್ನೂ ಓದಿ: ಪ್ರಶ್ನೆ ಸಿಂಪಲ್ ಇರಬೇಕು ಇದು ಟೂ ಮಚ್ – ಜಾತಿಗಣತಿ ವೇಳೆ ಡಿ.ಕೆ ಶಿವಕುಮಾರ್‌ ಅಸಮಾಧಾನ

ಈಗ ಇರುವ ಕಸವನ್ನು ಸ್ವಚ್ಛ ಮಾಡಲು ಕಾರ್ಯಕ್ರಮ ರೂಪಿಸುತ್ತಿದ್ದೇವೆ. ಬೆಂಗಳೂರು ಸುಂದರವಾಗಿ ಇರಬೇಕು. ಕಸದ ಬಗ್ಗೆ ಮ್ಯಾಸೀವ್ ಡ್ರೈವ್ ಮಾಡೋ ಪ್ಲ್ಯಾನ್ ಮಾಡಿದ್ದೇವೆ. ಯಾರಾದ್ರು ಕಸ ಹಾಕಿದ್ರೆ, ಅದರ ಬಗ್ಗೆ ಸಾರ್ವಜನಿಕರು ಪಾಲಿಕೆಗೆ ಮಾಹಿತಿ ಕೊಡುವ ಬಗ್ಗೆ ನಿರ್ಧಾರ ಮಾಡಿದ್ದೇವೆ. ಕಸ ಹಾಕಿದವರಿಗೆ ದಂಡ ವಿಧಿಸಿ ಈಗಾಗಲೇ 1 ಕೋಟಿ ರೂ. ಫೈನ್ ಸಂಗ್ರಹ ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಕಸ ವಿಲೇವಾರಿಯ ಡ್ರೈವ್‌ಗಳನ್ನು ಮತ್ತಷ್ಟು ಜಾಸ್ತಿ ಮಾಡುತ್ತೇವೆ. ಬೆಂಗಳೂರು ಹೊರವಲಯದ ಕಸವನ್ನು ನನ್ನ ಇಲಾಖೆಗೆ ಸೇರಿಸಿಕೊಂಡಿದ್ದೇವೆ. ಇದನ್ನು ಸ್ವಚ್ಛ ಮಾಡೋ ಕೆಲಸ ಮಾಡುತ್ತೇವೆ. ಮುಂದಿನ ವಾರ ಈ ಬಗ್ಗೆಯೂ ಈ ಸಭೆ ಮಾಡ್ತೇವೆ ಎಂದು ಹೇಳಿದ್ದಾರೆ.

ಬಿ ಖಾತಾದರರಿಗೆ ಎ ಖಾತಾ ನೀಡುವ ವಿಚಾರವಾಗಿ ಮಾತನಾಡಿದ ಅವರು, ಎ ಖಾತಾ ಹಾಗೂ ಬಿ ಖಾತಾದ ಬಗ್ಗೆ ಮಹತ್ವದ ವಿಷಯ ಇದೆ. ಮುಂದಿನ ವಾರ ಈ ಬಗ್ಗೆ ಸಭೆ ಮಾಡಿ, ವಿವರವಾದ ಮಾಹಿತಿಯನ್ನು ಕೊಡುತ್ತೇನೆ. ಎ ಖಾತಾ ಮತ್ತು ಬಿ ಖಾತಾ ಬಗ್ಗೆ ನಾನು ತೆಗೆದುಕೊಂಡಿರುವುದು ರೆವಲ್ಯೂಷನ್ ತೀರ್ಮಾನವಾಗಿದೆ. ಇದೆಲ್ಲ ಟೀಕೆ ಮಾಡೋರಿಗೂ ಗೊತ್ತಾಗಬೇಕು. ಟೀಕೆ ಮಾಡೋರು ಹುಡುಕಿ ಟೀಕೆ ಮಾಡಬೇಕು. ಮುಂದಿನ ವಾರ ಈ ಬಗ್ಗೆ ಮಾಹಿತಿ ಕೊಡ್ತೀನಿ ಎಂದು ತಿಳಿಸಿದ್ದಾರೆ.

Share This Article